ಸಿಎಆರ್ ಸೇನಾ ದಾಳಿಗೆ ಕನ್ನಡಿಗ ಬಲಿ
ಕ.ಪ್ರ ವಾರ್ತೆ ಕುಂದಾಪುರ ಮಾ.27
ಆಫ್ರಿಕಾದ ಸಿಎಆರ್ನ ಔಷಧಿ ಕಂಪನಿಯೊಂದರಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕಿನ ಬಳ್ಕೂರಿನ ನಿವಾಸಿ ಕೃಷ್ಣಯ್ಯ ಮೊಗವೀರ (36) ಫ್ರಾನ್ಸ್ ಸೈನ್ಯದ ದಾಳಿಗೆ ಮಂಗಳವಾರ ಮಧ್ಯಾಹ್ನ ಬಲಿಯಾಗಿದ್ದಾರೆ. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್(ಸಿಎಆರ್) ದೇಶದಲ್ಲಿ ಸೆಲ್ಕಾ ಬಂಡುಕೋರರು ಅಟ್ಟಹಾಸ ಮೆರೆಯುತ್ತಿದ್ದಾರೆ.
ಅವರನ್ನು ನಿಯಂತ್ರಿಸಲು ಫ್ರಾನ್ಸ್ ದೇಶದ ಸೈನ್ಯವನ್ನು ಕರೆಯಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ದೇಶ ಅಸುರಕ್ಷಿತ ಎಂದು ಕಳೆದ ಎಂಟು ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದ ಬಿ.ಕಾ. ಪದವೀಧರ ಕೃಷ್ಣಯ್ಯ ಭಾರತಕ್ಕೆ ಮರಳಲು ಸಜ್ಜಾಗಿದ್ದರು. ರಾಜಧಾನಿ ಬಂಗುಯಿಯ ವಿಮಾನ ನಿಲ್ದಾಣದ ಬಳಿ ವಾಹನವೊಂದರಲ್ಲಿ ತೆರಳುತ್ತಿದ್ದರು. ಇವರನ್ನು ಸೆಲ್ಕಾ ಬಂಡುಕೋರರಿಬೇಕು ಎಂದು ತಪ್ಪಾಗಿ ಭಾವಿಸಿದ ಫ್ರಾನ್ಸ್ ಸೈನಿಕರು ಇವರಿದ್ದ ವಾಹನದ ಮೇಲೆ ಗುಂಡಿನ ಮಳೆಗೆರೆದರು. ವಾಹನದಲ್ಲಿದ್ದ ಲಖನೌ ನಿವಾಸಿ ಕರಣ್ ಮತ್ತು ಕೃಷ್ಣಯ್ಯ ಮೃತಪಟ್ಟಿದ್ದಾರೆ. ನಾರಾಯಣ ಮೊಗವೀರ- ಬಾಲಮ್ಮ ಮೊಗವೀರರಿಗೆ ತಮ್ಮ ಕಿರಿಯ ಪುತ್ರನನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ಮಗ ಶವವನ್ನು ಭಾರತಕ್ಕೆ ಹೇಗೆ ಕಳುಹಿಸಲಾಗುತ್ತದೋ ಎಂದು ದಿಕ್ಕು ತೋಚದೆ ಆತಂಕಕ್ಕೆ ಒಳಗಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

