ದಕ್ಷಿಣ ಕನ್ನಡ

ಯೋಧರಿಗೆ ಶಂಕರ್ ತಂಡದ ಜಾದೂ...

Published On :

ಉಡುಪಿ: ಉಡುಪಿಯ ಶಂಕರ್ ಜಾದು ಜಗತ್ತಿನ ಪ್ರೊ. ಶಂಕರ್ ಮತ್ತು ಜ್ಯೂ. ಶಂಕರ್ ಇತ್ತೀಚೆಗೆ ರಾಜಸ್ಥಾನದ ಬಿಕನೇರ್ನ ಸೇನಾ ಯೋಧರ ನೆಲೆಯಲ್ಲಿ ಸೇನಾಧಿಕಾರಿಗಳು, ಅವರ ಕುಟುಂಬದವರು, ಮಕ್ಕಳು ಹಾಗೂ ಯೋಧರಿಗಾಗಿ ಜಾದೂ ಪ್ರದರ್ಶಿಸಿದರು.  ಬಿಕನೇರಿನಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲ್ಪಟ್ಟ ಅಪರೂಪವಾದ ಈ ಜಾದೂ ಪ್ರದರ್ಶನವನ್ನು 2000ಕ್ಕೂ ಮಿಕ್ಕಿ ಯೋಧರು ಹಾಗೂ ಅವರ ಪರಿವಾರದವರು ವೀಕ್ಷಿಸಿದರು. ಇದಲ್ಲದೆ, ಜ್ಯೂ. ಶಂಕರ್ ಅವರು ಯುದ್ಧ ಭೂಮಿಯಲ್ಲಿ ಗಾಯಗೊಂಡ ಯೋಧರಿಗೆ ಅವರ ನೆಲೆಯಲ್ಲಿ ತಮ್ಮ ಕೈಚಳಕದ 'ಕ್ಲೋಸ್ ಅಪ್ ಮ್ಯಾಜಿಕ್'ಗಳನ್ನು ಕೂಡ ಪ್ರದರ್ಶಿಸಿ ಮನರಂಜಿಸಿದರು.


ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ
ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ ವಳಕಡಮ ಎಂಬಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ನದಿಯಿಂದ  ನೀರು ಪಡೆಯುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಮೆಸ್ಕಾಂ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ರೈತ ಸಂಘದ ಕಿಸಾನ್ ಸೇನೆಯ ಜಿಲ್ಲಾ ಸಂಚಾಲಕ ರೂಪೇಶ್ ರೈ ಎಂಬವರನ್ನು ಕಡಬ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ನಿಯಮಬಾಹಿರವಾಗಿ ಹಾಗೂ ಜೀವ ಹಾನಿಯನ್ನು ಉಂಟು ಮಾಡುವ ರೀತಿಯಲ್ಲಿ ಪ್ರಧಾನ ವಿದ್ಯುತ್ ಕಂಬದಿಂದ ಅಕ್ರಮ ಸಂಪರ್ಕ ಪಡೆದು ನದಿಯಿಂದ ನೀರು ಪಂಪ್ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. ಅಕ್ರಮ ಸಂಪರ್ಕವನ್ನು ಕಡಿದು ಹಾಕುವ ಕಾರ್ಯಾಚರಣೆಯನ್ನು ಮೆಸ್ಕಾಮ್ ಇಲಾಖೆ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ರೈತ ಸಂಘದ ಮುಂದಾಳು ರೂಪೇಶ್ ರೈ ಮೆಸ್ಕಾಂ ಸಿಬ್ಬಂದಿ ದುರ್ಗಾಸಿಂಗ್  ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾಗಿರುವ ಸಿಂಗ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ತುರ್ತು ಕಾರ್ಯಾಚರಣೆ ನಡೆಸಿದ ಕಡಬ ಪೊಲೀಸರು ಉಪ್ಪಿನಂಗಡಿಯ ಹೊಟೇಲೊಂದರ ಬಳಿ ಇದ್ದ ರೂಪೇಶ್ ರೈಯನ್ನು ಬಂಧಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಇಲಾಖಾ ಕ್ರಮಕ್ಕೆ ಒಳಗಾಗಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.