ಮೋದಿ ಹೇಳಿದ್ದು..
- ನನಗೂ ಕನ್ನಡ ಕಲಿಸಿದ್ದರೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದೆ...
- ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಘೋಷಿಸಲು ಸಾಧ್ಯವಾಗದ ಕಾಂಗ್ರೆಸಿಗರಿಗೆ ಬಳಿಕ ಹೇಗೆ ಸಾಧ್ಯ.
- ಕಾಂಗ್ರೆಸ್ನದು ಒಡೆದು ಆಳುವ ನೀತಿ. ಧರ್ಮಗಳ ನಡುವೆ, ಅಣ್ಣ, ತಮ್ಮಂದಿರ ವಿಭಜಿಸಿ ಆಳುವುದೇ ಕಾಂಗ್ರೆಸ್ ರಾಜನೀತಿ.
- ದೇಶವನ್ನು ಮುಳುಗಿಸಿದ್ದಾರೆ, ಭರವಸೆ ಕೊಟ್ಟ ಒಂದೇ ಒಂದು ಮಾತು ಕಾಂಗ್ರೆಸ್ ಈಡೇರಿಸಿಲ್ಲ
ಆರೋಪ ಸಾಬೀತು ಪಡಿಸಿ: ಮಠಂದೂರು ಸವಾಲು
ಪುತ್ತೂರು: ಮೊಬೈಲ್ ಟವರ್ ನಿರ್ಮಾಣ ಮಾಡಲು ತನ್ನ ತಾಯಿಯ ಹೆಸರನ್ನೇ ದುರುಪಯೋಗಪಡಿಸಿದ್ದಾರೆ ಎಂದು ತನ್ನ ವಿರುದ್ಧ ಆರೋಪ ಮಾಡಿರುವ ಶಕುಂತಳಾ ಶೆಟ್ಟಿ ಅದನ್ನು ಸಾಬೀತು ಪಡಿಸಲಿ. ಮತ್ತೆ ನಾನು ಅದಕ್ಕೆ ಉತ್ತರ ನೀಡುತ್ತೇನೆ ಎಂದು ಪುತ್ತೂರು ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಸವಾಲು ಹಾಕಿದ್ದಾರೆ. ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಅಭಿವೃದ್ಧಿಗಾಗಿ ಸ್ಪರ್ಧೆ. ಸ್ವಾಭಿಮಾನಕ್ಕಾಗಿ ಅಲ್ಲ. ಇಲ್ಲಿ ವ್ಯಕ್ತಿ ಪ್ರತಿಷ್ಠೆ ಮುಖ್ಯವಲ್ಲ .ಸಂಘಟನೆ ವಿಚಾರವೇ ಮುಖ್ಯ ಎಂದರು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಂಡೋ ಪೀಡಿತರಿಗೆ ಕೂಡ ಪುನರ್ವಸತಿ, ಮಾಸಾಶನ ಕಲ್ಪಿಸಿಕೊಡುವ ಮೂಲಕ ಚೈತನ್ಯ ತುಂಬುವ ಯೋಜನೆ ರೂಪಿಸುವುದಾಗಿ ಅವರು ಭರವಸೆ ನೀಡಿದರು. ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಮಾಜಿ ಅಧ್ಯಕ್ಷ ರಂಗನಾಥ ರೈ ಗುತ್ತು, ಪಕ್ಷದ ವಕ್ತಾರ ಆರ್.ಸಿ.ನಾರಾಯಣ, ಮುಖಂಡ ಚಂದ್ರಶೇಖರ್ ರಾವ್ ಬಪ್ಪಳಿಗೆ ಇದ್ದರು.
ಸುರತ್ಕಲ್ ಅಭಿವೃದ್ಧಿ ಕಡೆಗಣನೆ: ಬಾವ
ಮಂಗಳೂರು: ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಮೀನು ಮಾರುಕಟ್ಟೆ, ಬಸ್ ನಿಲ್ದಾಣ, ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ಬಿಜೆಪಿ ಆಡಳಿತ ಅಭಿವೃದ್ಧಿಯನ್ನು ಕೇವಲ ಪ್ರಣಾಳಿಕೆಗೆ ಸೀಮಿತಗೊಳಿಸಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮೊಯ್ದಿನ್ ಬಾವ ಆರೋಪಿಸಿದರು. ಕಾಂಗ್ರೆಸ್ ಗೆದ್ದರೆ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಟಿಕೆಟ್ ವಿಚಾರದಲ್ಲಿ ಆರಂಭದಲ್ಲಿ ಗೊಂದಲಗಳಿದ್ದದ್ದು ನಿಜ. ಇದೀಗ ಎಲ್ಲ ಕಾಂಗ್ರೆಸಿಗರು ಒಗ್ಗಟ್ಟಿನಿಂದ ಗೆಲವಿಗೆ ದುಡಿಯುತ್ತಿದ್ದಾರೆ. ಯಾರೂ ರಾಜೀನಾಮೆ ನೀಡಿಲ್ಲ ಎಂದರು.
ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್ನಲ್ಲಿ ಗೊಂದಲ ಇಲ್ಲ, ಅಸಮಧಾನವೂ ಇಲ್ಲ. ಹೈಕಮಾಂಡ್ ಮುಂದೆ ಪ್ರಾತಿನಿಧ್ಯ ನೀಡುವುದಾಗಿ ಭರವಸೆ ನೀಡಿದೆ ಎಂದರು. ಸುರತ್ಕಲ್ನಲ್ಲಿ ಕೆಲವು ಗೂಡಾಗಳು ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರು ಹಲವು ಹಗರಣದಲ್ಲಿ ಸಿಲುಗಿದ್ದಾರೆ ಎಂದು ಟೀಕಿಸಿದರು. ನಾವು ನೇತ್ರಾವತಿ ತಿರುವು ಯೋಜನೆ ಈಗಲೂ ವಿರೋಧಿಸುತ್ತೇವೆ ಎಂದು ಸ್ಪಷ್ಟ ಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕೇಶವ ಸಾಲ್ಯಾನ್, ಪುರುಷೋತ್ತಮ ಚಿತ್ರಾಪುರ, ಹುಸೇನ್ ಕಾಟಿಪಳ್ಳ, ಅಜಿತ್ ಕುಮಾರ್, ನಜೀರ್ ಉಳ್ಳಾಲ ಇದ್ದರು.
ಗೆಲ್ಲಲು ಕಣಕ್ಕಿಳಿದಿದ್ದೇನೆ, ಬೇರೆಯವರ ಸೋಲಿಸಲಲ್ಲ
ಬಂಟ್ವಾಳ: ತಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಗೆಲ್ಲಬೇಕೆಂಬ ಒಂದೇ ಉದ್ದೇಶದಿಂದ ಹೊರತು ಬೇರೆ ಪಕ್ಷವನ್ನು ಸೋಲಿಸಲಿಕ್ಕಲ್ಲ ಎಂದು ಬಂಟ್ವಾಳ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಹೇಳಿದ್ದಾರೆ. ಚುನಾವಣಾ ಪ್ರಚಾರ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಲ್ಪಸಂಖ್ಯಾತ ಮತಗಳ ವಿಭಜನೆಯ ಭೀತಿ ಕಾಂಗ್ರೆಸ್ಗೆ ಕಾಡುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರನ್ನು ಸೋಲಿಸಬೇಕೆಂಬುದು ಅಲ್ಪಸಂಖ್ಯಾತರಿಗೆ ಚೆನ್ನಾಗಿ ಗೊತ್ತಿದೆ. ಅವರಿಗೆ ಯಾರಿಂದ ತೊಂದರೆ ಆಗಿದೆ ಎನ್ನುವುದನ್ನು ಅವರು ಮನಗಂಡಿದ್ದಾರೆ. ಬಿಜೆಪಿಯನ್ನು ಸೋಲಿಸಲು ಅಲ್ಪಸಂಖ್ಯಾತರು ನಿರ್ಧರಿಸಿದ್ದು, ಕಾಂಗ್ರೆಸ್ಗೆ ಬೆಂಬಲ ನೀಡಲಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಶಾಸಕನಾಗಿ ಇತಿಮಿತಿಯೊಳಗೆ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈ ಚುನಾವಣೆಯಲ್ಲಿ ಜನರ ಬೆಂಬಲದೊಂದಿಗೆ ಮತ್ತೆ ಗೆದ್ದು ಬರುವ ವಿಶ್ವಾಸ ಇದೆ. ಈವರೆಗೂ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದು ಮುಂದೆಯೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುವುದಾಗಿ ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

