ದಕ್ಷಿಣ ಕನ್ನಡ

ಮದ್ಯ ಅಕ್ರಮ ಮಾರಾಟ: ವಶ

Published On :

ಸುಳ್ಯ: ಐವರ್ನಾಡು ಗ್ರಾಮದ ದೇರಾಜೆ ಎಂಬಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಚೆಮ್ನೂರು ಲೋಕೇಶ ಎಂಬವರನ್ನು ಅಬಕಾರಿ ಇಲಾಖೆಯವರು ದಾಳಿ ನಡೆಸಿ ಬಂಧಿಸಿದ್ದಾರೆ. ಮಾರಾಟ ಮಾಡುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳೆ ನಾಪತ್ತೆ
ಮೂಲ್ಕಿ: ಇಲ್ಲಿನ ಐಕಳ ಪೊಂಪೈ ಕಾಲೇಜು ಬಳಿಯ ನಿವಾಸಿ ಜಯಚಂದ್ರರ ಪತ್ನಿ ವನಿತಾ ಯಾನೆ ಅನುಪ್ರಭಾ (27)ಎಂಬವರು 27ರಂದು ಬೆಳಗ್ಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಕೆಲಸಕ್ಕೆಂದು ಹೋದವರು ವಾಪಾಸ್ ಮನೆಗೆ ಬಾರದೆ ಕಾಣಿಯಾಗಿದ್ದಾರೆ. ಈ ಬಗ್ಗೆ ಜಯಚಂದ್ರ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ವನಿತಾ 5 ಅಡಿ 4 ಇಂಚು ಎತ್ತರವಿದ್ದು, ಗೋಧಿ ಮೈಬಣ್ಣ, ಸಾಧಾರಣ ಶರೀರ, ಗಿಡ್ಡ ಜಡೆ ಹೊಂದಿದ್ದ ಕಪ್ಪು ಬಣ್ಣದ ಚೂಡಿದಾರ್, ಬಿಳಿ ಟಾಪ್ ಧರಿಸಿದ್ದು ಕನ್ನಡ, ಕೊಂಕಣೆ, ತುಳು ಮಾತನಾಡ ಬಲ್ಲವರಾಗಿದ್ದಾರೆ. ಮಾಹಿತಿ ಸಿಕ್ಕಿದಲ್ಲಿ ಮೂಲ್ಕಿ ಪೊಲೀಸ್ ಠಾಣೆ ದೂ. 0824- 2290533 ಅನ್ನು ಸಂಪರ್ಕಿಸುವಂತೆ ಮೂಲ್ಕಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

ಅಲ್ಬಾಡಿ ಗ್ರಾಮದ ಯುವತಿ ಕಾಣೆ
ಬ್ರಹ್ಮಾವರ: ಇಲ್ಲಿನ ಅಲ್ಬಾಡಿ ಗ್ರಾಮದಿಂದ ಯುವತಿಯೊಬ್ಬಳು ಕಾಣೆಯಾದ ಘಟನೆ ಶನಿವಾರ ನಡೆದಿದೆ. ಕಾಣೆಯಾದ ಯುವತಿ ಜ್ಯೋತಿ. ಈಕೆ ಸಂಜೀವ ಆರ್ಡಿ ಎಂಬವರ ಮಗಳು. ತನ್ನ ಕೊಕ್ಕರ್ಣೆಯ ದೊಡ್ಡಪ್ಪನ ಮನೆಯಿಂದ ಆರ್ಡಿಯಲ್ಲಿರುವ ತನ್ನ ಮನೆಗೆ ಬಸ್ಸಿನಲ್ಲಿ ಹೋದವಳು, ಅತ್ತ ಮನೆಗೆ ಹೋಗದೆ,  ಹಿಂದಕ್ಕೆ ಬಾರದೇ ಕಾಣೆಯಾಗಿರುತ್ತಾಳೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಂಗಡಿಗೆ ನುಗ್ಗಿದ ಟಿಪ್ಪರ್: ಹಾನಿ
ಕುಂದಾಪುರ: ಕೋಟೇಶ್ವರ ಸಮೀಪ ವಕ್ವಾಡಿಯಲ್ಲಿನ ಆನೆಗುಡ್ಡೆ ಕ್ರಾಸ್ ಬಳಿ ಎದುರಿನಿಂದ ಬರುತ್ತಿರುವ ಸೈಕಲ್ ಸವಾರನನ್ನು ತಪ್ಪಿಸಲು ಹೋಗಿ ಮಿನಿ ಟಿಪ್ಪರ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಅಂಗಡಿ ಕೋಣೆಗೆ ನುಗ್ಗಿ ಹಾನಿ ಸಂಭವಿಸಿದ ಘಟನೆ ಶನಿವಾರ ನಡೆದಿದೆ. ಮೂಡು ಗೋಪಾಡಿ ಉದ್ಯಮಿ ಪ್ರಭಾಕರ್ ಶೆಟ್ಟಿ ಅವರಿಗೆ ಸೇರಿದ ಕಟ್ಟಡಕ್ಕೆ  ಟಿಪ್ಪರ್ ನುಗ್ಗಿದ ಪರಿಣಾಮ ಅಂಗಡಿ ಕೋಣೆ ಜಖಂಗೊಂಡು ಎದುರಿನ ಮಾಡು ಹಾಗೂ ಗೋಡೆ ಕುಸಿದು ಬಿದ್ದಿದೆ. ಟಿಪ್ಪರ್ ಚಾಲಕ ಮತ್ತು ಸಹ ಪ್ರಯಾಣಿಕ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಕ್ಷಿಣ ಕನ್ನಡ: 900 ಅಧಿಕಾರಿಗಳು
ಮಂಗಳೂರು: ಜಿಲ್ಲೆಯಲ್ಲಿ ಮತಗಟ್ಟೆಗಳಿಗೆ 900 ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬರು ಪಿಆರ್‌ಒ, ಎಪಿಆರ್‌ಒ, ಸಹಾಯಕ ಪಿಒ ಇರುತ್ತಾರೆ. ಪ್ರತಿ ಮತಗಟ್ಟೆಗೂ ಒಬ್ಬರು ವೀಕ್ಷಕರನ್ನು ನೇಮಿಸಲಾಗಿದೆ. ಚುನಾವಣೆ ಪಿಆರ್  1 ಸಾವಿರ, ಎಪಿಆರ್‌ಒಗೆ 700 ಸಹಾಯಕ ಪಿಒ 700 ಭತ್ಯೆ ಪಡೆಯಲಿದ್ದಾರೆ. 

1038 ಮತಗಟ್ಟೆಗಳಲ್ಲೂ ಬಿಗಿ ಬಂದೋಬಸ್ತ್
ಉಡುಪಿ: ಜಿಲ್ಲೆಯ 5 ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನಕ್ಕೆ ಜಿಲ್ಲಾಡಳಿತ ಎಲ್ಲಾ ಸಿದ್ದತೆಗಳನ್ನು ನಡೆಸಿದೆ. ಜಿಲ್ಲೆಯಲ್ಲಿ ಒಟ್ಟು 1038 ಮತಗಟ್ಟೆಗಳಿದ್ದು, ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ. ಸೂಕ್ಷ್ಮ, ಅತಿಸೂಕ್ಷ ಹಾಗೂ ನಕ್ಸಲ್ ಬಾಧಿತ ಮತಗಟ್ಟೆಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅಲ್ಲಿ ಪ್ಯಾರಾಮಿಲಿಟರಿ ಪಡೆ ನಿಯೋಜಿಸಲಾಗಿದೆ. ಚುನಾವಣೆ ಶಾಂತಿಯುತವಾಗಿ ಹಾಗೂ ಮುಕ್ತವಾಗಿ ನಡೆಸಲು ಪೊಲೀಸ್ ಅಧಿಕಾರಿಗಳು, ಮೀಸಲು ಪಡೆ, ಅರೆಸೇನಾ ಪಡೆ ಸೇರಿದಂತೆ 2580 ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಅಕ್ರಮಗಳನ್ನು ತಡೆಗಟ್ಟಲು ವಿಶೇಷ ವೀಕ್ಷಕರ ತಂಡಗಳು ಕಣ್ಗಾವಲಿರಿಸಿವೆ. ಎಲ್ಲಾ ಮತದಾರರ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಸ್ವೀಪ್ ಕಾರ್ಯಕ್ರಮವನ್ನು ನಡೆಸಿದ್ದು, ಇಂದು (ಭಾನುವಾರ) ಕೂಡ ಮತದಾರರಲ್ಲಿ ಜಾಗೃತಿ ಮೂಡಿಸಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈ ಬಾರಿ ಕಳೆದ ಚುನಾವಣೆಗಿಂತ ಹೆಚ್ಚಿನ ಶೇಕಡಾವಾರು ಮತದಾನವನ್ನು ನಿರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.