ಸುದ್ದಿ ಸಂಕ್ಷೇಪ
ಟೆಂಪೋ ಡಿಕ್ಕಿ: ಸಹ ಸವಾರ ಬಾಲಕ ಸಾವು
ಮಂಗಳೂರು: ದೀಪಾವಳಿ ಹಬ್ಬದ ಖರೀದಿಗೆ ತೆರಳಿದ್ದ ವೇಳೆ ಬಾಲಕ ಮೃತಪಟ್ಟ ಘಟನೆ ಶುಕ್ರವಾರ ವರದಿಯಾಗಿದೆ. ಉಳ್ಳಾಲ ರಾಜೇಶ್ ಎಂಬವರ ಪುತ್ರ ಸಾತ್ವಿಕ್(10)ಎಂಬಾತನೇ ಮೃತಪಟ್ಟ ನತದೃಷ್ಟ. ತಂದೆ ಜತೆ ಸ್ಕೂಟರ್ನಲ್ಲಿ ಬಂದರಿನ ಅಜೀಜುದ್ದೀನ್ ರಸ್ತೆಯಲ್ಲಿರುವ ಅತ್ತೆ ಮನೆಗೆ ಹೋಗುತ್ತಿದ್ದನು. ಅನ್ಸಾರಿ ರಸ್ತೆ ಬಳಿ ಹಿಂದಿನಿಂದ ಸ್ಕೂಟರ್ಗೆ ಟೆಂಪೋ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡ ಸಾತ್ವಿಕ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಸಂಚಾಪಿ ಪಶ್ಚಿಮ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕುಡಿತಚಟ ತಂದ ಸಾವು
ಮಂಗಳೂರು: ಆಹಾರ ಸೇವಿಸದೆ ಕುಡಿತವನ್ನೇ ಚಟವಾಗಿಸಿ ವಿಪರೀತ ಪಾನಮತ್ತ ತಾಂತ್ರಿಕ ಕಾಲೇಜಿನ ಉಪನ್ಯಾಸಕ ವಿಶಾಲ್ ನಾಯಕ್(26)ಅಸಹಜವಾಗಿ ಸಾವಿಗೀಡಾದ ಘಟನೆ ಶುಕ್ರವಾರ ವರದಿಯಾಗಿದೆ. ಕೆಂಜಾರಿನ ತಾಂತ್ರಿಕ ಕಾಲೇಜಿನಲ್ಲಿ ಉಪನ್ಯಾಸಕನಾದ ಈತ ವಿಪರೀತ ಕುಡಿತದ ಚಟ ಬೆಳೆಸಿಕೊಂಡಿದ್ದ. ಮೂಲತಃ ಉಡುಪಿ ಬನ್ನಂಜೆ ನಿವಾಸಿಯಾದ ಈತ ನಗರದ ಬಿಜೈನಲ್ಲಿ ವಸತಿಗೃಹ ಹೊಂದಿದ್ದ. ಕುಡಿದು ಅಸ್ವಸ್ಥಗೊಂಡು ಕುಸಿದುಬಿದ್ದು ಸಾವಿಗೀಡಾಗಿದ್ದಾಗಿ ಉರ್ವ ಪೊಲೀಸರಿಗೆ ದೂರು ನೀಡಲಾಗಿದೆ.
ಬಾಲಕಗೆ ಗಾಯ
ಮಂಗಳೂರು: ಕಣ್ಣೂರಿನಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಬಾಲಕ ನಿಜಾಮುದ್ದೀನ್(9)ಗಾಯಗೊಂಡ ಘಟನೆ ಶುಕ್ರವಾರ ವರದಿಯಾಗಿದೆ. ಗಂಭೀರ ಗಾಯಗೊಂಡ ಈತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಾರ್ನಿಂದ ಕಳವು
ಮಂಗಳೂರು: ಮುಡಿಪಿನ ಮಂಗಳಾ ಬಾರ್ನಿಂದ ರು. 1.50 ಲಕ್ಷ ನಗದು ಕಳವಾದ ಘಟನೆ ಶುಕ್ರವಾರ ವರದಿಯಾಗಿದೆ. ಗುರುವಾರ ರಾತ್ರಿ ಬಾರ್ಗೆ ನುಗ್ಗಿದ ಕಳ್ಳರು ಡ್ರಾಯರ್ನಲ್ಲಿದ್ದ ನಗದು ಕಳವು ಮಾಡಿದ್ದಾಗಿ ಮೆನೇಜರ್ ಪ್ರದೀಪ್ ಕುಮಾರ್ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮೋದಿ ಬ್ಯಾನರ್ಗೆ ಕಿಡಿಗೇಡಿಗಳಿಂದ ಹಾನಿ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಇಳಂತಿಲ ಗ್ರಾಮದ ನೇಜಿಗಾರ್ ಎಂಬಲ್ಲಿ ಅಳವಡಿಸಲಾದ ಮೋದಿ ಬ್ಯಾನರ್ ಅನ್ನು ದುಷ್ಕರ್ಮಿಗಳು ಹಾನಿಗೊಳಿಸಿದ ಘಟನೆ ವರದಿಯಾಗಿದೆ. ಮೋದಿ ಅಭಿಮಾನಿ ಬಳಗದಿಂದ ಹಾಕಲಾಗಿದ್ದ ಬ್ಯಾನರ್ ಅನ್ನು ಬುಧವಾರ ರಾತ್ರಿ ಯಾರೋ ದುಷ್ಕರ್ಮಿಗಳು ಹಾನಿಗೊಳಿಸುತ್ತಿದ್ದಾಗ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಬರುತ್ತಿದ್ದನ್ನು ಕಂಡು ದುಷ್ಕರ್ಮಿಗಳು ಅರ್ಧಕ್ಕೇ ನಿಲ್ಲಿಸಿ ಪರರಾಯಾಗಿದ್ದಾರೆ.
ದೋಣಿ ಮಗುಚಿ ಯುವಕ ಸಮುದ್ರ ಪಾಲು
ಗಂಗೊಳ್ಳಿ: ಸಮುದ್ರ ಅಲೆಯ ಹೊಡೆತಕ್ಕೆ ದೋಣಿ ಮಗುಚಿ ಬಿದ್ದು ಅದರಲ್ಲಿದ್ದ ಯುವಕ ಮೃತಪಟ್ಟ ಘಟನೆ ಶುಕ್ರವಾರ ಗಂಗೊಳ್ಳಿ ಹೌಸ್ ಬಳಿ ಶುಕ್ರವಾರ ನಡೆದಿದೆ. ಕಿಶನ್ ಪಟೇಲ್(17) ಮೃತ ಯುವಕ. ಈತ ತನ್ನ ತಂದೆ ಗಂಗಾಧರ ಪಟೇಲ್ ಅವರೊಂದಿಗೆ ಮೀನುಗಾರಿಕೆ ಮುಗಿಸಿ ವಾಪಸ್ ಬರುತ್ತಿದ್ದಾಗ ಭಾರಿ ಅಲೆಯ ಹೊಡೆತಕ್ಕೆ ದೋಣಿ ಮಗುಚಿ ಬಿದ್ದು ಇಬ್ಬರೂ ನೀರಿಗೆ ಬಿದ್ದಿದ್ದರು. ಗಂಗಾಧರ ಪಟೇಲ್ ದೋಣಿಯನ್ನು ಹಿಡಿದುಕೊಂಡು ತೀರ ಸೇರಿದ್ದರು. ಆದರೆ ಕಿಶನ್ ನೀರಲ್ಲಿ ಕೊಚ್ಚಿ ಹೋಗಿದ್ದು ಶವ ಪತ್ತೆಯಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೀಮೆಎಣ್ಣೆ ಸೇವಿಸಿ ಅಸ್ವಸ್ಥಗೊಂಡಿದ್ದ ಮಹಿಳೆ ಸಾವು
ವಿಟ್ಲ; ಸೀಮೆಎಣ್ಣೆ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ. ವಿಟ್ಲ ಕಸಬಾ ಗ್ರಾಮದ ಬೊಬ್ಬೆಕೇರಿ ನಿವಾಸಿ ಲಕ್ಷ್ಮೀ(45) ಮೃತಪಟ್ಟವರು. ಇವರು ಮೂರು ವರ್ಷದಿಂದ ರಕ್ತದೊತ್ತಡದಿಂದ ಬಳಲುತ್ತಿದ್ದರು. ಈ ಬಗ್ಗೆ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗಿರಲಿಲ್ಲ. ಇದರಿಂದ ಮಾನಸಿಕವಾಗಿ ಮನನೊಂದ ಅವರು ಅ.28ರಂದು ತಮ್ಮ ಮನೆಯಲ್ಲಿ ಸೀಮೆಎಣ್ಣೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

