ಸುದ್ದಿ ಸಂಕ್ಷೇಪ
8ರಿಂದ ಒಡೆಯರ್ ಸ್ಮರಣಾರ್ಥ ಸಂಗೀತೋತ್ಸವ
ಮೈಸೂರು: ಜಯಚಾಮರಾಜೇಂದ್ರ ಒಡೆಯರ್ ಸ್ಮರಣಾರ್ಥ ಶ್ರೀವಿದ್ಯಾ ಸಂಗೀತೋತ್ಸವ ನ.8 ಮತ್ತು 9ರಂದು ಮೈಸೂರು ವಿವಿಯ ಲಲಿತ ಕಲೆಗಳ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಮಳವಳ್ಳಿ ನಾರಾಯಣಸ್ವಾಮಿ ಮತ್ತು ಇಂದಿರಮ್ಮ ಕುಟುಂಬದ ದತ್ತಿಯಡಿ ಆಯೋಜಿಸಿರುವ ಈ ಕಾರ್ಯಕ್ರಮವನ್ನು 8ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಉದ್ಘಾಟಿಸುವರು. ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸುವರು. ದತ್ತಿಯ ಸಂಸ್ಥಾಪಕರಾದ ಮಳವಳ್ಳಿ ಎಸ್. ನಾರಾಯಣಸ್ವಾಮಿ, ಇಂದಿರಮ್ಮ ನಾರಾಯಣಸ್ವಾಮಿ ಹಾಗೂ ಮಳವಳ್ಳಿ ಪರಿಷತ್ತಿನ ಟ್ರಸ್ಟಿ ಪ್ರೊ. ಶಿವರಾಂ ಮಳವಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬೆಳಗ್ಗೆ 11.30ಕ್ಕೆ ರಾಗ ಮತ್ತು ತಾಳ ಕುರಿತು ವಿದ್ವಾನ್ ಶಂಕರ್ ಪ್ರಾತ್ಯಕ್ಷಿಕೆಯನ್ನೂ ಹಾಗೂ ಸಂಜೆ 6ಕ್ಕೆ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ವೃಂದದವರು ಅಮೋಘ ಲಯ ಲಹರಿ ಕಾರ್ಯಕ್ರಮ ನಡೆಸಿಕೊಡುವರು. 9ರಂದು ಬೆಳಗ್ಗೆ 10ಕ್ಕೆ ನಡೆಯುವ ವಿಚಾರ ಸಂಕಿರಣದಲ್ಲಿ ಪ್ರೊ. ಎಚ್.ಎಲ್. ಚಂದ್ರಶೇಖರ್ ಹಾಗೂ ವಿದ್ವಾನ್ ಬಳ್ಳಾರಿ ರಾಘವೇಂದ್ರ ಅವರು ಭಾಗವಹಿಸುವರು. ಸಂಜೆ 5ಕ್ಕೆ ಮೈಸೂರು ವಿವಿ ಕುಲಸಚಿವ ಪ್ರೊ. ಸಿ. ಬಸವರಾಜು ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದೆ.
ಜೋಕಾಲಿಗೆ ಸೀರೆ ಸಿಕ್ಕಿ ಬಾಲಕಿ ಸಾವು
ಹೊಳಲ್ಕೆರೆ: ಸೀರೆ ಕಟ್ಟಿಕೊಂಡು ಜೋಕಾಲಿ ಆಡುತ್ತಿದ್ದ ಬಾಲಕಿಗೆ ಅದೇ ಸೀರೆ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಮೃತಪಟ್ಟಿದ್ದಾಳೆ. ಜೋಕಾಲಿಯಾಡುವಾಗ ಉಸಿರುಗಟ್ಟಿ ಸುಸ್ತಾಗಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃಪಟ್ಟಿರುವ ಘಟನೆ ತಾಲೂಕಿನ ಮೇಗಳಕೊಟ್ಟಿಗೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ಸದಾಶಿವಪ್ಪ ಎಂಬುವರ ಮಗಳಾದ ಮಂದಾರ (14) ಎಂಬ ಬಾಲಕಿ ತನ್ನ ಮನೆಯ ಹತ್ತಿರ ಜೋಕಾಲಿ ಆಡುತ್ತಿರುವಾಗ ಈ ಅವಘಡ ಸಂಭವಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾಗ ಮೃತಪಟ್ಟಿದ್ದಾಳೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

