ಆರ್ಎಸ್ಎಸ್ ದೇಶ ಒಡೆಯುತ್ತಿದೆ: ಅಮಲ ರಾಮಚಂದ್ರ
ಪುತ್ತೂರು: ದೇಶದ ಸಂಸ್ಕೃತಿಯ ರಕ್ಷಕರು ತಾವು ಎಂದು ಹೇಳಿಕೊಂಡು ರಾಷ್ಟ್ರ ಭಕ್ತಿಯ ಸೋಗಿನಲ್ಲಿ ನೈಜ ಸಂಸ್ಕೃತಿಯನ್ನು ಬುಡಮೇಲುಗೊಳಿಸುವ ಮೂಲಕ ಕೋಮುಗಲಭೆಗಳನ್ನು ಪ್ರಚೋದಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಇದರ ಪರಿವಾರ ಸಂಘಟನೆಗಳು ದೇಶವನ್ನು ಭಾವನಾತ್ಮಕವಾಗಿ ಒಡೆಯುವ ಕೆಲಸ ಮಾಡುತ್ತಿವೆ ಎಂದು ಸೇವಾದಳದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮಲ ರಾಮಚಂದ್ರ ಹೇಳಿದರು.
ಅವರು ನ. 14ರಂದು ಕಾಂಗ್ರೆಸ್ ಸೇವಾದಳದ ವತಿಯಿಂದ ನಡೆಯಲಿರುವ ಒಂದು ದಿನದ ಕಾರ್ಯಾಗಾರದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿ, ಗಾಂಧಿ ಚಿಂತನೆ ಈಗ ಜನತೆಯಿಂದ ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸೇವಾದಳದ ಮೂಲಕ ಯುವ ಜನಾಂಗಕ್ಕೆ ದೇಶಭಕ್ತಿಯ ಬಗ್ಗೆ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗುವುದು ಎಂದರು.
ಓಟಿನ ಬೇಟೆಯ ಸಂಚು: ಸಂಘ ಪರಿವಾರ ಪ್ರತಿಪಾದಿಸುವ ಅಖಂಡ ಭಾರತ, ರಾಮಮಂದಿರ, ಗೋರಕ್ಷಣೆ, ಲವ್ ಜಿಹಾದ್ ಮೊದಲಾದವುಗಳು ಸಂಪೂರ್ಣ ಕಾಲ್ಪನಿಕವಾದ ವಿಚಾರಗಳಾಗಿವೆ. ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಮತ್ತು ಓಟಿನ ಬೇಟೆಗಾಗಿ ನಡೆಸುತ್ತಿರುವ ಸಂಚು ಇದಾಗಿದೆ ಎಂದು ಹೇಳಿದರು.
ಯುವಕರ ಬ್ರೈನ್ವಾಶ್: ಒಂದೆಡೆಯಿಂದ ಆರ್ಎಸ್ಎಸ್ ದೇಶದ ಜಾತ್ಯತೀತ ಚೌಕಟ್ಟಿಗೆ ಬಿರುಕು ಮೂಡಿಸುವ ಪ್ರಯತ್ನದಲ್ಲಿ ತೊಡಗಿದ್ದರೆ ಮತ್ತೊಂದೆಡೆ ಕೆಎಫ್ಡಿ, ಪಿಎಫ್ಐ ಹಾಗೂ ಸಿಮಿಗಳಂತಹ ಸಂಘಟನೆಗಳು ಮುಸ್ಲಿಂರಲ್ಲಿ ಕೋಮುಭಾವನೆಗಳನ್ನು ಪ್ರಚೋದಿಸುವ ಕೆಲಸ ಮಾಡುತ್ತಿವೆ. ಈ ಎಲ್ಲಾ ಸಂಘಟನೆಗಳು ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಎಲ್ಲಾ ಧರ್ಮದಲ್ಲಿಯೂ ದಾರಿ ತಪ್ಪಿದ ಜನತೆ ಇದ್ದಾರೆ ಎಂದು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಜೋಕಿಂ ಡಿ' ಸೋಜ, ಜಿಲ್ಲಾ ಸೇವಾದಳ ಘಟಕದ ಸಂಘಟನಾ ಕಾರ್ಯದರ್ಶಿ ಇಸಾಕ್ ಸಾಲ್ಮರ, ಜಿಲ್ಲಾ ಘಟಕದ ಸದಸ್ಯ ಜತ್ತಪ್ಪ ಗೌಡ, ಸದಸ್ಯ ಉದಯಕುಮಾರ್ ಸರ್ವೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

