ಕುರಾನ್ ಭಾಷಾಂತರ ಕೃತಿ ಮುಟ್ಟುಗೋಲಿಗೆ ಆಗ್ರಹ
ಮಂಗಳೂರು: ವಿಗ್ರಹ ಪೂಜೆಗೆ ಪ್ರೇರಣೆ ನೀಡಿದ ಕುರಾನ್ ಭಾಷಾಂತರ ಕೃತಿಯನ್ನು ಮುಟ್ಟುಗೋಲು ಹಾಕಿ ಕ್ರಮ ಕೈಗೊಳ್ಳುವಂತೆ ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಮಂಗಳೂರು ಘಟಕ ಸರ್ಕಾರವನ್ನು ಆಗ್ರಹಿಸಿದೆ. ಸಲಫಿ ಸಂಘಟನೆಯಿಂದ ಉಚ್ಚಾಟಿಸಲ್ಪಟ್ಟ ಝಕಾರಿಯಾ ಎಂಬಾತನ ಅನುಯಾಯಿಗಳು ಈಚೆಗೆ ಹೊರತಂದ ಕುರಾನ್ ಕನ್ನಡ ಭಾಷಾಂತರದ 502ನೇ ಪುಟದಲ್ಲಿ 16ನೇ ಅಧ್ಯಾಯದ 106ನೇ ಸೂಕ್ತಕ್ಕೆ ನೀಡಿದ ಟಿಪ್ಪಣಿಯಲ್ಲಿ 'ಹೃದಯದಲ್ಲಿ ದೃಢವಾದ ವಿಶ್ವಾಸವಿದ್ದು, ಓರ್ವನು ಬಲವಂತಕ್ಕೊಳಗಾಗಿ ಅವಿಶ್ವಾಸ ಘೋಷಣೆ ಮಾಡಿದರೆ ಅಥವಾ ವಿಗ್ರಹ ಪೂಜೆ ಮಾಡಿದರೆ ಅವನು ಅಪರಾಧಿಯಲ್ಲ' ಎಂದು ಬರೆಯಲಾಗಿದೆ. ಸಲಫಿ ಪಬ್ಲಿಷಿಂಗ್ ಎಂಬ ಹೆಸರಿನಲ್ಲಿ ಪ್ರಕಟಿಸಲಾದ ಈ ಭಾಷಾಂತರವು ಪವಿತ್ರ ಕುರಾನ್ನ ತತ್ವಾದರ್ಶನಗಳಿಗೆ ಅಪಚಾರ ಎಸಗಿದಂತಾಗಿದೆ. ಮುಸ್ಲಿಮರ ಧಾರ್ಮಿಕ ಭಾವನೆ ಹೊಸಕಿಹಾಕುವ ಷಡ್ಯಂತರ ಇದರ ಹಿಂದಿದೆ. ಆದ್ದರಿಂದ ಸರ್ಕಾರ ಈ ಕೃತಿಯನ್ನು ಮುಟ್ಟುಗೋಲು ಹಾಕಿ ಅನುವಾದಕರು ಮತ್ತು ಪ್ರಕಾಶಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಮೊಹರಂ: ಜಿಲ್ಲೆಯಲ್ಲಿ ಇಂದೇ ರಜೆ
ಮಂಗಳೂರು: ಮೊಹರಂ ರಜೆಯನ್ನು ರಾಜ್ಯ ಸರ್ಕಾರ ನ. 14 ರ ಬದಲಾಗಿ ನ. 15ಕ್ಕೆ ಘೋಷಿಸಿದೆ. ಆದರೆ ದ.ಕ. ಜಿಲ್ಲೆಯಲ್ಲಿ ನ. 14 ರಂದೇ ಮುಸ್ಲಿಂ ಬಾಂಧವರು ಮೊಹರಂ ಆಚರಣೆ ನಡೆಸುವುದರಿಂದ 14 ರಂದೇ ರಜೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನರಿಗೆ ನ. 14ರಂದು ಮೊಹರಂ ರಜೆಗೆ ಅನುಮತಿ ನೀಡಬಹುದು ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

