ದಕ್ಷಿಣ ಕನ್ನಡ

ಬೆಳ್ತಂಗಡಿಗೆ ಗುಜರಾತ್ ಪರಿಣತರ ತಂಡ ಭೇಟಿ

Published On :

ಬೆಳ್ತಂಗಡಿ: ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿರುವ ಗ್ರಾಮೀಣಾಭಿವೃದ್ಧಿ ಮಾದರಿಗಳ ಅಧ್ಯಯನವನ್ನು ನಡೆಸಿ ಗುಜರಾತ್ ಸರ್ಕಾರಕ್ಕೆ ವರದಿ ಸಲ್ಲಿಸುವ ನಿಟ್ಟಿನಲ್ಲಿ ಗುಜರಾತ್ ವಿವಿಧ ಪ್ರದೇಶಗಳ ಅನೇಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 15 ಮಂದಿ ಪರಿಣತರ ತಂಡ ಶುಕ್ರವಾರ ಬೆಳ್ತಂಗಡಿಗೆ ಭೇಟಿ ನೀಡಿದರು.
ಕೇಂದ್ರ ಸರ್ಕಾರದ ಡೈರಕ್ಟರೇಟ್ ಆಫ್ ಪಬ್ಲಿಸಿಟಿ, ಮಾಹಿತಿ ಮತ್ತು ಪ್ರಚಾರ ಸಚಿವಾಲಯ ಪ್ರಾಯೋಜಿಸುತ್ತಿರುವ ಭಾರತ ದರ್ಶನ ಯೋಜನೆಯಡಿಯಲ್ಲಿ ತಂಡ ಕರ್ನಾಟಕದಲ್ಲಿ 10 ದಿನಗಳ ಪ್ರವಾಸ ಕಾರ್ಯ ನಡೆಸಲಿದೆ. ಶುಕ್ರವಾರ ಬೆಳ್ತಂಗಡಿಗೆ ಆಗಮಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರುಡ್ಸೆಟ್ ಉಜಿರೆ, ಲಾಯಿಲದ ಸಿರಿ ಗ್ರಾಮೋದ್ಯೋಗ ತರಬೇತಿ ಕೇಂದ್ರ, ಓಡಿಲ್ನಾಳ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಬಳಿಕ ಸಿರಿ ಸಂಸ್ಥೆಯಲ್ಲಿ ಮಾಧ್ಯಮದವರೊಂದಿಗೆ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು.
ಭಾರತ ದರ್ಶನ ಕಾರ್ಯಕ್ರಮ ಸಂಯೋಜಕ ಎನ್.ಎಸ್. ಮೆಶ್ರಾಮ್, ಮಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ಕೆ.ಪಿ. ರಾಜೀವನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕಿ ಮಮತಾ ರಾವ್, ಸಿರಿ ಸಂಸ್ಥೆಯ ನಿರ್ದೇಶಕಿ ಮನೋರಮಾ ಭಟ್, ಶ್ರೀಕಾಂತ್, ಅಧ್ಯಯನ ತಂಡದ ಸದಸ್ಯ ದೇವೇಂದ್ರ ತ್ರಿವೇದಿ, ಮಾದೀನ್ ಶೇಕ್, ಯಾಸ್ಮಿನ್ ಬಲಪಾರ್ಯ, ನೀತಾ ನಿಭಾರೆ, ಭೀಕಾ ಗಮೀಟ್, ಜಯೇಶ್ ದೋಷಿ, ಹಾರೂನ್ ನಿಹಾಲ್, ರಮೇಶ್ ತರಲ್, ಬಾಬು ಲಾಲ್ ಜೋಗಲ್, ಭದ್ರೇಶ್ ಗಜೇರಾ, ಬಾಬು ವಜಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.