ಉತ್ತರಾಖಂಡ ಜಲಪ್ರಳಯ: ಜನಕ್ಕೆ ಮಾನಸಿಕ ಆಘಾತ
ಮಂಗಳೂರು: ರೋಶನಿ ನಿಲಯದ ಎಂಎಸ್‌ಡಬ್ಲ್ಯೂ 13 ವಿದ್ಯಾರ್ಥಿಗಳ ತಂಡ ಉತ್ತರಾಖಂಡದ 40 ಹಳ್ಳಿಗಳಿಗೆ ಭೇಟಿ ನೀಡಿ 1 ತಿಂಗಳ ಅಧ್ಯಯನ ನಡೆಸಿದ್ದು, 120 ಮಂದಿಗೆ ಮಾನಸಿಕ ಚಿಕಿತ್ಸೆಯ ಅಗತ್ಯತೆಯ 'ಇಂಪಾಕ್ಟ್ ಆಫ್ ಇವೆಂಟ್ ಸ್ಕೇಲ್' ಎಂಬ ವರದಿಯನ್ನು ಉತ್ತರಾಖಂಡ ನೋಡಲ್ ಅಧಿಕಾರಿಗಳಿಗೆ ಸಲ್ಲಿಸಿದೆ.
ಬೆಂಗಳೂರು ನಿಮ್ಹಾನ್ಸ್ ಸಹಯೋಗದಲ್ಲಿ 13 ವಿದ್ಯಾರ್ಥಿಗಳ ತಂಡ ನಾಲ್ಕು ತಂಡದಂತೆ ಕಾಳಿಮಠ, ಗುಪ್ತಕಾಶಿ, ಉಕ್ಕಿಮಠ, ಅಗಸ್ತಮುನಿ, ಪ್ಹಾಟಾ ಪ್ರದೇಶಗಳ 40 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದೆ. ಇಲ್ಲಿನ ಪ್ರಾಕೃತಿಕ ಸ್ಥಿರತೆಗಿಂತಲೂ ಜನರ ಮನಸ್ಥಿತಿ ಇನ್ನೂ ಭೀಕರ. ಪ್ರವಾಹದ ಆಘಾತದಿಂದ ಹೊರಬಂದಿಲ್ಲ ಎಂದು ಆಪ್ತ ಸಮಾಲೋಚಕ ತಂಡದ ವಿದ್ಯಾರ್ಥಿ ನಾಯಕ ಚೊಂಗತಮ್ ಒಡಿಸ್ಸಿ ಸಿಂಗ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿ ಮಾತನಾಡಿದ ಅವರು, ಒಬ್ಬ 7 ವರ್ಷದ ಮಗು ಈಗಲೂ ಶಾಲೆಯಲ್ಲಿ ಪ್ರವಾಹದ ದೃಶ್ಯವನ್ನು ನೆನಪಿಸುತ್ತಾ ಕನವರಿಸುತ್ತಾ ಬೆಚ್ಚಿ ಬೀಳುತ್ತಿದೆ. ಸಣ್ಣ ಗಾಳಿ, ಮಳೆ ಬಂದರೂ ಪ್ರವಾಹ ಬಂತೆಂದು ಭಾವಿಸಿ ಹೆದರುತ್ತಿದ್ದಾನೆ ಎಂದರು. ಈ ಬಾಲಕ ಪ್ರವಾಹದ ಸಂದರ್ಭದಲ್ಲಿ ತನ್ನ ಕಣ್ಣೆದುರೇ ಎಲ್ಲ ಕೊಚ್ಚಿ ಹೋಗುತ್ತಿರುವುದನ್ನು ಕಂಡು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಾನೆ. ನಮ್ಮ ತಂಡ ಭೇಟಿ ನೀಡಿದ ಸಂದರ್ಭದಲ್ಲಿಯೂ ವಿಚಿತ್ರವಾಗಿ ವರ್ತಿಸುತ್ತಿದ್ದ ಎಂದರು.
ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರು ಸುಮಾರು 15 ರಿಂದ 45 ವರ್ಷದೊಳಗಿನ ಯುವಕರು ಎಂಬ ಮಾಹಿತಿ ಅಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿದು ಬಂದಿದೆ ಎಂದರು.
ವಿದ್ಯಾರ್ಥಿಗಳಾದ ಸಲ್ಮಾನ್ ಖಾನ್, ವಿದ್ಯಾರ್ಥಿ ಅವಿನಂದ್ ಅಚ್ಚನಹಳ್ಳಿ ಅವರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

