ದಕ್ಷಿಣ ಕನ್ನಡ

ಉದ್ಯಮಿ ನೇಣಿಗೆ ಶರಣು

Published On :

ಬಂಟ್ವಾಳ: ಉದ್ಯಮಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗೋಳ್ತಮಜಲು ಗ್ರಾಮದಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಇಲ್ಲಿನ ಕೋಲ್ಕೆರೆ ನಿವಾಸಿ, ಬಿ.ಸಿ. ರೋಡಿನಲ್ಲಿ ಹಲವು ವರ್ಷಗಳಿಂದ ಪ್ರಭು ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುತ್ತಿದ್ದ ವಾಸುದೇವ ಪ್ರಭು(55) ಆತ್ಮಹತ್ಯೆ ಮಾಡಿಕೊಂಡವರು. ವಿಟ್ಲ ಸಮೀಪದ ಕಡಂಬು ಕಲ್ಲುರ್ಟಿ ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಇವರು, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಗುರುವಾರ ಬೆಳಿಗ್ಗೆ ಇವರ ಮೃತದೇಹ ಮನೆಯ ಕೊಠಡಿಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಂಜಾನೆ 3 ಗಂಟೆಯ ಸುಮಾರಿಗೆ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ ನೋಟ್ ಪೊಲೀಸರ ಕೈಗೆ ಸಿಕ್ಕಿದೆ. ಕಲ್ಲಡ್ಕದಲ್ಲಿ ಪ್ರಭು ಎಲೆಕ್ಟ್ರಾನಿಕ್ಸ್ ಆರಂಭಿಸಿದ್ದ ಇವರು ಬಳಿಕ, ಬಿ.ಸಿ. ರೋಡ್‌ನಲ್ಲಿ ಸುಸಜ್ಜಿತ ಮಳಿಗೆ ತೆರೆದಿದ್ದರು. ವರ್ಷದ ಹಿಂದೆ ಇವರ ಅಂಗಡಿಯ ಮುಂಭಾಗ ಚತುಷ್ಪಥ ಹೆದ್ದಾರಿಗೆ ಭೂಸ್ವಾಧೀನಗೊಂಡ ಬಳಿಕ, ಅಂಗಡಿಗೆ ಬರಲು ಸರಿಯಾದ ಮಾರ್ಗವಿಲ್ಲದೆ ಇವರು ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಹತ್ತಿರದ ಸುಸಜ್ಜಿತ ಮಳಿಗೆಗೆ ಅಂಗಡಿಯನ್ನು ಸ್ಥಳಾಂತರಗೊಳಿಸಿದ್ದು, ಪ್ರತಿ ತಿಂಗಳೂ ಲಕ್ಷಕ್ಕೂ ಅಧಿಕ ಬಾಡಿಗೆ ಕಟ್ಟುತ್ತಿದ್ದರು ಎನ್ನಲಾಗಿದೆ. ಇವರ ಮೊದಲ ಪತ್ನಿ ಹಲವು ವರ್ಷಗಳ ಹಿಂದೆ ಅನಾರೋಗ್ಯದಿಂದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮೊದಲ ಪತ್ನಿ ಆತ್ಮಹತ್ಯೆಯ ಬಳಿಕ ಇವರು 2ನೇ ವಿವಾಹವಾಗಿದ್ದು, ಆರು ತಿಂಗಳಲ್ಲೇ ವಿಚ್ಛೇದನವಾಗಿತ್ತು.
ಮುಂಜಾನೆ 3 ಗಂಟೆಯನ್ನು ಉಲ್ಲೇಖಿಸಿರುವ ಡೆತ್ ನೋಟ್‌ನಲ್ಲಿ ಮೊದಲ ಹೆಂಡತಿ ಸತ್ತಾಗಲೇ ತಾನು ಸಾಯಬೇಕಾಗಿತ್ತು, ನಾನು ಮಾನಸಿಕವಾಗಿ ನೊಂದಿದ್ದೇನೆ. ಅಪಘಾತದಲ್ಲಿ ಸಾಯುತ್ತೇನೆ ಎಂದು ಜಾತಕದಲ್ಲಿ ಹೇಳಲಾಗಿದೆ, ಆದರೆ ಅಪಘಾತಗಳಾಗಿದ್ದರೂ ನಾನು ಸಾಯಲಿಲ್ಲ, ಮಕ್ಕಳು ದೊಡ್ಡವರಾಗುವ ಮೊದಲೇ ಸಾಯಬೇಕೆಂದಿದ್ದೆ. ನನ್ನೆಲ್ಲಾ ಆಸ್ತಿಯನ್ನು ಮಗನ ಹೆಸರಲ್ಲಿ ವಿಲ್ ಮಾಡಿದ್ದೇನೆ ಮುಂತಾದ ಅಂಶಗಳನ್ನು ಉಲ್ಲೇಖಿಸಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಮಹಜರು ನಡೆಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.