ದಕ್ಷಿಣ ಕನ್ನಡ

ಕಷ್ಟ ಸಹಿಸಿ ಸಂತಸದಿಂದ ಹಜ್ ಯಾತ್ರೆ ಮಾಡಿ: ಖಾದರ್

Published On :

ಮಂಗಳೂರು: ಪವಿತ್ರ ಹಜ್ ಯಾತ್ರೆಗೆ ತೆರಳುವ ಮೊದಲ ತಂಡಕ್ಕೆ ಬಜಪೆ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಬೀಳ್ಕೊಡಲಾಯಿತು.
ಈ ಸಂದರ್ಭ ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಪ್ರತಿಯೊಬ್ಬ ಮುಸ್ಲಿಂ ಹಜ್ ಯಾತ್ರೆ ಮಾಡಬೇಕೆಂದು ಬಯಸುತ್ತಾರೆ. ಯಾತ್ರೆ ವೇಳೆ ಅವ್ಯವಸ್ಥೆ ಎದುರಾಗಬಹುದು. ಸಮಸ್ಯೆ ಇಲ್ಲದ ಕ್ಷೇತ್ರ ಇಲ್ಲ. ಕಷ್ಟವನ್ನು ಸಹಿಸಿಕೊಂಡು ಹೋಗಬೇಕು. ಯಾತ್ರೆಗೆ ಹೋಗುವಾಗ ಭಕ್ತಿ ಇರಬೇಕು.  ಕಷ್ಟ ಸಹಿಸಿಕೊಂಡು ಹೋದರೆ ದೇವರ ಒಲುಮೆ ಹೆಚ್ಚು ಎಂದರು.
'ಮೊದಲ ಹಂತದಲ್ಲಿ 166 ಮಂದಿ ಹಜ್ ಯಾತ್ರೆಗೆ ಶನಿವಾರ ಬೆಳಗ್ಗೆ ಹೊರಡಲಿದ್ದಾರೆ. ಸೆ.12ರವರೆಗೆ 6 ತಂಡಗಳಲ್ಲಿ  ಒಟ್ಟು 1 ಸಾವಿರ ಮಂದಿಗೆ ಅವಕಾಶ ಇದೆ. ಅ.20ರಿಂದ ವಾಪಸ್ ಯಾತ್ರೆ ಆರಂಭವಾಗುವುದು ಎಂದು ರಾಜ್ಯ ಹಜ್ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ಲತೀಫ್ ತಿಳಿಸಿದರು.
ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್, ಶಾಸಕ ಬಿ.ಮೊಯ್ದಿನ್ ಬಾವ, ಮಂಗಳೂರು ಖಾಜಿ ತ್ವಾಕಾ ಅಹಮ್ಮದ್ ಮುಸ್ಲಿಯಾರ್, ಉಡುಪಿ ಖಾಜಿ ಬೇಕಲ ಇಬ್ರಾಹಿಂ ಮುಸ್ಲಿಯಾರ್, ಶಾಸಕ ಜೆ.ಆರ್.ಲೋಬೋ ಇದ್ದರು.
ವಿಳಂಬ: 7.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ 8.15ಕ್ಕೆ ಆರಂಭವಾಯಿತು. ಆರೋಗ್ಯ ಸಚಿವ ಖಾದರ್ ಬೆಂಗಳೂರಿಂದ ಬರುತ್ತಿದ್ದ ವಿಮಾನ ವಿಳಂಬವಾದುದೇ ಇದಕ್ಕೆ ಕಾರಣ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.