ಪುತ್ತೂರು ಪುರಸಭೆ ಮಾಜಿ ಅಧ್ಯಕ್ಷ ಪಕೀರ ಶೆಟ್ಟಿ
ಪುತ್ತೂರು: ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ಟಿಂಬರ್ ಉದ್ಯಮಿಯಾಗಿದ್ದ ದರ್ಬೆ ನಿವಾಸಿ ಕೆ. ಪಕೀರ ಶೆಟ್ಟಿ (87) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ನಿಧನರಾದರು. ಕೆ.ಪಿ. ಶೆಟ್ಟಿ ಎಂದೇ ಚಿರಪರಿಚಿತರಾಗಿದ್ದ ಇವರು ಹಿರಿಯ ರಾಜಕಾರಣಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಆಪ್ತರಾಗಿದ್ದರು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಪುತ್ತೂರಿಗೆ ಕುಡಿಯುವ ನೀರಿನ ಯೋಜನೆಗಾಗಿ ಶ್ರಮಿಸಿದ್ದ ಇವರು ಪಟ್ಟಣಕ್ಕೆ ನಳ್ಳಿ ನೀರು ಯೋಜನೆ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದರು. 1986- 87ರಲ್ಲಿ ಜನತಾದಳದ ತಾಲೂಕು ಅಧ್ಯಕ್ಷರಾಗಿದ್ದ ಕೆ.ಪಿ. ಶೆಟ್ಟಿ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ನೆಲ್ಲಿಕಟ್ಟೆ ಡಾ. ಶಿವರಾಮ ಕಾರಂತ ಪ್ರೌಢಶಾಲೆಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪುತ್ತೂರು ಪುರಸಭೆಯ ಅಧ್ಯಕ್ಷರಾಗಿದ್ದ ಕೆ. ರಾಮ ಭಟ್ ಜೈಲು ಸೇರಿದ್ದ ಅವಧಿಯಲ್ಲಿ ಪುರಸಭಾ ಉಪಾಧ್ಯಕ್ಷರಾಗಿದ್ದ ಕೆ.ಪಿ. ಶೆಟ್ಟಿ ಅವರು ಹಂಗಾಮಿ ಅಧ್ಯಕ್ಷರಾಗಿದ್ದರು.
ಮೃತರ ಮನೆಗೆ ಹಲವಾರು ಸಾಮಾಜಿಕ ಮತ್ತು ರಾಜಕೀಯ ಧುರೀಣರು ಭೇಟಿ ನೀಡಿ, ಅಂತಿಮ ಗೌರವ ಸಲ್ಲಿಸಿದರು. ಮೃತರು ಪತ್ನಿ, ಸಾಮಾಜಿಕ ಕಾರ್ಯಕರ್ತೆ ಪುಷ್ಪಾ ಕೆ.ಪಿ. ಶೆಟ್ಟಿ, ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಜೆಡಿಎಸ್ ಸಂತಾಪ: ಪಕ್ಷದ ವರಿಷ್ಠ ಕೆ.ಪಿ. ಶೆಟ್ಟಿ ನಿಧನಕ್ಕೆ ಪುತ್ತೂರು ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಸಂತಾಪ ಸೂಚಿಸಲಾಯಿತು. ತಾಲೂಕು ಜಾತ್ಯತೀತ ಜನತಾದಳದ ಕಾರ್ಯಾಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಕೊಂಗೊಟ್ಟು ಗಣಪತಿ ಭಟ್
ಮಂಗಳೂರು: ಕುಂಬಳೆಯ ಕಷ್ಣನಗರ ನಿವಾಸಿ ಕೊಂಗೊಟ್ಟು ಗಣಪತಿ ಭಟ್ (62) ಶುಕ್ರವಾರ ನಿಧನ ಹೊಂದಿದರು. ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಪ್ರೌಢಶಾಲೆಯಲ್ಲಿ ಕಚೇರಿ ಸಹಾಯಕರಾಗಿ ಮೂರು ದಶಕಗಳ ಕಾಲ ಕಾರ್ಯ ನಿರ್ವಹಿಸಿದ್ದು, ನಿವೃತ್ತ ಜೀವನದಲ್ಲಿ ರಾಮಚಂದ್ರಾಪುರ ಮಠದ ಕುಂಬಳೆ ವಲಯದ ಪ್ರಸಾರ ವಿಭಾಗದಲ್ಲಿದ್ದರು. ಅವರಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.
ರಂಜನ್ ಕುಮಾರ್
ಬಂಟ್ವಾಳ: ಪಾಣೆಮಂಗಳೂರು ಮೇಲ್ಕಾರಿನಲ್ಲಿ ಸುಮಾರು 3 ದಶಕಗಳ ಕಾಲ ಪತ್ರಿಕಾ ಏಜೆಂಟರಾಗಿದ್ದ ರಂಜನ್ ಕುಮಾರ್ (51) ಅಸೌಖ್ಯದಿಂದ ಶುಕ್ರವಾರ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರು ಪಾಣೆಮಂಗಳೂರಿನಲ್ಲಿ ಪತ್ರಿಕಾ ಸ್ಟಾಲ್ ನಡೆಸುತ್ತಿದ್ದರು. ಪ್ರಸ್ತುತ ತೊಕ್ಕೊಟ್ಟಿನಲ್ಲಿ ವಾಸ್ತವ್ಯ ಹೊಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

