ದಕ್ಷಿಣ ಕನ್ನಡ

ಮನೆಮನೆಗೂ ಸಾಹಿತ್ಯ ತಲುಪಲಿ

Published On :

ಪುತ್ತೂರು (ದಿ.ಎಸ್.ಎನ್. ಜನಾರ್ದನ ಸಭಾಂಗಣ, ದಿ. ಕೊನೆತೋಟ ರಾಮಯ್ಯ ಭಟ್ ವೇದಿಕೆ): ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳ ವಿಕೇಂದ್ರಿಕರಣವಾಬೇಕು. ಹೋಬಳಿ ಮತ್ತು ಗ್ರಾಮ ಮಟ್ಟಗಳಿಗೆ ಸಾಹಿತ್ಯ ಚಟುವಟಿಕೆ ವಿಸ್ತಾರಗೊಳ್ಳಬೇಕು. ಹಳ್ಳಿ ಹಾಗೂ ಮನೆ ಮನೆಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಯಬೇಕು. ಮಕ್ಕಳು ಮತ್ತು ಯುವಜನರಲ್ಲಿ ಸಾಹಿತ್ಯದ ಒಲವು, ಪುಸ್ತಕದ ಪ್ರೀತಿ ಹೆಚ್ಚುವಂತಾಗಬೇಕು ಎಂದು ಸಾಹಿತಿ ಶ್ರೀಕೃಷ್ಣ ಭಟ್ ಅರ್ತಿಕಜೆ ಸಲಹೆ ನೀಡಿದ್ದಾರೆ.
ಈಶ್ವರಮಂಗಲ ಹನುಮಗಿರಿಯ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪುತ್ತೂರು ತಾಲೂಕು 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಹಿತಿಗಳೇ ನಿರ್ಲಿಪ್ತರಾಗದಿರಿ: ಸಾಹಿತಿಗಳು, ಲೇಖಕರು ದಂತಗೋಪುರದೊಳಗೆ ನಿರ್ಲಿಪ್ತರಾಗಿ ಉಳಿಯದೆ ತಮ್ಮ ಸುತ್ತಮುತ್ತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಎಚ್ಚರ ವಹಿಸಬೇಕು. ನಾಡುನುಡಿ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದ ಶ್ರೀಕೃಷ್ಣ ಭಟ್, ಮನುಷ್ಯನ ದುರಾಸೆ ಮತ್ತು ಆಧುನಿಕರಣದ ಭರಾಟೆಯಿಂದ ಪರಿಸರಕ್ಕೆ ಹಾನಿಯಾಗುತ್ತಿರುವುದನ್ನು ತಡೆಯಲು ನಿರಂತರ ಹೋರಾಟ ನಡೆಯಬೇಕು. ನೇತ್ರಾವತಿ ತಿರುವು ಯೋಜನೆ, ಕಿರುಜಲವಿದ್ಯುತ್ ಯೋಜನೆ ಮುಂತಾದುವುಗಳಿಂದ ಜನರಿಗೆ, ರೈತರಿಗೆ ಆಗಬಹುದಾದ ತೊಂದರೆಗಳ ಬಗ್ಗೆ ನಾವು ಜಾಗೃತರಾಗಬೇಕು ಎಂದರು.
ಭಾವನಾತ್ಮಕ ಒಗ್ಗಟ್ಟು ಬೆಳೆಯಲಿ: ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಾಹಿತಿ ಹಾಗೂ ಶಿಕ್ಷಣತಜ್ಞ ಡಾ.ಪ್ರೊ.ಕೆ.ಇ. ರಾಧಾಕೃಷ್ಣ ಬೆಂಗಳೂರು, ತುಳು ಮತ್ತು ಕನ್ನಡ ಒಟ್ಟಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಕರ್ತವ್ಯಮುಖಿ ಅಭಿಮಾನ ಮತ್ತು ಭಾವನಾತ್ಮಕ ಒಗ್ಗಟ್ಟು ಮೂಡಬೇಕು ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿದರು. ಶಾಸಕಿ ಶಕುಂತಳಾ ಶೆಟ್ಟಿ ವಸ್ತು ಪ್ರದರ್ಶನ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಡಿ. ಸದಾಶಿವ ಭಟ್ ನಿಡ್ಪಳ್ಳಿ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಜಿ.ಕೆ. ಮಹಾಬಲೇಶ್ವರ ಭಟ್ ಇದ್ದರು. ತಾ.ಪಂ. ಅಧ್ಯಕ್ಷೆ ಶಶಿಪ್ರಭ ಸಂಪ್ಯ ಪುಸ್ತಕ ಮಳಿಗೆ ಉದ್ಘಾಟಿಸಿದರು. ಮುಳಿಯ ಶ್ಯಾಮ ಭಟ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಡಾ. ವರದರಾಜ ಚಂದ್ರಗಿರಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ನರೇಂದ್ರ ರೈ ದೇರ್ಲ ಸಮ್ಮೇಳನಾಧ್ಯಕ್ಷರ ಪರಿಚಯ ಭಾಷಣ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಸ್ವಾಗತಿಸಿದರು. ಸಂಚಾಲಕ ಶಿವರಾಮ ಪಿ. ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಕೋಶಾಧಿಕಾರಿ ಮಹೇಶ್ ಕಜೆ ನಿರ್ವಹಿಸಿದರು. ಧರ್ಮೇಂದ್ರ ಕುದ್ರೋಳಿ ದಿಬ್ಬಣ ಕಾರ್ಯಕ್ರಮ ನಿರ್ವಹಿಸಿದರು. ಧ್ವಜಾರೋಹಣ ಕಾರ್ಯಕ್ರಮವನ್ನು ದೇವಿಪ್ರಸಾದ್ ಶೆಟ್ಟಿ ನಿರ್ವಹಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.