ದಕ್ಷಿಣ ಕನ್ನಡ

ಕೋಲ್ಚಾರ್‌ನಲ್ಲಿ ಕಳ್ಳಭಟ್ಟಿ ಹೆಚ್ಚಳ; ಕೂಂಬಿಂಗ್

Published On :

ಸುಳ್ಯ: ಕರ್ನಾಟಕ- ಕೇರಳ ಗಡಿ ಪ್ರದೇಶವಾದ ಕೋಲ್ಚಾರಿನಲ್ಲಿ ಕಳ್ಳಭಟ್ಟಿ ತಯಾರಿಸುತ್ತಿರುವ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಅಬಕಾರಿ ಪೊಲೀಸರ 30 ಮಂದಿಯ ತಂಡ ಈ ಪರಿಸರದಲ್ಲಿ ಕೂಂಬಿಂಗ್ ನಡೆಸುತ್ತಿದೆ. ಈ ವೇಳೆ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು ಕಳ್ಳಭಟ್ಟಿಯನ್ನು ನಾಶಗೊಳಿಸಲಾಗಿದೆ.

ಬದುಕು ಶೋಧಿಸಿದ ಭೈರಪ್ಪ: ಡಾ. ವರದರಾಜ ಚಂದ್ರಗಿರಿ


ಸುಳ್ಯ: ಡಾ. ಶಿವರಾಮ ಕಾರಂತರನ್ನು ಬಿಟ್ಟರೆ ಬದುಕನ್ನು ಇಷ್ಟೊಂದು ಶೋಧಿಸಿ ಬರೆದ ಲೇಖಕರೆಂದರೆ ಎಸ್.ಎಲ್. ಭೈರಪ್ಪ ಎಂದು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ವರದರಾಜ ಚಂದ್ರಗಿರಿ ಹೇಳಿದ್ದಾರೆ.
 ಸುಳ್ಯದ ಶ್ರೀ ಶಾರದಾ ಪದವಿಪೂರ್ವ ಮಹಿಳಾ ಕಾಲೇಜು ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿನಿಯರ ಒಕ್ಕೂಟ ವತಿಯಿಂದ ಶನಿವಾರ ಸುಳ್ಯದ ಅಮೃತ ಭವನದಲ್ಲಿ ನಡೆದ 'ಭೈರಪ್ಪ ಕಾದಂಬರಿಗಳು: ಪ್ರತಿ-ಪ್ರತಿಬಿಂಬ'  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 ಬೈರಪ್ಪ ಅವರ ಚಿಂತನೆಯ ನೆಲೆ ಭಾರತೀಯವಾದದ್ದು. ಮನುಷ್ಯನ ಬದುಕನ್ನು ನಿರ್ಧರಿಸುವ ಅನೇಕ ಸೂಕ್ಷ್ಮ ವಸ್ತುಗಳನ್ನು ಆಯ್ಕೆ ಮಾಡಿ ಅದನ್ನು ವೈಚಾರಿಕವಾಗಿ ವಿಶ್ಲೇಷಣೆ ಮಾಡಿ ಸೃಜನಶೀಲವಾಗಿ ಅಭಿವ್ಯಕ್ತಿಸಿ ಬರೆದ ಭೈರಪ್ಪ ಅವರು ಇಡೀ ಭಾರತೀಯ ಓದುಗರನ್ನು ತಲುಪಿದ್ದಾರೆ ಎನ್ನುವುದು ಅವರ ಜನಪ್ರಿಯತೆಗೆ ಸಾಕ್ಷಿ ಎಂದರು. ಸಾಹಿತ್ಯದ ಕೇಂದ್ರ ಮಾನವ ಬದುಕು. ಬದುಕನ್ನು ಗ್ರಹಿಸಲು, ಅನುಭವವನ್ನು ಶೋಧಿಸಲು ಆಪ್ತ ಪ್ರಕಾರ ಕಾದಂಬರಿ. ಮನುಷ್ಯ ಬದುಕಿನ ಅನೇಕ ಹೊಸ, ಸೂಕ್ಷ್ಮ ವಲಯಗಳನ್ನು ಅನ್ವೇಷಿಸುತ್ತ ನಿರಂತರ ಬದುಕಿನ ಜೊತೆಗೆ ಮುಖಾಮುಖಿಯಾಗುತ್ತಾ ಬರೆಯುವವರು ಭೈರಪ್ಪ ಎಂದರು.
ಭೈರಪ್ಪ ಕಾದಂಬರಿಗಳ ಕುರಿತು ಉಪನ್ಯಾಸ: ಕಾರ್ಯಕ್ರಮದಲ್ಲಿ ಭೈರಪ್ಪ ಅವರ 'ತಬ್ಬಲಿಯು ನೀನಾದೆ ಮಗನೆ' ಕಾದಂಬರಿ ಕುರಿತು ನೀನಾಸಂ ಪದವೀಧರ ಮಂಜುನಾಥ ಶೆಟ್ಟಿ, 'ಗೃಹಭಂಗ' ಕಾದಂಬರಿ ಕುರಿತು ಡಾ. ವರದರಾಜ ಚಂದ್ರಗಿರಿ, 'ದಾಟು' ಕಾದಂಬರಿ ಕುರಿತು ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಗಿರೀಶ್ ಭಟ್ ಅಜಕಳ, 'ತಂತು' ಕಾದಂಬರಿ ಕುರಿತು ಮುಂಡ್ಕೂರು ಶ್ರೀ ವಿದ್ಯಾವರ್ಧಕ ಪ.ಪೂ. ಕಾಲೇಜಿನ ಉಪನ್ಯಾಸಕ ಉಮೇಶ ಗೌತಮ್, 'ಸಾರ್ಥ' ಕಾದಂಬರಿ ಕುರಿತು ಯಕ್ಷಗಾನ ಕಲಾವಿದ ತಾರಾನಾಥ ವರ್ಕಾಡಿ ಉಪನ್ಯಾಸ ನೀಡಿದರು.
 ನಿನಾದ ಯು.ನಾಯಕ್ ಕಾದಂಬರಿಯ ಕಾವ್ಯಾತ್ಮಕ ನೋಟದ ಕುರಿತು ಮಾತನಾಡಿದರು.ಭೈರಪ್ಪ ಬದುಕು ಮತ್ತು ಬರಹ ಕುರಿತ ಲಿಖಿತ ರೂಪದ ರಸಪ್ರಶ್ನೆ ನಡೆಯಿತು.
ಶ್ರೀ ಶಾರದಾ ಮಹಿಳಾ ಕಾಲೇಜು ಪ್ರಾಂಶುಪಾಲ ಜವರೇ ಗೌಡ, ಹಳೆ ವಿದ್ಯಾರ್ಥಿನಿಯರ ಒಕ್ಕೂಟ ಅಧ್ಯಕ್ಷೆ ಡಾ. ವೀಣಾ ಫಾಲಚಂದ್ರ ಇದ್ದರು. ಭವ್ಯ ಮತ್ತು ಪಲ್ಲವಿ ಕಾಮತ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.