ನೇತ್ರಾವತಿಯಲ್ಲಿ ಯುವಕ ಸಾವು
ಬಂಟ್ವಾಳ: ಸ್ನಾನಕ್ಕೆಂದು ನೇತ್ರಾವತಿ ನದಿಗೆ ಇಳಿದಿದ್ದ ಯುವಕಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ಸಜಿಪ ಮುನ್ನೂರು ಗ್ರಾಮದ ಮಲಾಯಿ ಬೆಟ್ಟು ಎಂಬಲ್ಲಿ ಭಾನುವಾರ ನಡೆದಿದೆ.
ಬಿ.ಸಿ. ರೋಡು ಸಮೀಪದ ಗಾಂದೋಡಿ ರೈಸ್ ಮಿಲ್ ಬಳಿಯ ನಿವಾಸಿ ಮಹಮ್ಮದ್ ಎಂಬವರ ಪುತ್ರ ನೌಷಾದ್ (20) ಮೃತ ಯುವಕ. ಈತನ ಜೊತೆ ನೀರಿಗಿಳಿದಿದ್ದ ಇತರ ಮೂವರು ಪಾರಾಗಿದ್ದಾರೆ.
ಸಜಿಪ ಮುನ್ನೂರಿನ ಮಲಾಯಿ ಬೆಟ್ಟುವಿನ ಸಂಬಂಧಿಕರ ಮನೆಗೆಂದು ಹೋಗಿದ್ದ ನೌಷಾದ್ ಅಲ್ಲಿ ತನ್ನ ಸ್ನೇಹಿತರಾದ ನೌಫಲ್, ಶಬೀರ್ ಹಾಗೂ ನೌಫಲ್ ಜೊತೆ ನೇತ್ರಾವತಿಯಲ್ಲಿ ಸ್ನಾನಕ್ಕೆಂದು ತೆರಳಿದ್ದರು. ನೌಷಾದ್ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾನೆ.
ತಕ್ಷಣ ಸ್ನೇಹಿತರು ರಕ್ಷಣೆಗೆ ಮುಂದಾದರಾದರೂ, ಪ್ರಯತ್ನ ವಿಫಲಗೊಂಡಿದೆ.
ಕಾರ್ಯಾಚರಣೆ ನಡೆಸಿದ ಸ್ಥಳೀಯರು ನೀರಿನಲ್ಲಿದ್ದ ನೌಷಾದ್ನ ಸ್ನೇಹಿತರನ್ನು ದಡಕ್ಕೆ ಕರೆ ತಂದಿದ್ದು, ಮುಳುಗಿದ್ದ ನೌಷಾದ್ನನ್ನು ಮೇಲಕ್ಕೆತ್ತಿದರಾದರೂ ಆ ವೇಳೆಗಾಗಲೇ ನೌಷದ್ ಮೃತಪಟ್ಟಿದ್ದ ಎನ್ನಲಾಗಿದೆ.
ಬಿ.ಸಿ. ರೋಡು ಕೈಕಂಬದಲ್ಲಿ ಹೂ ವ್ಯಾಪಾರದ ಕೆಲಸ ಮಾಡಿಕೊಂಡಿದ್ದ ನೌಷಾದ್ ಭಾನುವಾರವಾದ್ದರಿಂದ ಕ್ರಿಕೆಟ್ ಆಡಲೆಂದು ಸಜಿಪಮುನ್ನೂರು ಗ್ರಾಮದ ಮಲಾಯಿ ಬೆಟ್ಟುವಿಗೆ ಹೋಗಿದ್ದ. ಆಡಿ ದಣಿದ ಕಾರಣದಿಂದ ಸ್ನಾನ ಮಾಡಲೆಂದು ಸ್ನೇಹಿತರ ಜೊತೆ ನೀರಿಗಿಳಿದಿದ್ದು, ಇಹಲೋಕ ತ್ಯಜಿಸಿದ್ದಾನೆ.
ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

