ದಕ್ಷಿಣ ಕನ್ನಡ

ಬಾವಿಗೆ ಬಿದ್ದು ಅಪರೂಪದ ಕಪ್ಪು ಚಿರತೆ ಸಾವು

Published On :

ಕಾರವಾರ: ತಾಲೂಕಿನ ನಗೆಕೋವೆ ಗ್ರಾಮದ ಬಾವಿಯಲ್ಲಿ ಅಪರೂಪದ ಐದು ವರ್ಷದ ಗಂಡು ಕಪ್ಪು ಚಿರತೆ ಬಿದ್ದು ಮೃತಪಟ್ಟಿದ್ದು, ಮೂರು ದಿನಗಳ ನಂತರ ಶನಿವಾರ ಬೆಳಕಿಗೆ ಬಂದಿದೆ. ನಗೆಕೋವೆ ಗ್ರಾಮದ ಉಲ್ಲಾಸ್ ಶಂಕರ್ ನಾಯ್ಕ ಎಂಬುವರ ಜಮೀನಿನಲ್ಲಿರುವ ಬಾವಿಯಲ್ಲಿ ಕಪ್ಪು ಚಿರತೆ ಬಿದ್ದಿರುವುದನ್ನು ಗಮನಿಸಿದ ಕೂಲಿ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಇಲಾಖೆ ಅಧಿಕಾರಿಗಳು ಕಪ್ಪು ಚಿರತೆ ಮೃತಪಟ್ಟಿರುವುದನ್ನು ಗಮನಿಸಿ ಸ್ಥಳೀಯರ ಸಹಕಾರದಿಂದ ಮೇಲೆತ್ತಿದ್ದಾರೆ. ಮೂರು ದಿನಗಳ ಹಿಂದೆ ರಾತ್ರಿ ವೇಳೆ ನಾಯಿ ಹಿಡಿಯಲು ಬಂದ ಚಿರತೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿದೆ. ಶುಕ್ರವಾರ ಬಾವಿಯಲ್ಲಿ ಮೃತಪಟ್ಟ ನಾಯಿ ಪತ್ತೆಯಾಗಿತ್ತು. ಶನಿವಾರ ಬೆಳಗ್ಗೆ ನೀರೆತ್ತಲು ಬಾವಿಗೆ ಬಂದಾಗ ಕಪ್ಪು ಬಣ್ಣದ ಚಿರತೆ ತೇಲುತ್ತಿರುವುದು ಕಂಡು ಬಂದಿದೆ ಎಂದು ಜಮೀನು ನೋಡಿಕೊಳ್ಳುತ್ತಿರುವ ಕಾರ್ಮಿಕರು ತಿಳಿಸಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿ, ಕಪ್ಪು ಚಿರತೆಗೆ ಐದು ವರ್ಷ ಪ್ರಾಯ ಎಂದು ಅಂದಾಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.