ಉಡುಪಿ: ಶತಾವಧಾನಿ ಗಣೇಶ್ 1001ನೇ ಅಷ್ಟಾವಧಾನ
ಉಡುಪಿ: ಶತಾವಧಾನಿ ಡಾ.ಆರ್.ಗಣೇಶ್ ಅವರಿಂದ ಸಾವಿರದ ಒಂದನೆಯ ಅಷ್ಟಾವಧಾನ ಕಾರ್ಯಕ್ರಮ ಭಾನುವಾರ ಉಡುಪಿಯ ಕಿದಿಯೂರು ಹೊಟೇಲ್ನ ಶೇಷಶಯನ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆರ್. ಗಣೇಶ್ ಅವರಿಗೆ 'ಜ್ಞಾನ ವಾರಿಧಿ' ಬಿರುದು ನೀಡಿ ಸನ್ಮಾನಿಸಿದರು. ವಿಜ್ಞಾನ, ತತ್ವಜ್ಞಾನ, ಇತಿಹಾಸ, ಸಾಹಿತ್ಯ, ನೃತ್ಯ, ಶಿಲ್ಪಕಲ್ಪೆ ಸೇರಿದಂತೆ ಎಲ್ಲ ಕ್ಷೇತ್ರಗಳ ಬಗ್ಗೆ ಅಗಾಧ ಜ್ಞಾನ ಹೊಂದಿರುವ ಗಣೇಶ್ ಈ ಶತಮಾನದ ಅದ್ಭುತ ವಿದ್ವಾಂಸ ಎಂದು ಪೇಜಾವರ ಶ್ರೀ ಹೇಳಿದರು. ಬಳಿಕ ನಡೆದ ಅಷ್ಟಾವಧಾನದಲ್ಲಿ ಡಾ.ಕೆ.ಎಸ್. ಕಣ್ಣನ್, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ದಿವಾಕರ ಹೆಗ್ಡೆ ಧಾರವಾಡ, ಡಾ.ಆರ್. ಶಂಕರ್ ಬೆಂಗಳೂರು, ರಾಘವ ಪರ್ಕಳ, ಎಸ್.ಎಸ್. ಸೋಮಶೇಖರ್ ಶರ್ಮ, ಎಚ್. ಚಂದ್ರಶೇಖರ್ ಕೆದ್ಲಾಯ, ನಿರುಪಮಾ ರಾಜೇಂದ್ರ, ಮಂಟಪ ಪ್ರಭಾಕರ ಉಪಾಧ್ಯಾಯ, ಕಬ್ಯಾಡಿ ಜಯರಾಮ ಆಚಾರ್ಯ ಇದ್ದರು.
ಸ್ನೂಕರ್ ಸ್ಪರ್ಧೆಗೆ ಅರ್ಜಿ ಆಹ್ವಾನ
ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ದಿ.ಡಾ.ಕೆ. ಮೋಹನದಾಸ್ ಭಂಡಾರಿಯವರ ಸವಿನೆನಪಿಗಾಗಿ ಮಾ. 27 ಮತ್ತು 29 ರಂದು ನಗರದ ಈಡನ್ ಕ್ಲಬ್ನಲ್ಲಿ ರಾಜ್ಯಮಟ್ಟದ ಸ್ನೂಕರ್ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯು ರೋಟರಿ ಸದಸ್ಯರಿಗೆ ಮಾತ್ರ ಸೀಮಿತ. ರಾಜ್ಯದ ಯಾವುದೇ ರೋಟರಿ ಕ್ಲಬ್ನವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಒಂದು ಕ್ಲಬ್ನಿಂದ ಇಬ್ಬರಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿಗೆ ಆನಂದ ಡಿಸೋಜ- 9845956135 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಲಾ ಸಂಚಿಕೆ ಸ್ಪರ್ಧೆ
ಮಂಗಳೂರು: ದ.ಕ. ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಹಂತದಲ್ಲಿ 'ಶಾಲಾ ಸಂಚಿಕೆ ಸ್ಪರ್ಧೆ' ಏರ್ಪಡಿಸಲಾಗಿದೆ. ಶಾಲಾ ಸಂಚಿಕೆಗಳು ಹಸ್ತಪ್ರತಿ ಅಥವಾ ಮುದ್ರಿತ ರೂಪದಲ್ಲಿ ಇರಬಹುದು. ಮಕ್ಕಳು ಬರೆದ ಕಥೆ, ಕವನ ಇತ್ಯಾದಿಗಳನ್ನು ಸಾಹಿತ್ತಿಕ ದೃಷ್ಟಿಯಿಂದ ಪರಿಗಣಿಸಿ ಅಂಕ ನೀಡಲಾಗುವುದು. ಉನ್ನತ ಶ್ರೇಣಿಯಲ್ಲಿರುವ ಎಲ್ಲ ಸಂಚಿಕೆಗಳಿಗೆ ತಲಾ ರು. 500 ಮತ್ತು ದ್ವಿತೀಯ ಶ್ರೇಣಿಯಲ್ಲಿರುವ ಸಂಚಿಕೆಗಳಿಗೆ ರು. 250 ನಗದು ಬಹುಮಾನವಿದೆ. ಮಾ. 31 ಕೊನೆ ದಿನ. ಹೆಚ್ಚಿನ ಮಾಹಿತಿಗೆ ಕಾರ್ಯದರ್ಶಿ ಬಿ. ಶ್ರೀನಿವಾಸ ರಾವ್-9945392396.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

