ದಕ್ಷಿಣ ಕನ್ನಡ

ಎಂಡೋ ಪೀಡಿತೆ ಯುವತಿ ಸಾವು

Published On :

ಉಪ್ಪಿನಂಗಡಿ: ಪುತ್ತೂರು ತಾಲೂಕಿನ ಕೈಲ ಗ್ರಾಮದ ಪೆರ್ಲ ಎಂಬಲ್ಲಿ ಎಂಡೋ ಪೀಡಿತೆ ಯುವತಿಯೊಬ್ಬಳು ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಪೆರ್ಲ ಹೊನ್ನಪ್ಪ ಗೌಡ ಎಂಬವರ ಪುತ್ರಿ ವಿಮಲ(27) ಮೃತ ಯುವತಿ. ಹನ್ನೆರಡು ವರ್ಷಗಳ ಹಿಂದೆ ಹಠಾತ್ತಾಗಿ ಕೈಕಾಲು ಚಲನವಲನ ಕಳೆದುಕೊಂಡು ಶರೀರ ಕುಗ್ಗಿ ಹೋಗಿತ್ತು. ಹಲವಾರು ವರ್ಷಗಳಿಂದ ಔಷಧಿ ಕೊಡಿಸುತ್ತಿದ್ದರೂ ಫಲ ಕಂಡಿರಲಿಲ್ಲ. ದಿನದಿಂದ ದಿನಕ್ಕೆ ಶರೀರದಲ್ಲಿ ದುರ್ಬಲತೆ ಹೆಚ್ಚಾಗಿ ಮಲಗಿದ್ದಲ್ಲೆ ಇರಬೇಕಾಗಿತ್ತು.  ಇದೀಗ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾಳೆ. ಮೃತಳ ಮನೆಗೆ ಕೈಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಬೇಂಗದಪಡ್ಪು, ಸದಸ್ಯೆ ಪುಷ್ಪಾವತಿ ಭೇಟಿ ನೀಡಿದ್ದರು.

ಜುಗಾರಿ ಅಡ್ಡೆಗೆ ದಾಳಿ, 11 ಮಂದಿ ಸೆರೆ: ರು. 3 ಲಕ್ಷಕ್ಕೂ ಅಧಿಕ ನಗದು ವಶ
ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ಗೋಳಿತ್ತಡಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಪೊಲೀಸರು ಶನಿವಾರ ತಡರಾತ್ರಿ 11 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ರು. ಮೂರು ಲಕ್ಷಕ್ಕೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಆಧಾರದಲ್ಲಿ ಕಡಬ ಎಸ್‌ಐ ಯೋಗೀಶ್ ಕುಮಾರ್ ಹಾಗೂ ಸಿಬ್ಬಂದಿ ಗೋಳಿತ್ತಡಿಯಲ್ಲಿ ಗೇರು ಬೀಜದ ಹಾಡಿಯಲ್ಲಿ ಶನಿವಾರ  ತಡ ರಾತ್ರಿ ನಡೆಯುತ್ತಿದ್ದ ಉಲಾಯಿ ಪಿದಾಯಿ ವ್ಯವಹಾರದ ಮೇಲೆ ದಾಳಿ ನಡೆಸಿ 11 ಜನರನ್ನು ಬಂಧಿಸಿದ್ದು, ಈ ಪೈಕಿ ಓರ್ವ ತಪ್ಪಿಸಿಕೊಂಡಿದ್ದಾನೆ. ಬಂಧಿತರಿಂದ ರು. 3,21,340 ನಗದು, 11 ಮೊಬೈಲ್, ಬೈಕ್ ಸೇರಿದಂತೆ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ಪುಟ್ಟಸ್ವಾಮಿ, ತಾರಾನಾಥ್, ಕೃಷ್ಣಪ್ಪ, ಸತೀಶ್, ಪಂಪಾಪತಿ, ಸಂದೀಪ್, ಹರೀಶ್ ಭಾಗವಹಿಸಿದ್ದರು.

ಡಿ.ಎನ್.ಪ್ರಕಾಶ್ ಆಯ್ಕೆ
ಮಂಗಳೂರು: ಕಾರ್ಪೊರೇಶನ್ ಬ್ಯಾಂಕ್ ಆಫೀಸರ್ಸ್ ಆರ್ಗನೈಶೇಶನ್ 2014-2017 ಸಾಲಿನ ಅಧ್ಯಕ್ಷರಾಗಿ ಡಿ.ಎನ್. ಪ್ರಕಾಶ್, ಉಪಾಧ್ಯಕ್ಷರಾಗಿ ಏಕನಾಥ್ ಬಾಳಿಗ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಎಐಬಿಒಸಿ 10ನೇ ತ್ರೈಮಾಸಿಕ ಸಭೆಯಲ್ಲಿ ನೇಮಕ ಮಾಡಲಾಯಿತು.

ಅರ್ಜಿ ಆಹ್ವಾನ
ಮಂಗಳೂರು: ಮಂಗಳೂರು ವಿವಿ ಐಸಿಎಸ್‌ಎಸ್‌ಆರ್ ಸಂಶೋಧನೆ ಪ್ರಾಜೆಕ್ಟ್‌ಗೆ ಸಹಾಯಕ ಸಂಶೋಧಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ನಾತಕೋತ್ತರ ಪದವಿಯಲ್ಲಿ ಅರ್ಥಶಾಸ್ತ್ರ, ಸೋಶಿಯಲ್ ವರ್ಕ್, ಸಮಾಜಶಾಸ್ತ್ರ ಸೇರಿದಂತೆ ಯಾವುದೇ ಸಾಮಾಜಿಕ ವಿಜ್ಞಾನ ಅಭ್ಯಾಸ ಮಾಡಿರಬೇಕು. ಎಂ.ಫಿಲ್‌ಗೆ ಪ್ರಥಮ ಆದ್ಯತೆ ಮತ್ತು 2-3 ಸೋಶಿಯಲ್ ಸೈನ್ಸ್ ಸಂಶೋಧನೆಯಲ್ಲಿ ಅನುಭವ ಹೊಂದಿರಬೇಕು. ಮಾಸಿಕ ವೇತನ ರು. 13 ಸಾವಿರ. ಅಭ್ಯರ್ಥಿಗಳು ಸ್ವವಿವರವನ್ನು bmkumara eco@rediffimail.com ಗೆ ಕಳುಹಿಸಬಹುದು. ಮಾಹಿತಿಗೆ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಕುಮಾರ- 9743082549.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.