ದಕ್ಷಿಣ ಕನ್ನಡ

ಜೆಡಿಎಸ್ ಗೆಲವಿನ ಸಮೀಪ ಸುಳಿಯಲ್ಲ

Published On :

ಮುಂಡಗೋಡ: ಉ.ಕ. ಕ್ಷೇತ್ರದ 8 ಬ್ಲಾಕ್ ಕಮಿಟಿಗಳಿಂದ ಪಕ್ಷದ ಪ್ರಚಾರ ತೀವ್ರ ಗತಿಯಲ್ಲಿ ಪ್ರಾರಂಭಿಸಲಾಗಿದೆ. ಜನತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಆಡಳಿತದ ವ್ಯತ್ಯಾಸ ತುಲನೆ ನಡೆಸುತ್ತಿದ್ದಾರೆ. ಜೆಡಿಎಸ್ ಗೆಲುವಿನ ಸಮೀಪ ಕೂಡ ಬರುವುದಿಲ್ಲ. ಇದರಿಂದಾಗಿ ಅವರ ಬಗ್ಗೆ ಮತನಾಡುವ ಅಗತ್ಯವೇ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಪ್ರಮೋದ ಹೆಗಡೆ ಹೇಳಿದರು.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಬಡ ಅತಿಕ್ರಮಣದಾರರ ಹಿತಾಸಕ್ತಿ ಬಯಸಿ 2006ರಲ್ಲಿ ಕೇಂದ್ರ ಸರ್ಕಾರ ಅರಣ್ಯ ಕಾಯ್ದೆ ಸಡಿಲಗೊಳಿಸಿದ್ದರೂ ರಾಜ್ಯದಲ್ಲಿ ಹಿಂದಿನ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರ ಅತಿಕ್ರಮಣ ಫಲಾನುಭವಿಗಳಿಗೆ ಜಮೀನು ಮಂಜೂರಿ ಮಾಡಿ ಕೊಡುವಲ್ಲಿ ವಿಫಲವಾಗಿವೆ. ಇದೇ ಅವಧಿಯಲ್ಲಿ ಆಂಧ್ರ ಇತರ ರಾಜ್ಯಗಳಲ್ಲಿ ಸಾವಿರಾರು ಅತಿಕ್ರಮಣದಾರರಿಗೆ ಜಮೀನಿ ಮಂಜೂರಿ ಮಾಡಿ ಕೊಡಲಾಗಿದೆ. ಇಲ್ಲಿ ಏಕೆ ಸಾದ್ಯವಾಗಲಿಲ್ಲ ಎಂದು ಪ್ರಶ್ನಿಸಿದರು. ದೇಶಪಾಂಡೆ ಮೇಲೆ ಬಂದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರ್.ವಿ. ದೇಶಪಾಂಡೆ 40 ವರ್ಷದ ರಾಜಕಾರಣದ ಇತಿಹಾಸದಲ್ಲಿ ಅಕ್ರಮ ಮಾಡುವ ಪ್ರಮೆಯವೇ ಅವರಿಗೆ ಬಂದಿಲ್ಲ. ಚುನಾವಣೆ ಸಮಯದಲ್ಲಿ ಆರೋಪ ಬಂದಿರುವುದು ಶಡ್ಯಂತ್ರವಾಗಿದೆ. ಇದಕ್ಕೆ ನ್ಯಾಯಾಲಯ ಸರಿಯಾದ ತೀರ್ಪು ನೀಡಲಿದೆ ಎಂದು ಹೇಳಿದರು.
ತೇಜೋವಧೆ ಮಾಡಿ ವಾಮಮಾರ್ಗ ಅನುಸರಿಸುವುದರಿಂದ ಗೆಲವು ಸಾಧ್ಯವಿಲ್ಲ. ಪ್ರಶಾಂತ ದೇಶಪಾಂಡೆ ಗೆಲುವು ಜನಮಾನಸದಲ್ಲಿದೆ. ಶಾಸಕ ಶಿವರಾಮ ಹೆಬ್ಬಾರ ಕೂಡ ಆರ್‌ವಿಡಿ ಮಾರ್ಗದರ್ಶನದಲ್ಲಿ ನಡೆದು ಬಂದಿದ್ದಕ್ಕೆ ಹೆಚ್ಚು ಮತಗಳಿಂದ ಜಯಿಸಲು ಸಾಧ್ಯವಾಯಿತು ಎಂದರು. ಶೇ. 50ರಷ್ಟು ಅನುದಾನ ಬಳಕೆ ಮಾಡಲಾಗದ ಹಾಲಿ ಸಂಸದರು ಜಿಲ್ಲೆಗೆ ಏನು ಮಾಡಿರಬಹುದೆಂಬುದು ತಿಳಿಯುತ್ತದೆ. ಚುನಾವಣೆ ಸಂದರ್ಭದಲ್ಲಿ ಏನಾದರೊಂದು ಸೃಷ್ಟಿಸಿ ಗೆಲ್ಲುತ್ತ ಬಂದಿದ್ದಾರೆ ಎಂದು ಹೇಳಿದರು. ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ರವಿಗೌಡ ಪಾಟೀಲ, ಮಂಜುನಾಥ ವೆರ್ಣೇಕರ, ಪಿ.ಎಸ್. ಸಂಗೂರಮಠ, ರಾಮಣ್ಣ ಪಾಲೇಕರ, ಎಚ್.ಎಂ. ನಾಯ್ಕ, ಶಾರದಾ ರಾಥೋಡ, ರಫೀಕ ಇನಾಮದಾರ, ಫಕ್ಕೀರಸ್ವಾಮಿ ಗುಲ್ಯಾನವರ, ಅಣ್ಣಪ್ಪ ಪಾಟೀಲ, ಸಂಜೀವ ಪಿಸೆ, ಅಲಿಖಾನ್ ಪಠಾಣ, ಲತೀಫ್ ನಾಲಬಂದ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.