ಯುವ ಜೆಡಿಎಸ್ 10 ಪದಾಧಿಕಾರಿ ರಾಜಿನಾಮೆ
ಮಂಗಳೂರು: 'ಜನತಾದಳ ರಾಜ್ಯ ನಾಯಕ ಮಧುಬಂಗಾರಪ್ಪನವರಿಗೆ ತನ್ನ ಕುಟುಂಬ ಉದ್ಧಾರಕ್ಕಾಗಿ ಮಾತ್ರ ಪಕ್ಷ ಹೊರತು, ಸಂಘಟನೆಗಾಗಿ ಅಲ್ಲ' ಎಂದು ಯುವ ಜನತಾದಳ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾರ್ಯಕರ್ತರಿಗೆ ಬೆಲೆ ನೀಡುತ್ತಿಲ್ಲ. ಮನಸ್ಸಿಗೆ ತುಂಬಾ ನೋವುಂಟು ಮಾಡಿದ್ದು, ಈ ಕಾರಣಕ್ಕಾಗಿ ಜಿಲ್ಲಾ ಯುವ ಜನತಾದಳದ 10 ಮಂದಿ ಪದಾಧಿಕಾರಿಗಳು ರಾಜಿನಾಮೆ ಸಲ್ಲಿಸುತ್ತಿದ್ದೇವೆ. ಮಧು ಬಂಗಾರಪ್ಪನವರು ತಮ್ಮ ತಂದೆಯ ಸಮಾಧಿಯ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದರು. ರಾಜಿನಾಮೆ ಪತ್ರವನ್ನು ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ, ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ, ರಾಜ್ಯ ಯುವಜನತಾದಳ ಅಧ್ಯಕ್ಷ ಮಧು ಬಂಗಾರಪ್ಪ ಮತ್ತು ಜಿಲ್ಲಾ ಜನತಾದಳ ಅಧ್ಯಕ್ಷ ಎಂ.ಬಿ. ಸದಾಶಿವ ಹಾಗೂ ಕಾರ್ಯಾಧ್ಯಕ್ಷ ಮಹಮ್ಮದ್ ಕುಂಞ ಕಳುಹಿಸಲಾಗಿದೆ. ಇನ್ನಷ್ಟು ಕಾರ್ಯಕರ್ತರನ್ನು ಮನವೊಲಿಸಿ ರಾಜಿನಾಮೆ ನೀಡುವಂತೆ ಮಾಡಲಾಗುವುದು ಎಂದರು.
ರಾಜಿನಾಮೆ ನೀಡಿದವರು: ಯುವ ಜೆಡಿಎಸ್ ಪ್ರ.ಕಾರ್ಯದರ್ಶಿ ಯೋಗಿಶ್ ಆಳ್ವ, ಸಂಘಟನಾ ಕಾರ್ಯದರ್ಶಿ ಸುಧಾಕರ್, ಕಾರ್ಯದರ್ಶಿ ರಾಮಚಂದ್ರ ಕಲ್ಲಡ್ಕ, ರಂಜಿತ್ ಕುಮಾರ್, ಉಮೇಶ್ ಆಚಾರ್ಯ, ಜಗದೀಶ್, ರವಿ ಬಿ.ಸಿ. ರೋಡ್, ಹರೀಶ್, ಸುರೇಶ್ ಕಲ್ಲಡ್ಕ.
ಮತಯಂತ್ರಗಳ ಹಂಚಿಕೆ, ಪರಿಶೀಲನೆ
ಮಂಗಳೂರು: ದ.ಕ. ಜಿಲ್ಲೆಗೆ ಒಟ್ಟು 1980 ಕಂಟ್ರೋಲ್ ಮತ್ತು 2520 ಬ್ಯಾಲೆಟ್ ಯೂನಿಟ್ಗಳು ಹಂಚಿಕೆಯಾಗಿದ್ದು, ಎಲ್ಲ ಮತಯಂತ್ರಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ಕಂಪೆನಿಯ ಎಂಜಿನಿಯರ್ಗಳು ಪ್ರಥಮ ಹಂತದ ಪರಿಶೀಲನೆ ಮಾಡಿರುತ್ತಾರೆ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ.
ಜಿಲ್ಲೆಯ 1766 ಮತಗಟ್ಟೆಗಳಿಗೆ ಶೇ. 10 ಹೆಚ್ಚುವರಿ ಸೇರಿ ಜಿಲ್ಲೆಯಲ್ಲಿನ ಮತಗಟ್ಟೆಗಳಿಗೆ 1945 ಮತ ಯಂತ್ರಗಳ ಅಗತ್ಯವಿದ್ದು, ಬುಧವಾರ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಮಕ್ಷಮ ಭಾರತ ಚುನಾವಣಾ ಆಯೋಗ ಒದಗಿಸಿದ ಸಾಫ್ಟ್ವೇರ್ ಬಳಸಿ ಅಸೆಂಬ್ಲಿ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ಮತ ಯಂತ್ರಗಳನ್ನು ಚುನಾವಣಾ ವೀಕ್ಷಕರ ಸಮಕ್ಷಮ 2ನೇ ಮಿಶ್ರಣ ಮಾಡಿ ಮತಗಟ್ಟೆಗಳಿಗೆ ಹಂಚಿಕೆ ಮಾಡಲಾಗುವುದೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

