ಬೆಳ್ಳಿ ಕಳವು
ಸುಳ್ಯ: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಜ್ಯುವೆಲ್ಲರ್ಸ್ ಅಂಗಡಿಯಿಂದ ಕಳವಾದ ಬೆಳ್ಳಿ ಮತ್ತೆ ಸಿಕ್ಕಿದ ಘಟನೆ ಇತ್ತೀಚೆಗೆನಡೆದಿದೆ.
ಜ್ಯುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಸೇಫ್ ಲಾಕರ್ನಿಂದ ಸುಮಾರು 5 ಕೆ.ಜಿ. ಬೆಳ್ಳಿಯನ್ನು ಕಳವುಗೈದು ಬೇರೆಯವರಿಗೆ ಮಾರಾಟ ಮಾಡಿದ್ದ. ಆತನಿಂದ ಬೆಳ್ಳಿ ಖರೀದಿಸಿದ ವ್ಯಕ್ತಿ ಕೆಲವು ದಿನಗಳ ಬಳಿಕ ಅದೇ ಜ್ಯುವೆಲ್ಲರ್ಗೆ ಮಾರಾಟ ಮಾಡಲು ಬಂದ. ಜ್ಯುವೆಲ್ಲರ್ನ ಮಾಲೀಕರು ಬೆಳ್ಳಿಯನ್ನು ಪರಿಶೀಲನೆ ನಡೆಸಿದಾಗ ಅದರ ಮಾರ್ಕ್ನ ಆಧಾರದಲ್ಲಿ ತನ್ನ ಅಂಗಡಿಯಲ್ಲೇ ಇದೇ ತರಹದ ಬೆಳ್ಳಿ ಇರುವುದನ್ನು ಆತನಿಗೆ ಹೇಳಿ, ಬಳಿಕ ಸೇಫ್ ಲಾಕರ್ ನೋಡಿದರು. ಆಗ ಸೇಫ್ ಲಾಕರ್ನಲ್ಲಿದ್ದ ಬೆಳ್ಳಿಯಲ್ಲಿ 5 ಕೆ.ಜಿ. ಯಷ್ಟು ಬೆಳ್ಳಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದು ಮಾರಾಟ ಮಾಡಲು ಬಂದಾತನನ್ನು ಮಾಲೀಕರು ವಿಚಾರಣೆ ನಡೆಸಿದಾಗ ಆತ ತನಗೆ ಬೆಳ್ಳಿ ಕೊಟ್ಟ ಯುವಕನ ಪರಿಚಯ ಹೇಳಿದ. ಬಳಿಕ ಮಾಲೀಕರು ಯುವಕನನ್ನು ಅಂಗಡಿಗೆ ಬರಮಾಡಿ ವಿಚಾರಿಸಿದಾಗ ಆತ ಮಾಡಿದ ತಪ್ಪು ಒಪ್ಪಿಕೊಂಡ. ಬಳಿಕ ಮಾಲೀಕ ಆತನ ಮನೆಯವರಿಗೆ ವಿಷಯ ತಿಳಿಸಿ ಮಾತುಕತೆ ನಡೆದು ಕದ್ದಿರುವ ಬೆಳ್ಳಿಯ ಮೌಲ್ಯವನ್ನು ನೀಡಲು ಆತ ತೀರ್ಮಾನಿಸಿದ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

