ದಕ್ಷಿಣ ಕನ್ನಡ

ಶ್ರೀ ರಾಮ ವಿಠಲ ಪ್ರಶಸ್ತಿ ಪ್ರದಾನ 30ರಂದು

Published On :

ಉಡುಪಿ: ಕೃಷ್ಣ ಮಠದ ಪರ್ಯಾಯ ಕಾಣಿಯೂರು ಮಠ ಆಶ್ರಯದಲ್ಲಿ ಪೇಜಾವರ ಮಠ ಆಯೋಜನೆಯಲ್ಲಿ ವಾರ್ಷಿಕ ಶ್ರೀರಾಮವಿಠಲ ಪ್ರಶಸ್ತಿ ಪ್ರದಾನ ಸಮಾರಂಭ ಮೇ 30ರಂದು ಸಂಜೆ 5.30ರಿಂದ 9 ಗಂಟೆವರೆಗೆ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಪರ್ಯಾಯ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು ವಹಿಸಲಿದ್ದಾರೆ. ಪ್ರಶಸ್ತಿಗಳನ್ನು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಪ್ರದಾನ ಮಾಡಲಿದ್ದು, ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರು ಸಾನಿಧ್ಯ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮ ನಂತರ ಸಾಲಿಗ್ರಾಮ ಮೇಳದ ಕಲಾವಿದರಿಂದ 'ಶ್ರೀ ಕೃಷ್ಣ ಪಾರಿಜಾತ' ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಬಾರಿ ಹರಿಕೃಷ್ಣ ಪುನರೂರು (ಸಾಹಿತ್ಯ- ಸಂಸ್ಕೃತಿ), ಕುದ್ಯಾರು ವೆಂಕಟರಮಣ ಉಪಾಧ್ಯಾಯ (ಸಂಗೀತ), ಆನಂದ ಸಿ. ಕುಂದರ್ (ಸಮಾಜ ಸೇವೆ), ಎಸ್.ವಿ. ಭಟ್ (ಸಾಂಸ್ಕೃತಿಕ ಸಂಘಟನೆ), ನಾರಾಯಣ ಭಟ್ ಟಿ. (ಶಿಕ್ಷಣ- ಸಂಘಟನೆ), ಪದ್ಯಾಣ ಶಂಕರನಾರಾಯಣ ಭಟ್ (ಯಕ್ಷಗಾನ), ಆನಂತ ಪದ್ಮನಾಭ ಶಾಸ್ತ್ರಿ (ಸಂಸ್ಕೃತ), ಹೊಸ್ತೋಟ ಮಂಜುನಾಥ ಭಾಗವತ್ (ಯಕ್ಷಗಾನ), ಕೆ. ಸೇಸಪ್ಪ ರೈ (ಶಿಕ್ಷಣ - ಸಂಘಟನೆ), ಮೊಳಹಳ್ಳಿ ಹೆರಿಯ ನಾಯ್ಕ್ (ಯಕ್ಷಗಾನ), ನಾಗೇಶ ಬಪ್ಪನಾಡು (ನಾಗಸ್ವರ ವಾದನ) ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.