ಧಾರವಾಡ

ಮಹಿಳೆಯರಿಗೆ ಅವಕಾಶ ನೀಡಿ

Published On :

ಕಲಘಟಗಿ:  ಎಲ್ಲ ರಂಗದಲ್ಲೂ ತನ್ನದೇ ಆದ ಚಾಪು ಮೂಡಿಸಿರುವ ಮಹಿಳೆಗೆ ಎಲ್ಲ ರಂಗದಲ್ಲಿ ಅವಕಾಶ ನೀಡಬೇಕೆಂದು ಬಿಡಿಎಸ್.ಎಸ್ ಸಂಸ್ಥೆಯ ನಿರ್ದೇಶಕ ರೆ. ಫಾದರ್ ರಾಯಪ್ಪ ಎಚ್. ಹೇಳಿದರು.
ಬಿಡಿಎಸ್.ಎಸ್ ಸಂಸ್ಥೆ ಧಾರವಾಡ ಹಾಗೂ ಮಹಿಳಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ಮಲಕನಕೊಪ್ಪ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಕ್ಕಳ ಹಕ್ಕುಗಳ ಜಾಗ್ರತಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಕೆ.ಸಿ. ಮಲ್ಲಿಗವಾಡ ಮಾತನಾಡಿ, ಹೆಣ್ಣು ಹುಣ್ಣಲ್ಲ, ಸಮಾಜದ ಕಣ್ಣು. ಮಾತೇ ಜಗದ ರಕ್ಷಕಿ ಎಂಬಂತೆ ಹೆಣ್ಣು ಸಹೋದರಿಯಾಗಿ, ಪತ್ನಿಯಾಗಿ, ತಾಯಿಯಾಗಿ, ಪ್ರೀತಿಯ ತವರಾಗಿ, ಬದುಕಿಗೆ ಬೆಲೆ ತಂದವಳು. ಮಹಿಳೆಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ನೀಡಿ ಗೌರವಿಸಬೇಕು ಎಂದರು.
ವಕೀಲರಾದ ಕೆ.ಬಿ. ಗುಡಿಹಾಳ, ಜಿ.ಕೆ. ಜೂಜಾರಿ, ಡಾ. ಫಾ.ಪಿ.ಜೆ. ಜಾಕೋಬ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕಮಲವ್ವ ಕುರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಸರೋಜಾ ವಡ್ಡರ, ಎಸ್.ಡಿಎಂಸಿ ಅಧ್ಯಕ್ಷ ಅಶೋಕ ಯಡೆಣ್ಣವರ, ಅನಸಮ್ಮ ಸ್ವಾದಿ, ಮಾಂತವ್ವ ಹಿರೇಮಠ, ಶಿವಪುತ್ರಪ್ಪ ಅಂಗಡಿ, ಗಂಗಪ್ಪ ಕುಬಿಹಾಳ, ಸಂಸ್ಥೆಯ ಸಹ ನಿರ್ದೇಶಕ  ಫಾ. ಜಾಕೋಬ್ ಅಂತೋನಿ, ಮಹಿಳಾ ಸಾಂತ್ವನ ಕೇಂದ್ರದ ಮಂಜುಳಾ ಬೋಳಣ್ಣವರ, ಸಂಯೋಜಕರಾದ ಕೆ. ಬಿ.ಕಟ್ಟಿಮನಿ, ಬಸವರಾಜ ಇಂದೂರ, ಶಂಕರ ಚವ್ಹಾಣ, ಪ್ರವೀಣ ಬುತಕಿ ಇದ್ದರು.
ನಾಲ್ಕು ವರ್ಷಗಳಿಂದ ಮಾರ್ಗದರ್ಶನ ನೀಡುತ್ತಿರುವ ಸಂಸ್ಥೆಯ ನಿರ್ದೇಶಕ ರೆ. ಫಾದರ್ ರಾಯಪ್ಪಾ ಎಚ್. ಅವರನ್ನು ಮಲಕನಕೊಪ್ಪ ಗ್ರಾಮ ಸ್ವ ಸಹಾಯ ಸಂಘಗಳ ಸದಸ್ಯರು ಸನ್ಮಾನಿಸಿದರು.
ತಾವರಗೆರೆ ಕಲ್ಮೇಶ್ವರ ಹೊಲಿಗೆ ತರಬೇತಿ ಕೇಂದ್ರದ ಬಾಲಕಿಯರು ಬಾಲ್ಯವಿವಾಹದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಥೆಯ ಉತ್ತೇಜಕ ನಾರಾಯಣ ಗರಗ, ಲಕ್ಕೇಶ ಕೊಪ್ಪದ ಸಂಘಟಿಸಿದ್ದರು. ಸುಷ್ಮಾ ಕೋಳೂರ ಸ್ವಾಗತಿಸಿದರು. ಮಾಲಾ ಕೆಂಚಗೌಡರ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.