ಧಾರವಾಡ

ಸಾಧಕರಿಗೆ ಮಾದರಿ ಜಗಜೀವನರಾಮ

Published On :

ಧಾರವಾಡ:  ದೇಶದ ಮಹಾನ್ ಜನನಾಯಕರಲ್ಲಿ ಒಬ್ಬರಾಗಿದ್ದ ಡಾ. ಬಾಬು ಜಗಜೀವನರಾಮ್ ಅವರು ಸಾಧಿಸಬೇಕಾಗಿರುವ ಗುರಿಯನ್ನು ತಲುಪುವ ಸಾಧಕರಿಗೆ ಉತ್ತಮ ಮಾದರಿ ಎಂದು ಜಿಲ್ಲಾಧಿಕಾರಿ ಸಮೀರ ಶುಕ್ಲ ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಪಂ ಜಂಟಿಯಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ. ಬಾಬು ಜಗಜೀವನರಾಮ ಅವರ 106ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜಿಪಂ ಸಿಇಓ ಪಿ.ಎ. ಮೇಘಣ್ಣವರ, ಹು-ಧಾ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ಹಾಗೂ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಡಾ. ಜಗಜೀವನರಾಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿದರು. ಕಲಾವಿದ ಪ್ರಕಾಶ ಮಲ್ಲಿಗವಾಡ ತಂಡದವರಿಂದ ಡಾ. ಜಗಜೀವನರಾಮ ಅವರ ಜೀವನ ಸಂದೇಶ ಸಾರುವ ಗೀತೆಗಳ ಗಾಯನ ಕಾರ್ಯಕ್ರಮವನ್ನು ವೈ.ಎಂ. ಮಳಗಿ ಹಾಗೂ ಹಾರ್ಮೋನಿಯಂ ವಾದಕ ಮೊಹಮ್ಮದ ಷಫಿ ಪ್ರಸ್ತುತಪಡಿಸಿದರು. ಉಮೇಶ ಪಾಟೀಲ ತಬಲಾ ಸಾಥ್ ನೀಡಿದರು. ಪ್ರಭು ಹಂಚಿನಾಳ ನಿರ್ದೇಶಿತ ಹಾಗೂ ಸಂತೋಷ ಮಹಾಲೆ ರಚಿಸಿದ ಡಾ. ಜಗಜೀವನರಾಮ ಅವರ ಜೀವನ ಕಥೆಯಾಧಾರಿತ ರೂಪಕವನ್ನು ಕಲಾ ಸಂಗಮ ಸಂಸ್ಥೆಯ ಕಲಾವಿದರು ಪ್ರದರ್ಶಿಸಿದರು. ಮೋಹನ ನಾಗಮ್ಮನವರ ಇದ್ದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅಶೋಕ ಚಲವಾದಿ ಸ್ವಾಗತಿಸಿದರು. ಸಂಗಮೇಶ ಕೆರಿಕಾರ ರೂಪಿಸಿದರು. ವೈ.ಎಂ. ನಾಗಮ್ಮನವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.