ಇಂದು ಕೃತಿ ಬಿಡುಗಡೆ
ಧಾರವಾಡ: ಇಲ್ಲಿನ ಮನೋಹರ ಗ್ರಂಥಮಾಲಾ ಸಹಸ್ರ ದರ್ಶನ ಕಂಡ ಹಿನ್ನೆಲೆಯಲ್ಲಿ 13ರ ಬೆಳಗ್ಗೆ 11ಕ್ಕೆ ಕರ್ನಾಟಕ ಕಾಲೇಜಿನ ಆವರಣದ ಸೃಜನಾ ರಂಗಮಂದಿರದಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದೆ. 80 ವರ್ಷಗಳಿಂದ ಕನ್ನಡ ಸಾರಸ್ವತ ಪ್ರಪಂಚದಲ್ಲಿ ಸಾಹಿತ್ಯದ ಎಲ್ಲ ಪ್ರಕಾರದ ಗ್ರಂಥಗಳನ್ನು ಪ್ರಕಟಿಸುತ್ತ ಬಂದ ಧಾರವಾಡ ಮನೋಹರ ಗ್ರಂಥ ಮಾಲೆ ಈಗ ಸಹಸ್ರ ಚಂದ್ರ ದರ್ಶನ ವರ್ಷದ ಸಂಭ್ರದಲ್ಲಿದೆ. ಈ ವೇಳೆ ರೋಹಿಣಿ ನಿಲೇಕಣಿ ಅವರ ಪ್ರಸಿದ್ಧ ಆಂಗ್ಲ ಕಾದಂಬರಿ ಖಖಿಐಔಔ ಇಕಖಃ ಕನ್ನಡ ಅನುವಾದ ಸತ್ತು ಹುಟ್ಟಿದ್ದು (ಅನುವಾದ ಆರ್ಯ ಆಚಾರ್ಯ), ಖ್ಯಾತ ಕವಿ ಜಯಂತ ಕಾಯ್ಕಿಣಿ ಅವರ ಟೂರಿಂಗ್ ಟಾಕೀಸ್ (ಸಿನೆಮಾ ಕುರಿತ ಕಿರುನೋಟಗಳು) ಕೃತಿಗಳನ್ನು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ನೇರವೇರಿಸುವರು. ಕವಿವಿ ಕುಲಪತಿ ಡಾ.ಎಚ್.ಬಿ. ವಾಲೀಕಾರ ಅಧ್ಯಕ್ಷತೆ ವಹಿಸುವರು. ರೋಹಿಣಿ ನಿಲೇಕಣಿ, ಜಯಂತ ಕಾಯ್ಕಿಣಿ, ಆರ್ಯ ಆಚಾರ್ಯ, ಆನಂದ ನಿಲೇಕಣಿ ಭಾಗವಹಿಸಲಿದ್ದಾರೆಂದು ಮನೋಹರ ಗ್ರಂಥ ಮಾಲೆ ಪ್ರಕಾಶಕ ಡಾ. ರಮಾಕಾಂತ ಜೋಶಿ ಹಾಗೂ ಡಾ. ವೀಣಾ ಶಾಂತೇಶ್ವರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಡಾ ಅಂಬೇಡ್ಕರ್ ಜನ್ಮದಿನಾಚರಣೆ
ಧಾರವಾಡ: ಡಾ ಬಿ.ಆರ್. ಅಂಬೇಡ್ಕರ್ ಅವರ 122ನೇ ಜನ್ಮದಿನವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಜಂಟಿಯಾಗಿ ಏ. 14ರಂದು ಬೆಳಗ್ಗೆ 9.30ಕ್ಕೆ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಹಮ್ಮಿಕೊಂಡಿವೆ. ಡಾ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವಿಸಲಾಗುವುದು. ಸಮಾರಂಭದಲ್ಲಿ ಎಲ್ಲ ಇಲಾಖೆಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಸಮುದಾಯ, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲ ತಿಳಿಸಿದ್ದಾರೆ.
18ರಿಂದ ಆಟದ ಮೂಲಕ ಗಣಿತ ವಿಶೇಷ ಶಿಬಿರ
ಧಾರವಾಡ: ಇಲ್ಲಿನ ಬಾಲ ಬಳಗ ಶಾಲೆ ವತಿಯಿಂದ ಏ. 18ರಿಂದ 28ರ ವರೆಗೆ ಶಾಲೆಯ ಆವರಣದಲ್ಲಿ ಪ್ರತಿದಿನ ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ಆಟದ ಮೂಲಕ ಗಣಿತ ಎಂಬ ವಿಷಯದ ಕುರಿತು ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ 6ರಿಂದ 10 ವರ್ಷದ ಮಕ್ಕಳು ಭಾಗವಹಿಸಬಹುದು. ಮೊದಲು ಹೆಸರು ನೋಂದಾಯಿಸುವ 30 ಮಕ್ಕಳಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿಗೆ 0836-2444467ಗೆ ಸಂಪರ್ಕಿಸಬಹುದೆಂದು ಡಾ. ಸಂಜೀವ ಕುಲಕರ್ಣಿ ತಿಳಿಸಿದ್ದಾರೆ.
ಜೀವನದಲ್ಲಿ ಸತ್ಕಾರ್ಯ ಮಾಡಿ: ಸಿದ್ದಲಿಂಗ ಶ್ರೀ
ಉಪ್ಪಿನಬೆಟಗೇರಿ: 'ಮಂದಿಯೊಳಗ ಚಂದಾಗಿರಬೇಕು, ಶಿವನ ದಯದಿಂದ ಹೋಗುವಾಗ ಮಂದಿಯ ಬಾಯಾಗಿರಬೇಕು' ಎಂಬಂತೆ ಮನುಷ್ಯ ಬದುಕಿರುವಷ್ಟು ಕಾಲ ದಾನ, ಧರ್ಮ, ಪರೋಪಕಾರದಂತಹ ಪುಣ್ಯಕಾರ್ಯಗಳನ್ನು ಮಾಡಬೇಕು ಎಂದು ಹುಲಗತ್ತಿ ಸಿದ್ದಲಿಂಗ ಶ್ರೀಗಳು ಹೇಳಿದರು. ಕರಡಿಗುಡ್ಡ ಗ್ರಾಮದಲ್ಲಿ ಶ್ರೀ ನಂಜುಂಡೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಪಾಪಕೃತ್ಯಗಳನ್ನು ಎಸಗಿದರೆ ಅದರ ಫಲ ಕಟ್ಟಿಟ್ಟ ಬುತ್ತಿ. ಕಾರಣ ನಾವು ಸತ್ಕಾರ್ಯಗಳನ್ನು ಮಾಡಿ ಸದ್ಗತಿ ಹೊಂದಬೇಕು. ಇಂದು ಮಾಡಿದ ಪುಣ್ಯ ಮುಂದೊಂದು ದಿನ ಫಲ ನೀಡುತ್ತದೆ ಎಂದರು. ಬದುಕಿರುವಷ್ಟು ದಿನ ಪರಸ್ಪರರೊಂದಿಗೆ ಪ್ರೀತಿ, ವಿಶ್ವಾಸದಿಂದ ಸಹಬಾಳ್ವೆ ನಡೆಸಿ ಮೋಕ್ಷ ಹೊಂದಬೇಕು ಎಂದರು.
ಪಕ್ಷೇತರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಹುಬ್ಬಳ್ಳಿ: ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ಧಾರವಾಡ ಜಿಲ್ಲೆಯ ವಿವಿಧ ಕ್ಷೇತ್ರಗಳಿಂದ ಶುಕ್ರವಾರ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಧಾರವಾಡ ವಿಧಾನಸಭೆ ಕ್ಷೇತ್ರದಿಂದ ಒಬ್ಬರು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದಿಂದ ಒಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಯ ಮೊದಲ ದಿನವಾಗಿದ್ದ ಬುಧವಾರ (ಏ. 10) ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ಎಸ್ಐಸಿಯುಐ (ಸಿ) ಪಕ್ಷದ ಒಬ್ಬ ಅಭ್ಯರ್ಥಿ ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರು. ಇದುವರೆಗೆ ಒಟ್ಟು ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳಿಂದ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇವರಲ್ಲಿ ಮೂವರು ಪಕ್ಷೇತರ ಅಭ್ಯರ್ಥಿಗಳು ಹಾಗೂ ಒಬ್ಬ ಎಸ್ಐಸಿಯುಐ (ಸಿ) ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಏ. 17 ಅಂತಿಮ ದಿನವಾಗಿದ್ದು, ಈಗಾಗಲೇ ಜಿಲ್ಲೆಯ 7 ಕ್ಷೇತ್ರಗಲ್ಲಿ ಅಭ್ಯರ್ಥಿಗಳಾಗಿ ಘೋಷಿತಗೊಂಡಿರುವ ಬಿಜೆಪಿ, ಕೆಜೆಪಿ, ಕಾಂಗ್ರೆಸ್, ಜೆಡಿಎಸ್ನ ಯಾವುದೇ ಅಭ್ಯರ್ಥಿಗಳು ಈವರೆಗೆ ನಾಮಪತ್ರ ಸಲ್ಲಿಸಿಲ್ಲ.
ಧಾರವಾಡದಲ್ಲಿ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ಮೊದಲ ದಿನ ಬುಧವಾರ ಎರಡು ನಾಮಪತ್ರ ಸಲ್ಲಿಕೆಯಾಗಿದ್ದರೆ, ಶುಕ್ರವಾರವೂ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ. ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿ ಈರಪ್ಪ ಮುಶಪ್ಪ ಮುರಾರಿ ಹಾಗೂ ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಡಾ. ಕೆ.ಕೆ. ಪದ್ಮರಾಜನ್ ನಾಮಪತ್ರ ಸಲ್ಲಿಸಿದ್ದಾರೆ. ಶುಕ್ರವಾರ ಉಳಿದ ಐದು ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರವನ್ನು ಯಾರೂ ನಾಮಪತ್ರ ಸಲ್ಲಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

