ಧಾರವಾಡ

ಕಿಶೋರ್ ಸ್ಮರಣೆ ಸಂಗೀತ ಸಂಜೆ

Published On :

ಧಾರವಾಡ: ಹಿಂದಿ ಚಿತ್ರರಂಗ ಕಂಡ ಅಪರೂಪದ ಗಾಯಕ, ನಟ, ನಿರ್ಮಾಪಕ, ನಿರ್ದೇಶಕ ಕಿಶೋರ್ ಕುಮಾರ್ ಅವರ 84ನೇ ಜನ್ಮದಿನದ ಅಂಗವಾಗಿ ಆ. 4ರಂದು ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಸಂಜೆ 5.30ಕ್ಕೆ 'ಎ ಶ್ಯಾಮ್ ಮಸ್ತಾನಿ' ಹೆಸರಿನ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕಾರ್ಯಕ್ರಮ ಸಂಯೋಜಕ ಸದಾನಂದ ಜಿ. ಕುರಡಿಕೇರಿ, ಹತ್ತು ವರ್ಷಗಳಿಂದ ಕಿಶೋರ ಕುಮಾರ್ ನೆನಪಿನಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ಕಿಶೋರ ಕುಮಾರ ಜನ್ಮದಿನದ ನಿಮಿತ್ತ ಹಾಗೂ ಕ್ಯಾನ್ಸರ್ ರೋಗಿಗಳ ಸಹಾಯಾರ್ಥ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಲಾಭಿಮಾನಿಗಳು ಸಹಾಯ ನೀಡಿದ ಹಣವನ್ನು ಸಮಾರಂಭದಲ್ಲಿಯೇ ಕ್ಯಾನ್ಸರ್ ರೋಗಿಗಳಿಗೆ ವಿತರಿಸಲಾಗುವುದು ಎಂದರು.
ಕಿಶೋರ್ ಕುಮಾರ್ ಹಾಡಿದ ಪ್ರೇಮಭರಿತ, ಹಾಸ್ಯ ಹಾಗೂ ಸದಾ ಗುನುಗುನಿಸುವ ಹಾಡುಗಳನ್ನು ಸದಾನಂದ ಕುರಡಿಕೇರಿ, ಇತರ ಕಲಾವಿದರಾದ ಯು.ಡಿ. ಬಾದಾಮಿ, ಮುಂಬೈನ ಬಸವರಾಜ ಶಿರಸಂಗಿ, ವೀಣಾ ಬನ್ನೂರ ಹಾಗೂ ಪ್ರತಿಭಾ ಪ್ರಸ್ತುತಪಡಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡಾದ ಉಪ ಮಹಾಪ್ರಬಂಧಕ ಗಣೇಶ ಕುಮಾರ, ಶಾಸಕರಾದ ಅರವಿಂದ ಬೆಲ್ಲದ ಹಾಗೂ ವಿನಯ ಕುಲಕರ್ಣಿ ಭಾಗವಹಿಸುತ್ತಾರೆ. ಅತಿಥಿಗಳಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಾಯಕ ಮಹಾಪ್ರಬಂಧಕರಾದ ಲಕ್ಷ್ಮೀ ಭಟ್, ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ನಿರ್ಣಾಯಕರಾದ ಟಿ.ಜಿ. ಉಪಾಧ್ಯಾಯ, ಆರ್. ಫ್ರಾನ್ಸಿಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡರ ಹಾಗೂ ಅಸ್ಮಿ ಫೌಂಡೇಶನ್ ನಿರ್ದೇಶಕ ವಿಜಯಕುಮಾರ ಪೂಜಾರಿ ಭಾಗವಹಿಸುತ್ತಾರೆ. ಕಿಶೋರ್ ಕುಮಾರ್ ಅಭಿಮಾನಿಗಳು ಆಗಮಿಸುವಂತೆ ಕುರಡಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 87621 90514 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.