ಕುಂಬಳ ಬಳ್ಳಿಯಲ್ಲಿ ನಾಗಪ್ಪ...!
ಕನ್ನಡಪ್ರಭ ವಾರ್ತೆ, ಕುಂದಗೋಳ, ಆ. 11
ಇಂದು ಕಲ್ಲ ನಾಗರ ಕಂಡರೆ ಹಾಲೆರೆಯುವರು, ನಿಜ ನಾಗರ ಕಂಡರೆ ಹೊಡೆಯುವರು ಎಂಬ ಯುಕ್ತಿ ಇದೆ. ಆದರೆ, ಹೀಗೆ ಇಲ್ಲಿನ ಮಾನಪ್ಪನ ಮಠದ ಪ್ಲಾಟ ಸ್ಥಳದಲ್ಲಿ ಅರ್ಜುನಪ್ಪ ಕಮ್ಮಾರ ಅವರ ಖಾಲಿ ನಿವೇಶನದಲ್ಲಿ ಕುಂಬಳ ಬಳ್ಳಿಯಲ್ಲಿ ಹೆಡೆಯೆತ್ತಿ ಕುಳಿತ ನಾಗಪ್ಪನಿಗೆ ಅವ್ವನ ಪಾಲ, ಅಪ್ಪನ ಪಾಲ, ಅಮ್ಮನ ಪಾಲ, ಅಜ್ಜನ ಪಾಲ, ಅಣ್ಣನ ಪಾಲ, ತಂಗಿಪಾಲ ಎಂದು ಹಾಲೆರೆಯುತ್ತಿರುವುದು ಕಂಡು ಬಂದಿದೆ.
ಕುಂಬಳ ಬಳ್ಳಿಯಲ್ಲಿ ಪ್ರತ್ಯಕ್ಷನಾದ ನಾಗಪ್ಪನಿಗೆ ಹಾಲು ಎರೆಯುತ್ತಿರುವ ದೃಶ್ಯ ಕಂಡ ಜನಸಾಮಾನ್ಯರು ನಾಗಪ್ಪನನ್ನು ನೋಡಲು ಹರಿದು ಬರುತ್ತಿತ್ತು. ಕುಂಬಳಕಾಯಿ ನಾಗಪ್ಪನನ್ನು ಕಂಡು ಕೆಲವರು ಭಕ್ತಿಯಿಂದ ಹಾಲೆರೆಯುತ್ತಿದ್ದರೆ, ಇನ್ನೂ ಕೆಲವರು ಭಕ್ತಿಯಿಂದ ನಮಿಸುತ್ತಿದ್ದರು. ಕೆಲ ಸಾರ್ವಜನಿಕರು ಕುಂಬಳಕಾಯಿ ಬಳ್ಳಿಯಲ್ಲಿನ ನಾಗಪ್ಪನ ಸೃಷ್ಟಿ ಕಂಡು ಕಂಗಾಲಾದರೆ, ನಾಗರ ಹೆಡೆಯೆತ್ತಿ ನಿಂತಿದ್ದ ಬಳ್ಳಿ ಮಾತ್ರ ಸಾಯಿ ಟೇಲರ್ ದಂಪತಿಯಿಂದ ಹಾಲೆರೆಸಿಕೊಳ್ಳುತ್ತಿತ್ತು. ಬಳುಕುವ ಈ ಬಳ್ಳಿಯ ತುದಿಯಲ್ಲಿ ನಾಗರ ಹೆಡೆಯಾಕಾರ ಕಂಡು ಬಂದಿದ್ದು, ಜನನಿಬಿಡದ ಪ್ರದೇಶದಲ್ಲಿ ಹಾಲೆರೆಯುವ ಭಕ್ತರ ಕಣ್ಣಿಗೆ ಕಂಡಿತು. ಸಾರ್ವಜನಿಕರ ಕಣ್ಣಿಗೆ ಕಂಡ ಬಳ್ಳಿಯ ಹೆಡೆಗೆ ಭಾನುವಾರ ನಾಗರ ಪಂಚಮಿಯಾದ್ದರಿಂದ ಕೊಕ್ಕಾಬತ್ತಿ, ಕಾಡಿಗೆ ಬತ್ತಿ, ಕುಂಕುಮ, ಭಂಡಾರದೊಂದಿಗೆ ವಿಧ ವಿಧವಾದ ಹೂಗಳಿಂದ ಅಲಂಕರಿಸಿ ಪೂಜಿಸಿ, ಹಾಲೆರೆಯಲಾಗಿತ್ತು. ಇದೊಂದು ಅಪರೂಪದ ಪರಿಸರದ ಬೆಳವಣಿಗೆಯಾಗಿದ್ದು, ಕುಂಬಳ ಬಳ್ಳಿಯು ಬೊಡ್ಡೆಯಲ್ಲಿ ಚಿಕ್ಕದಾಗಿ ತನ್ನ ಕೊನೆಯಂಚಿನಲ್ಲಿ ನಾಗರ ಹಾವಿನಂತೆ ಹೆಡೆಬಿಚ್ಚಿ ಎದ್ದು ನಿಂತಿರುವುದನ್ನು ಕಂಡ ಸ್ಥಳೀಯ ಪ್ಲಾಟಿನ ಜನತೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿ, ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದರೆಂದು ಸಾಯಿ ಟೇಲರ್ ಮಾಲೀಕ ಹೇಳುತ್ತಾರೆ. ಪ್ರಸಕ್ತ ನಾಗರ ಪಂಚಮಿ ಶುಭ ದಿನದಲ್ಲಿ ಕುಂಬಳ ಬಳ್ಳಿಯಲ್ಲಿ ನಾಗಪ್ಪ ಸೃಷ್ಟಿಯಾಗಿರುವುದನ್ನು ಕಂಡ ಜನತೆ ಭಕ್ತಿಯನ್ನು ಸಮರ್ಪಿಸಿ, ಪಂಚಮಿಯನ್ನು ಆಚರಿಸಿದರು.
-ಶೀತಲ ಎಸ್. ಮುರಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

