ಬೀಟೆ ಕಟ್ಟಿಗೆ ವಶ: ಇಬ್ಬರ ಬಂಧನ
ಜೋಯಿಡಾ: ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈಚೆಗೆ ಬೀಟೆ ಮರವನ್ನು ಕಡಿದು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿತರಿಂದ ಕಟ್ಟಿಗೆ ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕೃಷ್ಣ ಬಾಬುರಾವ್ ಅಣಶಿಕರ್ ಹಾಗೂ ಪ್ರಕಾಶ ಕೃಷ್ಣ ಅಣಶಿಕರ ಬಂಧಿತ ಆರೋಪಿಗಳು. ಅವರಿಬ್ಬರೂ ಜೋಯಿಡಾ ತಾಲೂಕಿನ ಅಣಶಿ ನಿವಾಸಿಗಳು.
ಈಚೆಗೆ ಅವರಿಬ್ಬರೂ ಅಣಶಿ ಸಮೀಪದ ನಿಗುಂಡಿ ಗ್ರಾಮದ ಮೈಂಗಿಣಿ ಘಟ್ಟದಲ್ಲಿ ಬೀಟೆ ಮರವನ್ನು ಕಡಿದು ಸಾಗಿಸುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅವರಿಬ್ಬರನ್ನು ಬಂಧಿಸಿದರು. ಬಂಧಿತರಿಂದ ರು. 30 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಕಟ್ಟಿಗೆ, ಗರಗಸ, ಬಾಚಿ, ಹೆಡ್ಲೈಟ್, ಹಿರೋ ಹೊಂಡಾ ಫ್ಯಾಶನ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಅಣಶಿ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ ಎಸ್., ಅಣಶಿ ವಲಯ ಅರಣ್ಯ ಅಧಿಕಾರಿ ಪಿ.ಆರ್. ಮಂಜುನಾಥ, ಉಪ ವಲಯ ಅರಣ್ಯ ಅಧಿಕಾರಿಗಳಾದ ಜಿ.ಐ. ನಾಯ್ಕ, ಆರ್.ಜಿ. ನಾಯ್ಕ ಮತ್ತಿತರ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅಕ್ರಮ ಕಟ್ಟಿಗೆ ಸಾಗಾಟ ಪ್ರಕರಣದಲ್ಲಿ ಆರೋಪಿಗಳು ಪರಾರಿಯಾಗುತ್ತಿದ್ದುದೇ ಹೆಚ್ಚು. ಆದರೆ ಎಸಿಎಫ್ ಬಾಲಕೃಷ್ಣ ಹಾಗೂ ಆರ್ಎಫ್ಒ ಪಿ.ಆರ್. ಮಂಜುನಾಥ ಚಾಕಚಕ್ಯತೆಯಿಂದ ಆರೋಪಿಗಳು ತಪ್ಪಿಸಿಕೊಳ್ಳದಂತೆ ಬಲೆ ಬೀಸಿದರು. ಅರಣ್ಯ ರಕ್ಷಕರಾದ ಜಗದೀಶ ಬಿ. ಮಸಳಿ, ರಮೇಶ ಎಂ. ಡಂಬಳ, ಬಸವರಾಜ ಪಾಟೀಲ, ಮಲ್ಲಿಕಾರ್ಜುನ ಸಿ. ಭಂಡಾರಿ ಹಾಗೂ ಅರಣ್ಯ ವೀಕ್ಷಕ ರಾಘವೇಂದ್ರ ಜಿ. ನಾಯ್ಕ ಅವರೊಂದಿಗೆ ಸಾಕಷ್ಟು ಪೂರ್ವತಯಾರಿಯಿಂದ ಕಾರ್ಯಾಚರಣೆ ನಡೆಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

