ರಾಘವೇಶ್ವರಶ್ರೀ ಚಾತುರ್ಮಾಸ್ಯ
ಹುಬ್ಬಳ್ಳಿ: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ಚಾತುರ್ಮಾಸ್ಯ ಕಾರ್ಯಕ್ರಮ ದಕ್ಷಿಣ ಜಿಲ್ಲೆಯ ಪುತ್ತೂರು ತಾಲೂಕಿನ ಮಾಣಿಮಠದಲ್ಲಿ ನಡೆಯುತ್ತಿದೆ ಎಂದು ವಲಯ ಸಮಿತಿಯ ಅಧ್ಯಕ್ಷ ಪುರಂದರ ಹೆಗಡೆ ತಿಳಿಸಿದ್ದಾರೆ. ಚಾತುರ್ಮಾಸ್ಯ ಕಾರ್ಯಕ್ರಮದ ಅಂಗವಾಗಿ ಶ್ರೀಮಠದ ಹುಬ್ಬಳ್ಳಿ- ಧಾರವಾಡ ವಲಯದ ಭಕ್ತರು ತಮ್ಮ ಒಂದು ದಿನದ ಸೇವೆ ಸಲ್ಲಿಸುವುದಕ್ಕೆ ಅವಕಾಶ ನೀಡಿದ್ದಾರೆ. ಆ. 25ರಂದು ಒಂದು ದಿನದ ಸರ್ವಸೇವೆ, ಪಾದಪೂಜೆ ಹಾಗೂ ಭಿಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಣಿಮಠಕ್ಕೆ ತೆರಳಲು ವಲಯ ಸಮಿತಿ ವತಿಯಿಂದ ಆ. 24ರಂದು ಬಸ್ ವ್ಯವಸ್ಥೆ ಮಾಡಲಾಗಿದ್ದು, ಧಾರವಾಡದಿಂದ ಸಂಜೆ 7ಕ್ಕೆ ಹೊರಡುತ್ತದೆ. ಹುಬ್ಬಳ್ಳಿಯಿಂದ ಅದೇ ದಿನ ಸಂಜೆ 8ಕ್ಕೆ ಬಸ್ ಹೊರಡಲಿದೆ. ಹೆಚ್ಚಿನ ಮಾಹಿತಿಗೆ ಪ್ರಮೋದ ಪಂಡಿತ್ ಮೊ. 9448309873 ಅಥವಾ ಗಜಾನನ ಭಾಗವತ್ ಮೊ. 9448590427 ಇವರನ್ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಕಸ ವಿಲೇವಾರಿ
ಕುರಿತು ಜನ ಜಾಗೃತಿ
ಧಾರವಾಡ: ಹುಬ್ಬಳ್ಳಿ- ಧಾರವಾಡ ಮಹಾನಗರ ಸಮಗ್ರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳನ್ನೊಳಗೊಂಡ ಜಂಟಿ ಹೋರಾಟ ಕ್ರಿಯಾ ಸಮಿತಿಯು ಅವಳಿ ನಗರದ ಕಸ ವಿಲೇವಾರಿ ಕುರಿತು ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಾಗೃತಿ ಆಂದೋಲನದ ಮೊದಲ ಹಂತದಲ್ಲಿ ಸ್ವಾತಂತ್ರ್ಯೋತ್ಸವ ದಿನದಿಂದ ಪ್ರಾರಂಭಿಸಿ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಮಹಾನಗರದ ವಿವಿಧ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ ಕಸ ವಿಲೇವಾರಿ ಕುರಿತು ಜನ ಜಾಗೃತಿ ಆಂದೋಲನ ಬಗ್ಗೆ ತಿಳುವಳಿಕೆ ಕೊಟ್ಟು ಸಾರ್ವಜನಿಕರ ಸಹಿ ಸಂಗ್ರಹ ಮಾಡಿಸಲಾಗುತ್ತದೆ. ಅಲ್ಲದೆ ತಮ್ಮ ಮನೆಯ ಮುಂದೆ ಸ್ಥಳಾವಕಾಶವಿದ್ದರೆ ಅಥವಾ ತಮ್ಮ ಬಡಾವಣೆಗಳ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕುರಿತು ಸಹ ಮನವಿ ಮಾಡಲಿದ್ದಾರೆ. ಈ ಆಂದೋಲನಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕೆಂದು ಸಮಗ್ರ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಎಂ.ಬಿ. ಕಟ್ಟಿ ಪ್ರಕಟಣೆ ಮೂಲಕ ಕೋರಿದ್ದಾರೆ.
ಇಂದಿನಿಂದ ಕಾನೂನುಭಂಗ ಚಳವಳಿ: ಹಿರೇಮಠ
ಗದಗ: ಸರ್ಕಾರಿ ಸ್ವಾಮ್ಯದ ಎನ್ಎಂಡಿಸಿಯ ದುರಾಡಳಿತ ತೊಲಗಿಸಿ, ರೈತರಿಗೆ ಆದ ಹಾನಿ ಭರಿಸುವ 1942 ಆಗಸ್ಟ್ ಕ್ರಾಂತಿಯ 71ನೇ ದಿನಾಚರಣೆಯ ಸ್ಮರಣಾರ್ಥ ಆಗಸ್ಟ್ 13 ಮತ್ತು 14ರಂದು ಸಮಾಜ ಪರಿವರ್ತನಾ ಸಮುದಾಯದ ವತಿಯಿಂದ ಸಂಡೂರು ತಾಲೂಕಿನ ಬಸಾಪುರ ಗ್ರಾಮದಲ್ಲಿರುವ ಎನ್ಎಂಡಿಸಿ ಟೌನ್ಶಿಪ್ ಎದುರುಗಡೆ ಜಾಗ್ರತ ರೇಖೆ, ಸವಿನಯ ಕಾನೂನು ಭಂಗ ಚಳವಳಿ ಆಯೋಜಿಸಲಾಗಿದೆ ಎಂದು ಸಮಾಜ ಪರಿವರ್ತನಾ ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಹಿರೇಮಠ, ಕಾರ್ಯದರ್ಶಿ ಐ.ಜಿ. ಪುಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

