ಪ್ರಯತ್ನಶೀಲರಾದರೆ ಉತ್ತಮ ಲಾಭ
ಕನ್ನಡಪ್ರಭ ವಾರ್ತೆ, ಧಾರವಾಡ, ಆ. 16
ಕೃಷಿ ಕ್ಷೇತ್ರದಲ್ಲಿ ಪ್ರಸ್ತುತ ಲಾಭವಿಲ್ಲ ಎಂಬ ದೃಷ್ಟಿಯಿಂದ ಯುವಕರು ಕೃಷಿ ಕಡೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಆದರೆ, ಕೃಷಿಯಲ್ಲಿ ಪ್ರಯತ್ನಶೀಲರಾಗಿ ದುಡಿದರೆ, ಉತ್ತಮ ಲಾಭ ಬಂದೇ ಬರುತ್ತದೆ ಎಂದು ಕೃಷಿ ತಜ್ಞ ಡಾ. ಚಿದಾನಂದ ಮನಸೂರ ಹೇಳಿದರು.
ಇಲ್ಲಿನ ವಿದ್ಯಾವರ್ಧಕ ಸಂಘದ ವತಿಯಿಂದ ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ಶುಕ್ರವಾರ ನಡೆದ ಯುವ ಜಾಗೃತಿ ಸಮಾವೇಶದಲ್ಲಿ 'ಕೃಷಿಯಲ್ಲಿ ಯುವಕರ ಆಸಕ್ತಿ' ಎಂಬ ವಿಷಯದ ಕುರಿತು ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭವಿಷ್ಯದ ಆಹಾರ ಭದ್ರತೆಯ ಸಲುವಾಗಿ ಯುವಕರನ್ನು ಕೃಷಿಯತ್ತ ಗಮನ ಸೆಳೆಯಲು ಸಾಕಷ್ಟು ಯೋಜನೆಗಳನ್ನು ರೂಪಿಸಿವೆ. ಆದರೆ, ಕೃಷಿ ಹೆಸರಿನ ಮೇಲೆ ಕೆಲ ರೈತರು ಹಾಗೂ ಮಧ್ಯವರ್ತಿಗಳು ಸರ್ಕಾರದ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ಕೋಟಿಗಟ್ಟಲೆ ಖರ್ಚು: ವಿಶೇಷವಾಗಿ ರಾಜ್ಯ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಿಸಲು ಆರು ಕೃಷಿ ವಿವಿ ಸ್ಥಾಪನೆಗೊಳಿಸಿದೆ. ಅಲ್ಲದೇ, ಈ ವಿವಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ಮತ್ತು ವಿರ್ದ್ಯ್ಙಾ ವೇತನ ನೀಡಲು ಸಹ ರಾಜ್ಯ ಸರ್ಕಾರ ಅನುಮೋದನೆ ಸಲ್ಲಿಸಿದೆ. ಹಾಗೆಯೇ, ಕೃಷಿಕರಿಗೆ ತಂತ್ರಜ್ಞಾನ ಮತ್ತು ಇತರೆ ಆವಿಷ್ಕಾರಗಳ ಬಗ್ಗೆ ತಿಳಿವಳಿಕೆ ನೀಡುವ ಸಲುವಾಗಿ ಪ್ರತಿವರ್ಷ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಕೃಷಿ ಮೇಳ ನಡೆಸುತ್ತಿದೆ. ಆದರೆ, ಇಂತಹ ಮಹತ್ತರ ಯೋಜನೆಯಲ್ಲಿಯೂ ಯಾರೊಬ್ಬರೂ ಸರಿಯಾದ ಉಪಯೋಗ ಪಡೆದುಕೊಳ್ಳುತ್ತಿಲ್ಲ. ಒಟ್ಟಾರೆಯಾಗಿ ಸರ್ಕಾರ ಮಾಡಿರುವ ಯೋಜನೆಗಳು ಕೆಲವೇ ಕೆಲವರು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಬೆಲೆ ಏರಿಕೆ ನಿಯಂತ್ರಣ ಕುರಿತು ಮಾತನಾಡಿದ ಆರ್ಙಕ ತಜ್ಞ ಡಾ. ಎಂ.ಬಿ. ಘೋಡಕೆ, ಪ್ರಸ್ತುತ ದೇಶದ ಜನಸಂಖ್ಯೆ 126 ಕೋಟಿ ಇದೆ. ಅಂದರೆ, ಪ್ರತಿ ವರ್ಷ 2.5 ಕೋಟಿ ಜನಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಆಹಾರದ ಬೇಡಿಕೆ ಹೆಚ್ಚಾಗುತ್ತಿದ್ದು, ಉತ್ಪಾದನೆ ಮಾತ್ರ ಅಷ್ಟೇ ಇದೆ. ಹಾಗಾಗಿ, ಬೆಲೆ ಏರಿಕೆ ನಿಯಂತ್ರಣವಾಗುತ್ತಿಲ್ಲ. ಅಲ್ಲದೇ, ಪ್ರಮುಖವಾಗಿ ರಾಜಕಾರಣಿಗಳೇ ಬೆಲೆ ಏರಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಸರ್ಕಾರ ಮೇಲಿಂದ ಮೇಲೆ ಬೆಲೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಮೇಲೆ ಆರ್ಙಕ ಹೊರೆ ಹೇರುತ್ತಿದೆ ಎಂದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಜಿ.ಜಿ. ದೊಡವಾಡ, ಗುರು ಹಿರೇಮಠ, ಶಂಕರ ಹಲಗತ್ತಿ ಇದ್ದರು.
ಶೀಘ್ರವೇ ವಸತಿ ನಿಲಯ ಪ್ರವೇಶ ಪಟ್ಟಿ ಪ್ರಕಟಿಸಿ
ಧಾರವಾಡ: ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಸತಿ ನಿಲಯ ಪ್ರವೇಶ ಆಯ್ಕೆ ಪಟ್ಟಿ ಪ್ರಕಟಿಸದ ಕಾರಣ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಶೀಘ್ರವೇ ವಸತಿ ನಿಲಯ ಪ್ರವೇಶ ಪಟ್ಟಿ ಪ್ರಕಟಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಇಲ್ಲಿನ ಉದಯ ಹಾಸ್ಟೆಲ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಕಳೆದ ಮೂರು ದಿನಗಳ ಹಿಂದೆಯಷ್ಟೇ ಈ ಕುರಿತಂತೆ 'ಕನ್ನಡಪ್ರಭ' ವಿಶೇಷ ವರದಿ ಮೂಲಕ ಸರ್ಕಾರದ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಸಂಘಟನೆ ಎಚ್ಚೆತ್ತು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಕಾಲೇಜುಗಳು ಆರಂಭವಾಗಿ ಎರಡು ತಿಂಗಳು ಗತಿಸಿದರೂ ವಸತಿ ನಿಲಯದ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ. ಹಾಗಾಗಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಸದ್ಯ ಪ್ರಚಲಿತದಲ್ಲಿರುವ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಚುನಾವಣೆಗೆ ಮತ್ತು ಈ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಯಾವುದೇ ಸಂಬಂಧವಿಲ್ಲ. ಆದರೂ ಆಯ್ಕೆ ಪಟ್ಟಿಗೆ ನೀತಿ ಸಂಹಿತೆ ಅನ್ವಯ ಮಾಡುವುದು ಸೂಕ್ತ ಕ್ರಮವಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸದ್ಯ ವಸತಿ ನಿಲಯಗಳಿಲ್ಲದೇ, ವಿದ್ಯಾರ್ಥಿಗಳು ಗೆಳೆಯರ ಹಾಗೂ ಸಂಬಂಧಿಕರನ್ನು ಅರಸುತ್ತಿದ್ದಾರೆ. ಅಲ್ಲದೇ, ಈ ವಸತಿ ನಿಲಯಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲವಾಗಿದ್ದು, ವಿದ್ಯಾರ್ಥಿಗಳಿಗೆ ಕಳಪೆ ಊಟ ಮತ್ತು ಉಪಾಹಾರ ನೀಡಲಾಗುತ್ತಿದೆ. ಆದ್ದರಿಂದ ಸರ್ಕಾರ ವಸತಿ ನಿಲಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅಲ್ಲದೇ, ಈಗಾಗಲೇ ಅಂತಿಮಗೊಂಡ ವಸತಿ ನಿಲಯ ಪ್ರವೇಶ ಆಯ್ಕೆ ಪಟ್ಟಿಯನ್ನು ಪ್ರಕಟಗೊಳಿಸಬೇಕೆಂದು ಸಂಘಟನೆ ಒತ್ತಾಯಿಸಿತು. ಸಂಘಟನೆಯ ಜಗದೀಶ ಮಾನೆ, ಪೃಥ್ವಿಕುಮಾರ, ರಾಹುಲ್, ಖಂಡು ಪೂಜಾರಿ, ಪವನ ಗೇಡಪ್ಪನವರ ಮತ್ತಿತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

