ಧಾರವಾಡ

ಸಂಡೂರು ರೈತರಿಗೆ ಪರಿಹಾರ ನೀಡಿ

Published On :

ಧಾರವಾಡ: ಕೇಂದ್ರ ಸರ್ಕಾರ ಅಧೀನದಲ್ಲಿರುವ ಎನ್‌ಎಂಡಿಸಿ ಉದ್ಯಮ ಸಂಸ್ಥೆ ಸಂಡೂರು ತಾಲೂಕಿನಲ್ಲಿ ನಿರ್ಮಿಸಿದ್ದ ಅದಿರಿನ ಟೇಲಿಂಗ್ ಚೆಕ್‌ಡ್ಯಾಂ ಒಡೆದು ಭುಜಂಗನಗರ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶ ರೈತರ ಬೆಳೆಗಳು ಹಾಗೂ ಭೂಮಿ ಫಲವತ್ತತೆ ಹಾಳಾಗಿದೆ. ಈ ಕುರಿತಂತೆ ಎನ್‌ಎಂಡಿಸಿ ರೈತರಿಗೆ ನೀಡಬೇಕಿರುವ ರು. 1.24 ಕೋಟಿ ಪರಿಹಾರ ಶೀಘ್ರವೇ ನೀಡಬೇಕೆಂದು ಸಮಾಜ ಪರಿವರ್ತನಾ ಸಮುದಾಯ ಅಧ್ಯಕ್ಷ ಎಸ್.ಆರ್. ಹಿರೇಮಠ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು, 2010 ಆಗಸ್ಟ್‌ನಲ್ಲಿ ಸುರಿದ ಮಳೆಯಿಂದ ಜಿಲ್ಲೆ ಅತಿವೃಷ್ಟಿಗೆ ಒಳಗಾಗಿತ್ತು. ಇದೇ ಸಂದರ್ಭದಲ್ಲಿ ಎನ್‌ಎಂಡಿಸಿ ನಿರ್ಮಿಸಿದ ಅದಿರಿನ ಟೈಲಿಂಗ್ ಒಡೆದ ಪರಿಣಾಮದಿಂದ ರೈತರ ಬೆಳೆ ಹಾನಿಯಾಗುವುದಲ್ಲದೇ, ಫಲವತ್ತಾದ ಭೂಮಿಗೆ ಅದಿರು ಹಾಗೂ ವಿಷಪೂರಿತ ಮಣ್ಣು ಮಿಶ್ರಣಗೊಂಡಿತ್ತು. ಇದರಿಂದಾಗಿ 180 ರೈತರ 450 ಎಕರೆಗೂ ಹೆಚ್ಚೂ ಭೂಮಿ ಸಂಪೂರ್ಣವಾಗಿ ವಿಷಪೂರಿತವಾಗಿತ್ತು ಎಂದರು.
ಈ ಕುರಿತು ಭುಜಂಗನಗರ ಹಾಗೂ ಹಾನಿಗೊಳಗಾದ ಸುತ್ತಲಿನ ರೈತರು ಪರಿಹಾರ ನೀಡುವಂತೆ ಎನ್‌ಎಂಡಿಸಿಗೆ ಮನವಿ ಮಾಡತೊಡಗಿದರು. ಆದರೆ, ಎನ್‌ಎಂಡಿಸಿ ಕೇವಲ ರು. 17.95 ಲಕ್ಷ ನೀಡಲು ಮುಂದಾಗಿತ್ತು. ಹಾಗಾಗಿ ರೈತರು ಅಸಮಾಧಾನ ವ್ಯಕ್ತಪಡಿಸುವುದಲ್ಲದೇ, ನ್ಯಾಯಕ್ಕಾಗಿ ಹೋರಾಟ ನಡೆಸಿದರು. ಆದರೆ, ಕಂಪನಿ ಮಾತ್ರ ಯಾವುದೇ ಪರಿಹಾರ ನೀಡಲು ಮುಂದಾಗದೇ, ಇದು ಅತಿವೃಷ್ಟಿಯಿಂದಾಗಿದೆ ಎಂದು ಹಾರಿಕೆ ಉತ್ತರ ನೀಡುವ ಮೂಲಕ ರೈತರನ್ನು ವಂಚನೆಗೊಳಿಸುತ್ತಾ ಸಾಗಿತ್ತು. ಈ ಕುರಿತು ಹೋರಾಟ ನಡೆಸುತ್ತಿದ್ದ ರೈತರಿಗೆ ಅಲ್ಲಿನ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೂ ಕಂಪನಿ ಯಾವುದೇ ಪರಿಹಾರ ನೀಡಲು ಮುಂದಾಗಿಲ್ಲ ಎಂದು ಆರೋಪಿಸಿದರು.
ಹಾಗಾಗಿ, ಇತ್ತಿಚೇಗೆ ಸಂಡೂರಿನಲ್ಲಿ ಎರಡು ದಿನಗಳ ಕಾಲ ಸತ್ಯಾಗ್ರಹ ನಡೆಸಲಾಯಿತು. ಅಲ್ಲದೇ, ಎನ್‌ಎಂಡಿಸಿ ಕಂಪನಿಗೆ 30 ದಿನಗಳ ಕಾಲಾವಧಿ ನೀಡಲಾಗಿದೆ. ಅಷ್ಟರೊಳಗಾಗಿ ಕಂಪನಿ ಪರಿಹಾರ ನೀಡದಿದ್ದರೆ, ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಹಿರೇಮಠ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಎನ್. ಸಿಂಹ, ಎಫ್.ಬಿ. ಹಬೀಬ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.