ಧಾರವಾಡ

ಗಮನ ಸೆಳೆದ ಪುಟಾಣಿಗಳು

Published On :

ಧಾರವಾಡ: ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಧಾರವಾಡದ ಅನೇಕ ಶಾಲೆ-ಕಾಲೇಜು ಹಾಗೂ ಕೃಷ್ಣನ ದೇವಸ್ಥಾನಗಳಲ್ಲಿ ಬುಧವಾರ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳು ನಡೆದವು.
ವನಿತಾ ಸೇವಾ ಸಮಾಜದ ಭಾಗೀರಥಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳು ಕೃಷ್ಣ-ರಾಧೆಯರ ವೇಶ-ಭೂಷಣದೊಂದಿಗೆ ಆಗಮಿಸಿ ಕೃಷ್ಣ ಜನ್ಮ ದಿನಾಚರಣೆಯನ್ನು ಉತ್ಸಾಹದಿಂದ ಆಚರಿಸಿದರು. ಸಂಸ್ಥೆಯ ಅಧ್ಯಕ್ಷರಾದ ನಿರ್ಮಲಾತಾಯಿ ಗೋಖಲೆ ಮಕ್ಕಳಿಗೆ ಕೃಷ್ಣನ ಕಥೆ ಹೇಳಿದರು. ಶಿಕ್ಷಕಿಯರಾದ ಭಾಗ್ಯಶ್ರೀ ಮತ್ತು ಚನ್ನಮ್ಮ ಇದ್ದರು.
ಚರಂತಿಮಠ ಗಾರ್ಡನ್: ಇಲ್ಲಿನ ಚರಂತಿಮಠ ಗಾರ್ಡನ್ ಬಡಾವಣೆಯಲ್ಲಿರುವ ನೂತನ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿಯ ವಿಶೇಷದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ೤ ಕೆ.ಎ. ಸಿದ್ಥಾಂತಿ ಮಾತನಾಡಿದರು. ಕೃಷ್ಣ ಬೋಧನೆ, ವ್ಯಕ್ತಿತ್ವ ಸಾರ್ವತ್ರಿಕವಾದದ್ದು. ಆದರ್ಶದ ರಹದಾರಿಯಲ್ಲಿ ಬದುಕಲು ನಿರೂಪಿಸಿರುವ ಕೃಷ್ಣನ ಸಮಷ್ಟಿ ಚಿಂತನೆ ಮಕ್ಕಳ ಬದುಕನ್ನು ತುಂಬಬೇಕಾಗಿದೆ. ಭಗವದ್ಗೀತೆ ಮೂಲಕ ಅರ್ಜುನನನ್ನು ಸಾಂಕೇತಿಕವಾಗಿಟ್ಟುಕೊಂಡು ಸಮಸ್ತ ಮನುಕುಲಕ್ಕೆ ಸಜ್ಜನಿಕೆ ಜೀವನ ವಿಧಾನ, ಕೂಡಿಬಾಳುವ ಜನಸ್ನೇಹಿ ಸಿದ್ಧಾಂತ ಪ್ರತಿಪಾದಿಸಿರುವ ಶ್ರೀಕೃಷ್ಣನು ಯಾವುದೇ ಒಂದು ಸೀಮಿತ ಕೋಮಿನ ಇಲ್ಲವೆ ಜನಾಂಗದ ವ್ಯಾಪ್ತಿಗೆ ಉಳಿಯಬಾರದು ಎಂದರು. ಅಂಜುಮನ್-ಎ-ಇಸ್ಲಾಂ ಮಾಜಿ ಅಧ್ಯಕ್ಷ ಅಬ್ದುಲ್ ಸತ್ತಾರ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅರುಣ ಚರಂತಿಮಠ, ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ ಇದ್ದರು. ಇದಕ್ಕೂ ಮೊದಲು ಶಾಲಾ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷಗಳನ್ನು ತೊಟ್ಟು ಆಕರ್ಷಕ ರೂಪಕಗಳನ್ನು ಪ್ರದರ್ಶಿಸಿದರು. ಜತೆಗೆ ಶಾಲಾ ಅಂಗಳದಲ್ಲಿ ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ ನಡೆಸಿಕೊಡಲಾಯಿತು.
ಪುಟಾಣಿ ಲೋಕದಲ್ಲಿ: ಸಾಧನಕೇರಿಯ ಪುಟಾಣಿ ಲೋಕ ಶಿಶುವಿಹಾರದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಮಕ್ಕಳು ಕೃಷ್ಣ-ರಾಧೆ ವೇಷ ಧರಿಸಿ ಗಮನ ಸೆಳೆದರು. ಶಿಕ್ಷಕಿ ಶೋಭಾ ದೇಶಪಾಂಡೆ ಇದ್ದರು. ಶಿವಾನಂದನಗರದ ಸದ್ಗುರು ಶಿವಾನಂದ ಸೇವಾ ನಿಕೇತನ ನರ್ಸರಿ ಶಾಲೆ, ಮಾಳಮಡ್ಡಿಯ ನವಚೇತನ ಶಿಶುವಿಹಾರದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಕೃಷ್ಣ-ರುಕ್ಮಿಣಿ ವೇಷದಲ್ಲಿರುವ ಚಿಣ್ಣರೊಂದಿಗೆ ಶಿಕ್ಷಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.