ಧಾರವಾಡ ಉತ್ಸವದಲ್ಲಿಂದು...
ಕರ್ನಾಟಕ ಕಾಲೇಜು ಆವರಣ: ಸಂಜೆ 5.30ಕ್ಕೆ ಹರೀಶ್ ತಂಡದ ಫ್ಯೂಷನ್ ಸಂಗೀತ, ಶಿವಾನಿ ಮಿರಜಕರ್ರಿಂದ ಗಾಯನ, ಕೊಣ್ಣೂರು ಜೈಕಿಸಾನ್ ಕಲಾ ತಂಡದಿಂದ ಜೋಗತಿ ನೃತ್ಯ, ಸಾಬರಿ ಬ್ರದರ್ಸ್ ಇವರಿಂದ ಸೂಫಿ ಸಂಗೀತ, ಶ್ರೀನಿವಾಸ ಇಂಚೂರ ತಂಡದಿಂದ ಜಾನಪದ ನೃತ್ಯ, ಸಿದ್ದಿ ಧಮಾಲ್, ನೀರಜ ಶ್ರೀಧರ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ.
ಅಣ್ಣಾಜಿ ಶಿರೂರ ರಂಗಮಂದಿರ: ಸಂಜೆ 6ರಿಂದ ನಾಗಭೂಷಣ, ಡಾ. ಶ್ರೀವಿದ್ಯಾ ಮುರಳೀಧರ ಇವರಿಂದ ನೃತ್ಯ, ಪ್ರೀತಿ ಸುಂದರಾಜನ್ ನೃತ್ಯ, ದೆಹಲಿ ಪಂ. ಬಿಸ್ವಜೀತ ರಾಯ್ ಚೌಧರಿ ಅವರಿಂದ ಸರೋದ್ ವಾದನ.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ: ಸಂಜೆ 6ಕ್ಕೆ ಗೌರಿ ಬುರ್ಲಿ, ಯಮುನಾ ರಾಘವೇಂದ್ರ ಬೆಳಗಲಿ ಅವರ ಗಾಯನ, ಮೇಘಾ ಹುಕ್ಕೇರಿ ಮತ್ತು ವಿಜಯಶ್ರೀ ಅಂಗಡಿ ಇವರಿಂದ ಜುಗಲಬಂದಿ ಗಾಯನ, ರವಿ ಭಜಂತ್ರಿ, ಇಂದುಮತಿ ಸಾಲಿಮಠ, ನರಸಿಂಹ ಜೋಶಿ ಹಾಗೂ ಸುನೀಲ ಪತ್ರಿ ಅವರಿಂದ ಹಾಸ್ಯೋತ್ಸವ.
ಆರ್.ಎಚ್. ದೇಶಪಾಂಡೆ ಸಭಾಭವನ: ಮಧ್ಯಾಹ್ನ 3ರಿಂದ ಉತ್ಸವದ ಅಂಗವಾಗಿ ಕವಿಗೋಷ್ಠಿ
ಡಾ.ಎಂ.ಬಿ.ಪಾಟೀಲ ಸಭಾಭವನ: ಸಂಜೆ 6 ರಿಂದ ಉಮಾ ಹೆಗ್ಡೆ ಮತ್ತು ಶಾಂತಾರಾಮ ಹೆಗ್ಡೆ ಇವರಿಂದ ಗಾಯನ, ಅರಣ್ಯಕುಮಾರ ಇವರಿಂದ ಸಿತಾರವಾದನ, ಗೀತಾ ಆಲೂರು ಇವರಿಂದ ಗಾಯನ.
ಆಲೂರು ವೆಂಕಟರಾವ ಭವನ: ಸಂಜೆ 6ರಿಂದ ಕಲಘಟಗಿಯ ಸಂತೋಷ ಮಾದನಭಾವಿ ಇವರಿಂದ ತತ್ವಪದ, ಎಫ್.ಬಿ ಕಣವಿ ಇವರಿಂದ ಜಾನಪದ ಸಂಗೀತ, ಕುಂದಗೋಳದ ಶಾಂತಪ್ಪ ದ್ಯಾಮಪ್ಪ ಗುಡಕರ ಇವರಿಂದ ಗೊಂದಲಿಗರ ಪದಗಳು, ಕರಿಯಪ್ಪ ಗಾಡದ ಇವರಿಂದ ಭಜನೆ, ಸಂಗೀತಾ ಬೆಂಡಿಗೇರಿ ಇವರಿಂದ ಸಂಪ್ರದಾಯ ಪದಗಳು, ಅಥಣಿಯ ರಾಧಾಬಾಯಿ ಮಾದರ ಇವರಿಂದ ಚೌಡಕಿ ಪದ ಹಾಗೂ ನವಲಗುಂದದ ವೀರೇಶ ಕಿತ್ತೂರ ಇವರಿಂದ ಜಾನಪದ ಸಂಗೀತ ಕಾರ್ಯಕ್ರಮ.
ಸಾಧನಕೇರಿ ಉದ್ಯಾನವನ: ಸಂಜೆ 6ರಿಂದ ಚಂದ್ರು ಡಾನ್ಸ್ , ಮ್ಯಾಡ್ ಮೆನ್ಸ್ ಡಾನ್ಸ್, ಸಾಂಸ್ಕೃತಿಕ ಲೋಕ, ನಾಟ್ಯಲೋಕ ಸ್ಕೂಲ್, ಖುಷಿ ನೃತ್ಯ ಸಂಸ್ಥೆ ಹಾಗೂ ರಾಕ್ ಡಾನ್ಸ್ ಅಕಾಡೆಮಿಗಳ ತಂಡದಿಂದ ನೃತ್ಯ ಕಾರ್ಯಕ್ರಮ.
ರಾಜಗುರು ಬಯಲು ರಂಗಮಂದಿರ: ಸಂಜೆ 6 ರಿಂದ ಮೈಸೂರಿನ ನಟನ ತಂಡದಿಂದ ಅಗ್ನಿ ಪರ್ವ, ಸ್ನೇಹಿತರು ಕಲಾ ಸಂಘದಿಂದ ಅಗ್ನಿ ಶಿಖೆ ಹಾಗೂ ಪಂ. ಪುಟ್ಟರಾಜ ಗವಾಯಿ ಕಲಾ ಸಂಘದಿಂದ ಧರ್ಮ ದೇವತೆ ನಾಟಕಗಳ ಪ್ರದರ್ಶನ.
ರಂಗಾಯಣ ಸಾಂಸ್ಕೃತಿಕ ಸಭಾಭವನ: ಸಂಜೆ 6ರಿಂದ ಮತ್ತಿಗಟ್ಟಿಯ ಹಜರೆಸಾಬ ನದಾಫ ಅವರಿಂದ ಜಾನಪದ ಸಂಗೀತ, ನೀಲಪ್ಪ ತೋಟಗಂಟಿ ಇವರಿಂದ ಗೋರವರ ಕುಣಿತ, ಪರಮೇಶ್ವರ ಕಾಳೆ ಇವರಿಂದ ಜಾನಪದ ನೃತ್ಯ, ಸರೋಜಾ ಹಂಚಿನಮನಿ ಇವರಿಂದ ಸುರಗಿ ಪದ, ಮೊರಬದ ಯಲ್ಲಪ್ಪ ದೇವರಮನಿ ಇವರಿಂದ ಸಣ್ಣಾಟದ ಪದಗಳು, ಕರ್ನಾಟಕ ಕಲಾ ಕಾಲೇಜು ವಿದ್ಯಾರ್ಥಿಗಳ ಡೊಳ್ಳು ಕುಣಿತ ಹಾಗೂ ಯಮನವ್ವ ಮಾದರ ಇವರಿಂದ ಜಾನಪದ ಸಂಗೀತ ಕಾರ್ಯಕ್ರಮ.
ಕಿತ್ತೂರ ಚೆನ್ನಮ್ಮ ಉದ್ಯಾನವನ: ಸಂಜೆ 6ರಿಂದ ಸಾಂಕೇತ ಸ್ಕೂಲ್, ವಿಶ್ವಾಂಬರಿ ನೃತ್ಯ ಶಾಲೆ, ಏ.ಕೆ. ಡಾನ್ಸ್, ಕಲಾರ್ಪಣ, ನಾಟ್ಯ ಸ್ಫೂರ್ತಿ ಹಾಗೂ ರತಿಕಾ ನೃತ್ಯ ನಿಕೇತನ ತಂಡಗಳಿಂದ ನೃತ್ಯ ಕಾರ್ಯಕ್ರಮ. ಆನಂತರ ಮಲ್ಲಿಕಾರ್ಜುನ ತರ್ಲಘಟ್ಟ ಅವರಿಂದ ಸಣ್ಣಾಟ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

