ಧಾರವಾಡ

ಧಾರವಾಡ: ನಾಳೆ ಆಂಗ್ಲ ಭಾಷಾ ಪರಿವಾರ

Published On :

ಧಾರವಾಡ: 18ರಂದು ಕೆಪಿಇಎಸ್ ಪ್ರೌಢಶಾಲೆಯಲ್ಲಿ ಬೆಳಗ್ಗೆ 10ಕ್ಕೆ ಆಂಗ್ಲ ಭಾಷಾ ಪರಿವಾರವನ್ನು ಪ್ರೌಢಶಾಲಾ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾಗಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಹಾಗೂ ರಚನಾತ್ಮಕ ವಿಷಯಗಳನ್ನು ಚರ್ಚಿಸಲಾಗುವುದು. ಧಾರವಾಡ ಶಹರ, ತಾಲೂಕಿನ ಪ್ರೌಢಶಾಲೆಗಳ ಆಂಗ್ಲ ಭಾಷಾ ಶಿಕ್ಷಕರು ಕಡ್ಡಾಯವಾಗಿ ಹಾಜರಿರಲು ಡಿಡಿಪಿಐ ಡಾ. ವರ್ಧನ್ ತಿಳಿಸಿದ್ದಾರೆ.
ಕ್ರೀಡಾ ಸಾಮಗ್ರಿ ಕಳ್ಳತನ
ಧಾರವಾಡ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿನ ಕ್ರೀಡಾ ಸಾಮಗ್ರಿಗಳ ಕಳ್ಳತನವಾದ ಘಟನೆ ನಡೆದಿದೆ. ಕಾಲೇಜಿನ ಕೊಠಡಿಯಲ್ಲಿ ಇಡಲಾಗಿದ್ದ ಸುಮಾರು ರು. 25 ಸಾವಿರ ಮೌಲ್ಯದ ಬ್ಯಾಟ್, ಬಾಲ್, ನೆಟ್ ಮುಂತಾದ ಕ್ರೀಡಾ ಸಾಮಗ್ರಿ ದೋಚಲಾಗಿದೆ ಎಂದು ಕಾಲೇಜಿನ ಭಗವಾನರಾವ್ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಕಸ್ಮಿಕ ಬೆಂಕಿ ತಗುಲಿ 1.50 ಲಕ್ಷ ವಸ್ತು ಹಾನಿ
ಧಾರವಾಡ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹತ್ತಿಕೊಂಡ ಬೆಂಕಿ ಸುಮಾರು ಒಂದೂವರೆ ಲಕ್ಷ ರುಪಾಯಿ ಮೌಲ್ಯದ ಮನೆಯಲ್ಲಿನ ವಸ್ತುಗಳು ಹಾನಿ ಮಾಡಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಧಾರವಾಡ ಉತ್ಸವದ ಬಂದೋಬಸ್ತ್‌ನಲ್ಲಿದ್ದ ಪೇದೆ ಎಸ್.ಎನ್. ಹೊಸಮನಿ ಅವರ ಪೊಲೀಸ್ ಕ್ವಾಟರ್ಸ್‌ನಲ್ಲಿ ಮನೆ ಬೆಂಕಿಗೆ ಆಹುತಿಯಾಗಿದ್ದು, ಕಂಪ್ಯೂಟರ್‌ನಿಂದಾದ ಶಾರ್ಟ್ ಸರ್ಕೂಟ್ ಈ ಅನಾಹುತಕ್ಕೆ ಕಾರಣ ಎಂದು ಗೊತ್ತಾಗಿದೆ. ಈ ಘಟನೆಯಲ್ಲಿ ಕಂಪ್ಯೂಟರ್, ಮನೆಯಲ್ಲಿ ವಸ್ತುಗಳು ಸುಟ್ಟಿವೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ವೈದ್ಯವಿದ್ಯಾರ್ಥಿನಿ ಸಾವು
ತುಮಕೂರು: ಲಾರಿಯೊಂದು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ವೈದ್ಯ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಸಮೀಪದ ಜೋಗಿಹಳ್ಳಿಯಲ್ಲಿ ನಡೆದಿದೆ. ಹೇಮಾವತಿ(24) ಮೃತಪಟ್ಟ ದುರ್ದೈವಿ. ಈಕೆ ಹುಬ್ಬಳ್ಳಿಯಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಓದುತ್ತಿದ್ದಳು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಜೋಗಿಹಳ್ಳಿಯಲ್ಲಿ ಊಟಕ್ಕೆಂದು ಬಸ್ ನಿಲ್ಲಿಸಿದ್ದರು. ಆಗ ಹಿಂಬದಿಯಿಂದ ಬಂದ ಖಾಸಗಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.