ಶೆಟ್ಟರ್ ಜನ್ಮದಿನಾಚರಣೆ
ಧಾರವಾಡ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ 59ನೇ ಹುಟ್ಟು ಹಬ್ಬವನ್ನು ಬಿಜೆಪಿ ಸ್ಲಂ ಮೋರ್ಚಾ ವತಿಯಿಂದ ನಗರದ ಕೊಪ್ಪದಕೇರಿಯ ಮಮತಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಹಣ್ಣು ಹಂಪಲು ವಿತರಿಸುವುದರ ಮೂಲಕ ಆಚರಿಸಲಾಯಿತು. ಈರೇಶ ಅಂಚಟಗೇರಿ, ಮಂಜುನಾಥ ಚೋಳಪ್ಪನರ, ರಾಕೇಶ ದೊಡಮನಿ, ಮಂಜು ಹನಸಿ, ಬಸವರಾಜ ಬಾಳಗಿ, ಅನಿಲ ಹಳಕಟ್ಟಿ, ಜಗದೀಶ ಹೆಸರೂರ, ಸತೀಶ ಕಿಟದಾಳ, ಬಸು ತುರಮರಿ, ಸಿದ್ಧು ಕಲ್ಯಾಣಶೆಟ್ಟಿ, ಮುರುಗೇಶ ಹೊನ್ನಕೇರಿ ಇದ್ದರು. ಅದೇ ರೀತಿ ಧಾರವಾಡ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಜಗದೀಶ ಶೆಟ್ಟರ್ ಅವರ ಹುಟ್ಟು ಹಬ್ಬ ಆಚರಿಸಲಾಯಿತು. ಸಂಘದ ಅಧ್ಯಕ್ಷ ಸುಭಾಸ ಪಾಟೀಲ, ಉಪಾಧ್ಯಕ್ಷ ಎನ್.ಪಿ. ಅಷ್ಟಗಿ, ಸಿ.ಬಿ. ಮೊರಬದ, ಶರದ ದೊಡ್ಡಮನಿ, ಎ.ಎನ್. ಮಾಣಿಕ, ವಿ.ಎಸ್. ಪಾಟೀಲ ಮತ್ತಿತರರು ಇದ್ದರು.
ಇಂದು ಬ್ಯಾಂಕ್ ಮುಷ್ಕರ
ಹುಬ್ಬಳ್ಳಿ: ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ವಿಜಯಾ ಬ್ಯಾಂಕ್ ಎದುರು ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಂಗಳವಾರ ಪೂರ್ವಭಾವಿ ಸಭೆ ನಡೆಸಿದರು. ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ಕರೆಯ ಮೇರೆಗೆ ರಾಷ್ಟ್ರದಾದ್ಯಂತ ಡಿ. 18ರಂದು ನಡೆಯಲಿರುವ ಮುಷ್ಕರದ ಹಿನ್ನೆಲೆಯಲ್ಲಿ ವೇದಿಕೆ ಹುಬ್ಬಳ್ಳಿ ಘಟಕದ ಆಶ್ರಯದಲ್ಲಿ ಈ ಸಭೆ ನಡೆಯಿತು. ವೇತನ ಮರುಪರಿಶೀಲನೆ, ಹೊರಗುತ್ತಿಗೆ ಸೇವೆ ತಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದಾರೆ. ವೇದಿಕೆ ಹುಬ್ಬಳ್ಳಿ ಘಟಕದ ಸಂಚಾಲಕ ರವೀಂದ್ರನಾಥ ಪೈ, ಎ.ಎಂ. ಹೆಬಸೂರ, ಎಂ.ಡಿ. ದೇಶಪಾಂಡೆ, ಸ್ಟೆಫನ್ ಜಯಚಂದ್ರ, ಮಿಲಿಂದ ಕಟ್ಟಿ, ಸಿ.ಜೆ. ಬಸ್ತಿ ಮತ್ತಿತರರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಇಂದು ಕ್ಯಾಲೆಂಡರ್ ಬಿಡುಗಡೆ
ಅಣ್ಣಿಗೇರಿ: ಸ್ಥಳೀಯ ನಿಂಗಮ್ಮ ಎಸ್. ಹೂಗಾರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಡಿ. 18ರಂದು ಮಧ್ಯಾಹ್ನ 12ಕ್ಕೆ ಆರ್.ಎಸ್. ಹೂಗಾರ ಅವರ ಸ್ಮಾರಕ ಉದ್ಘಾಟನೆ ಹಾಗೂ 2014ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಜರುಗಲಿದೆ. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ರಾಜನ್ ವಿ. ದೇಶಪಾಂಡೆ, ವಿಶೇಷ ತಹಸೀಲ್ದಾರ್ ನವೀನ ಹುಲ್ಲೂರ, ಡಿಜಿಎಂ ಕಾರ್ಪೊರೇಶನ್ ಬ್ಯಾಂಕ್ ರಂಗಸ್ವಾಮಿ, ವಿಶ್ರಾಂತ ಪ್ರಾಚಾರ್ಯ ಪ್ರೊ. ವಿ.ವಿ. ಹೆಬ್ಬಳ್ಳಿ, ನ್ಯಾಯವಾದಿ ಕೆ.ಯು. ನಾವಲಗಿಮಠ, ಪ್ರೊ. ಶಶಿಧರ ತೋಡಕರ, ಎಸ್.ಎಸ್. ಹರ್ಲಾಪುರ, ಚಂಬಣ್ಣ ಎಸ್. ಹುಬ್ಬಳ್ಳಿ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

