ಧಾರವಾಡ

ದುಶ್ಚಟಗಳಿಂದ ದೂರವಿರಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 23
ದುಶ್ಚಟಗಳಿಂದ ದೂರವಿರುವ ಮೂಲಕ ಬದುಕು ಸುಂದರವನ್ನಾಗಿಟ್ಟುಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಉಣಕಲ್‌ನ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಶ್ರೀ ಸದ್ಗುರು ಶ್ರೀ ಸಿದ್ದೇಶ್ವರ ಸ್ವಾಮಿ ಟ್ರಸ್ಟ್ ಹೊಸಮಠ ಉಣಕಲ್, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಉಣಕಲ್ ಸಿದ್ಧೇಶ್ವರ ಸ್ವಾಮಿ ಕೈಲಾಸ ಮಂಟಪದಲ್ಲಿ ಸೋಮವಾರದಿಂದ ಒಂದು ವಾರಗಳ ಕಾಲ ಆಯೋಜಿಸಲಾಗಿರುವ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮದ್ಯಪಾನ ಮಾಡುವ ವ್ಯಕ್ತಿ ಮಾತ್ರವಲ್ಲ ಆತನ ಇಡೀ ಕುಟುಂಬವೇ ತೊಂದರೆಗೊಳಗಾಗುತ್ತದೆ. ಆದ್ದರಿಂದ ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತರಾಗಿ ಬಾಳಲು ಪ್ರತಿಯೊಬ್ಬರು ಪಣತೊಡಬೇಕೆಂದೂ ಹೇಳಿದರು.
ಶಿಬಿರಾಧಿಕಾರಿ ಭಾಸ್ಕರ್ ಎನ್., ಈ ಶಿಬಿರದಲ್ಲಿ ಭಾಗವಹಿಸಲು 50 ಜನರಿಗೆ ಅವಕಾಶವಿದೆ. ಈಗಾಗಲೇ ಇಂತಹ 652 ಶಿಬಿರಗಳನ್ನು ಆಯೋಜಿಸಿ ಅಸಂಖ್ಯೆ ವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿ ಮಾಡಲಾಗಿದೆ. ಈ ಶಿಬಿರದ ನಂತರವೂ ಇದರಲ್ಲಿ ಭಾಗವಹಿಸಿದರವರಲ್ಲಿ ಶೇ. 80 ರಷ್ಟು ಜನ ವ್ಯಸನ ಮುಕ್ತರಾಗಿರುವುದನ್ನು ಕಾಣಬಹುದೆಂದರು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್‌ನ ವಲಯ ಕಚೇರಿ ಉಣಕಲ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಎಕ್ಸಸ್ ಬ್ಯಾಂಕ್, ಕೆಸಿಸಿ ಬ್ಯಾಂಕ್, ಆರ್.ಎಸ್. ಶಾಮಿಯಾನ, ಉಣಕಲ್‌ನ ಔಷಧಿ ವ್ಯಾಪಾರಸ್ಥರು ಹಾಗೂ ಉದ್ಯಮಿ ರಾಜು ಶಂಕರ ಅಡ್ಡಣಗಿ ಅವರ ಸಂಯುಕ್ತಾಶ್ರಯದಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದೂ ಭಾಸ್ಕರ್ ತಿಳಿಸಿದರು.
ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಗೌರವಾಧ್ಯಕ್ಷ ಡಾ. ಸಿದ್ದಯ್ಯ ಹಿರೇಮಠ, ಮುಖ್ಯ ಸಲಹೆಗಾರ ಎಸ್. ಸೀತಾರಾಮಶೆಟ್ಟಿ, ಪಾಲಿಕೆ ಸದಸ್ಯ ಉಮೇಶ ಕೌಜಗೇರಿ, ತಿಪ್ಪಣ್ಣ ಮಜ್ಜಗಿ, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಪೀರಾಜಿ ಖಂಡೇಕಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.