28ರಂದು ಜನ ಜಾಗೃತಿ ಸಮಾವೇಶ
ಕಲಘಟಗಿ: ತಾಲೂಕು ಬಂಜಾರಾ ಸಮಾಜದ ಜನ ಜಾಗೃತಿ ಸಮಾವೇಶ ಡಿ. 28ರಂದು ಮಧ್ಯಾಹ್ನ 12ಕ್ಕೆ ಜರುಗಲಿದ್ದು, ಸಮಾವೇಶವನ್ನು ಸಂಸದ ಪ್ರಹ್ಲಾದ್ ಜೋಶಿ ಉದ್ಘಾಟಿಸಲಿದ್ದಾರೆ ಎಂದು ತಾಲೂಕು ಬಂಜಾರಾ ಸಮಾಜದ ಅಧ್ಯಕ್ಷ ಅರ್ಜುನ ಲಮಾಣಿ ಹೇಳಿದರು. ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೂಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ತಾಲೂಕಿನಲ್ಲಿ ನಡೆಯುವ 2ನೇ ಸಮಾವೇಶ ಇದಾಗಿದ್ದು, ತಾಲೂಕಿನ 10 ಲಂಬಾಣಿ ತಾಂಡಾಗಳ ಜನರು ಪಾಲ್ಗೊಳ್ಳಲಿದ್ದಾರೆ. ರಾಜ್ಯ ಬಂಜಾರಾ ಗುರು ಪೀಠದ ಶ್ರೀ ಮ.ನಿ.ಪ್ರ. ತಿಪ್ಪೇಶ್ವರ ಸ್ವಾಮೀಜಿ, ಸ್ಥಳೀಯ ಹನ್ನ್ನೆರಡು ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಶಾಸಕ ಸಂತೋಷ ಲಾಡ್, ಮಾಜಿ ಶಾಸಕ ಮನೋಹರ ಐನಾಪುರ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕಾರ್ಮಿಕ ಸಚಿವರ ಪಿ.ಟಿ. ಪರಮೇಶ್ವರ ನಾಯಕ, ಸಚಿವೆ ಉಮಾಶ್ರೀ, ಜಿಪಂ ಅಧ್ಯಕ್ಷ ಎಸ್.ಸಿ. ಅಗಡಿ, ಮಾಜಿ ಕ್ರೆಡಲ್ ಅಧ್ಯಕ್ಷ ಸಿ.ಎಂ. ನಿಂಬಣ್ಣವರ, ಶಾಸಕ ಅರವಿಂದ ಬೆಲ್ಲದ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅರ್ಜುನ ತಿಳಿಸಿದರು. ತಾಲೂಕು ಬಂಜಾರಾ ಸಮಾಜದ ಕೃಷ್ಣಾ ರಾಠೋಡ, ನಿಂಗಪ್ಪ ಲಮಾಣಿ, ಗೋವಿಂದ ಲಮಾಣಿ, ಯಶವಂತ ಚೌಹಾಣ್, ಸೋಮು ಲಮಾಣಿ, ಚನ್ನ್ನಪ್ಪ ಲಮಾಣಿ ಮತ್ತಿತರರು ಇದ್ದರು.
ಅಟಿಲ್ಜೀ ಜನ್ಮ ದಿನ: ನೋಟ್ಬುಕ್ ವಿತರಣೆ
ನವಲಗುಂದ: ನಗರದ ಗಣಪತಿ ದೇವಸ್ಥಾನದ ಹತ್ತಿರಯಿರುವ ಸರ್ಕಾರಿ ಪ್ರಾಥಮಿಕ ನಂ 2 ಶಾಲೆಯ ಮುಂಭಾಗದಲ್ಲಿ ಅಟಿಲ್ ಬಿಹಾರಿ ವಾಜಪೇಯಿಯವರ 89ನೇ ಜನ್ಮ ದಿನಾಚರಣೆ ಅಂಗವಾಗಿ ಬಿಜೆಪಿ ವತಿಯಿಂದ ವಿದ್ಯಾರ್ಥಿಗಳಿಗೆ ನೋಟಬುಕ್ ಹಾಗೂ ಪೆನ್ ವಿತರಿಸಲಾಯಿತು. ನಗರ ಘಟಕದ ಅಧ್ಯಕ್ಷ ರಾಯನಗೌಡ ಪಾಟೀಲ, ಪುರಸಭೆ ಸದಸ್ಯ ಶ್ರೀಕಾಂತ ಪಾಟೀಲ, ಮಹಾಂತೇಶ ಕಲಾಲ, ಬಸಣ್ಣ ಬೆಳವಣಕಿ, ನಾಗನಗೌಡ ಪಾಟೀಲ, ಈರಣ್ಣ ಚವಡಿ, ದೇವರಾಜ ಕರಿಯಪ್ಪನವರ, ಬಿ.ಎಲ್. ಪೂಜಾರ ಆನಂದ ಹೂಗಾರ ಇತರರು ಉಪಸ್ಥಿತರಿದ್ದರು.
ಭಾರತ ಯುವಜನ ಸೇನೆ ಉದ್ಘಾಟನೆ
ಧಾರವಾಡ: ಭಾರತ ಯುವಜನ ಸೇನೆಯ ಜಿಲ್ಲಾ ಘಟಕವನ್ನು ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ಸಂಸ್ಥಾಪಕ ರಮಾನಂದ ಸಾಗರ ಉದ್ಘಾಟಿಸಿದರು. ಸಾಹಿತಿ ಮೋಹನ ನಾಗಮ್ಮನವರ, ರೇವಣಸಿದ್ದೇಶ್ವರ ಮಹಾಮಠದ ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು. ಅಶೋಕ ಚಿಲ್ಲಣ್ಣವರ, ಮಂಜುನಾಥ ಉಪ್ಪುಣಸಿ, ಐ.ಆರ್. ದಕನಿ, ಪ್ರಭು ಹಂಚನಾಳ, ಗಣೇಶ ದೊಡ್ಡಮನಿ, ಉಸ್ಮಾನ ಘಣಿ, ರೆಹಮಾನ ಲಕ್ಕುಂಡಿ, ಶಿವರಾಜಕುಮಾರ ಕುರಿ, ಬಾಳು ಬಂಡಿವಡ್ಡರ, ಪ್ರವೀಣ ಬಳ್ಳಾರಿ, ಬಸವರಾಜ ಆನೇಗುಂದಿ, ಎಸ್.ಎಸ್. ಚಿಕ್ಕಮಠ, ರಾಜು ಡಕಣಿ ಮತ್ತಿತರು ಇದ್ದರು.
ಮಾಯಾಗೆ ಲಾಡಲಿ ಪ್ರಶಸ್ತಿ
ಧಾರವಾಡ: ಆಕಾಶವಾಣಿ ಧಾರವಾಡ ಕೇಂದ್ರದ ಉದ್ಘೋಷಕಿ ಮಾಯಾ ರಾಮನ್ ಅವರಿಗೆ 2012-13ನೇ ಸಾಲಿನ ಲಾಡಲಿ ಮೀಡಿಯಾ ಮತ್ತು ಜಾಹೀರಾತು ಪ್ರಶಸ್ತಿ ಸಂದಿದೆ. ಇತ್ತೀಚೆಗೆ ಹೈದರಾಬಾದಿನ ತಾಜ್ ಡೆಕ್ಕನ್ ನಲ್ಲಿ ನಡೆದ ಸಮಾರಂಭದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ನ ನ್ಯಾಯಮೂರ್ತಿ ಬಿ. ಚಂದ್ರಶೇಖರ ಹಾಗೂ ಮುಂಬೈ ಮೂಲದ ಪಾಪ್ಯುಲೇಶನ್ ಫಸ್ಟ್ ಸಂಸ್ಥೆಯ ನಿರ್ದೇಶಕಿ ಡಾ. ಎ. ಎಲ್. ಶಾರದಾ ಪ್ರಶಸ್ತಿ ಪ್ರದಾನ ಮಾಡಿದರು.
ಜ.1ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಧಾರವಾಡ: ಇಲ್ಲಿನ ಸಾರಸ್ವತಪುರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ಡಿ. 25ರಿಂದ ಜ. 1ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 25ರಂದು ಮುಂಜಾನೆ 6ಕ್ಕೆ ಮಾರುತಿ ಮಂದಿರದ ಆವರಣದಲ್ಲಿ ಗಣಹೋಮ ನಡೆಯಲಿದೆ. 26ರಂದು ಸಂಜೆ 6ಕ್ಕೆ ಮಂಡಲ ಪೂಜೆ, ಭಜನೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, 28ರಂದು ಸಂಜೆ 4ಕ್ಕೆ ಮಾರುತಿ ಮಂದಿರದಿಂದ ಶ್ರೀ ಅಯ್ಯಪ್ಪಸ್ವಾಮಿ ಭಾವಚಿತ್ರ ಮೆರವಣಿಗೆ ಹೊರಡಲಿದೆ. ಡಿ. 30ರಂದು ಮಧ್ಯಾಹ್ನ 12ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಜ. 1ರಂದು ಶ್ರೀ ಮಾರುತಿ ಮಂದಿರದ ಆವರಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಭಜನೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಜೊತೆಗೆ ಜ. 6ರಂದು ಶ್ರೀ ಅಯ್ಯಪ್ಪ ಮಾಲಾಧಾರಿಗಳು ಪವಿತ್ರ ಕ್ಷೇತ್ರ ಶ್ರೀಶಬರಿಮಲೈ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕ್ರೀಡಾಶಾಲೆಗಳ ಪ್ರವೇಶಕ್ಕೆ ದೈಹಿಕ ಪರೀಕ್ಷೆ
ಧಾರವಾಡ: 2012-13ನೇ ಸಾಲಿಗೆ ಕಿರಿಯರ ವಿಭಾಗದ ಕ್ರೀಡಾ ಶಾಲೆ ಮತ್ತು ಕ್ರೀಡಾ ನಿಲಯಗಳಿಗೆ ಪ್ರಥಮ ಹಂತದ ತಾಲೂಕು ಮಟ್ಟದ ಆಯ್ಕೆ ಮಾಡುವ ಸಲುವಾಗಿ ಪ್ರತಿಭಾವಂತ ಕ್ರೀಡಾಪಟುಗಳ ದೈಹಿಕ ಪರೀಕ್ಷೆ ನಡೆಸಲಾಗುತ್ತಿದೆ. ಧಾರವಾಡದಲ್ಲಿ ಜ. 5ರಂದು ತಡಕೋಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆ, ಜ. 6 ಪುಡಕಲಕಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ, ಜ. 7ರಂದು ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಬೆಳಗ್ಗೆ 11ಕ್ಕೆ ಜರುಗಲಿದ್ದು, ಸಂಚಾಲಕರ ಮೊ. 99806-36889 ಸಂಪರ್ಕಿಸಬಹುದು. ಅದರಂತೆ ಉಳಿದ ತಾಲೂಕಿನಲ್ಲಿಯು ಅರ್ಹತಾ ಪರೀಕ್ಷೆ ನಡೆಯಲಿವೆ. ನವಲಗುಂದಕ್ಕೆ ಸಂಬಂಧಿಸಿದಂತೆ ಮೊ. 81478-18658, ಕುಂದಗೋಳ ಮೊ. 94489-97531, ಹುಬ್ಬಳ್ಳಿ ಮೊ 94804-80966, ಕಲಘಟಗಿ ಮೊ 97433-48137 ಸಂಪರ್ಕಿಸಬಹುದು. ಅಲ್ಲದೆ, ಹೆಚ್ಚಿನ ಮಾಹಿತಿಗಾಗಿ ದೂ. 0836-2447424 ಸಂಪರ್ಕಿಸಬಹುದು.
ಇಂದು ಜಿ.ಬಿ. ಜೋಶಿ 20ನೇ ಪುಣ್ಯಸ್ಮರಣೆ
ಧಾರವಾಡ: ಇಲ್ಲಿನ ರಂಗಾಯಣ ಆವರಣದಲ್ಲಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಡಿ. 26ರಂದು ಸಂಜೆ 6ಕ್ಕೆ ನಾಟಕಕಾರ, ಪ್ರಕಾಶಕ ಜಿ.ಬಿ. ಜೋಶಿ (ಜಡಭರತ) ಅವರ 20ನೇ ಪುಣ್ಯಸ್ಮರಣೆ ನಡೆಯಲಿದೆ. ಖ್ಯಾತ ಲೇಖಕ ಡಾ. ಬಾಳಣ್ಣ ಶೀಗೀಹಳ್ಳಿ ಜಿ.ಬಿ. ಜೋಶಿಯವರ ಕುರಿತು ಮಾತನಾಡುವರು. ಇದೇ ಸಂದರ್ಭದಲ್ಲಿ ನಾಡಿನ ಹಿರಿಯ ರಂಗಭೂಮಿ ಕಲಾವಿದೆ, ರಂಗಗೀತೆ, ಸುಗಮ ಗೀತೆ, ಹಾಡುಗಾರ್ತಿ ಸುಭದ್ರಮ್ಮ ಮನಸೂರ ಅವರು ರಂಗಗೀತೆಗಳನ್ನು ಪ್ರಸ್ತುತ ಪಡಿಸುವರು. ಧಾರವಾಡದ ಅಭಿನಯ ಭಾರತಿ ಮತ್ತು ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಬೇಕೆಂದು ಅಭಿನಯ ಭಾರತಿ ಸಂಚಾಲಕಿ ವತ್ಸಲಾ ಕುಲಕರ್ಣಿ ಹಾಗೂ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ನ ಸಮೀರ ಜೋಶಿ ತಿಳಿಸಿದ್ದಾರೆ.
ಆರಾಧನಾ ಮಹೋತ್ಸವ
ಧಾರವಾಡ: ಗಾಂಧಿಚೌಕದ ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ಸದ್ಗುರು ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರ 100ನೇ ವರ್ಷದ ಆರಾಧನಾ ಕಾರ್ಯಕ್ರಮ ಈಗಾಗಲೇ ಆರಂಭವಾಗಿದ್ದು, ಡಿ. 27ರ ವರೆಗೆ ನಡೆಯಲಿದೆ. 27ರ ಬೆಳಗ್ಗೆ 5.55ಕ್ಕೆ ಗುಲಾಲು ಕಾರ್ಯಕ್ರಮವಿರುತ್ತದೆ. ನುಗ್ಗಿಕೇರಿ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ರಾಮದಾಸಿಯವರ ನೇತೃತ್ವದಲ್ಲಿ ಹಾಗೂ ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಪಾಠಶಾಲೆ ಸಹಕಾರದೊಂದಿಗೆ ಕಾರ್ಯಕ್ರಮಗಳು ನಡೆಯುತ್ತಿವೆ. ಈ ದಿನಗಳಲ್ಲಿ ಅಖಂಡ ನಾಮಸ್ಮರಣೆ ಇರುತ್ತದೆ.
ಶಿವಬಸವ ಸ್ವಾಮೀಜಿ ಕನ್ನಡದ ಸಂತ
ಧಾರವಾಡ: ಬೆಳಗಾವಿ ಎಂದಿಗೂ ಕನ್ನಡನಾಡಿನ ಅವಿಭಾಜ್ಯ ಅಂಗ ಎಂದೆಲ್ಲ ಸದಾ ಕನ್ನಡಪರ ಧ್ವನಿಗೈದ ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಲಿಂಗೈಕ್ಯ ಶಿವಬಸವ ಸ್ವಾಮೀಜಿ ಕನ್ನಡದ ಸಂತರಾಗಿದ್ದರು ಎಂದು ಶಿಕ್ಷಣ ತಜ್ಞ ಡಾ. ಜಿ.ಸಿ. ಚಿಕ್ಕೂರ ಹೇಳಿದರು. ಇಲ್ಲಿನ ಉಳವಿ ಚನ್ನಬಸವೇಶ್ವರ ನಗರದಲ್ಲಿರುವ ಪ್ರೊ. ಕಮಲಾ ಬಾಳೆಕುಂದ್ರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಸಿದ್ಧರಾಮೇಶ್ವರ ಪ್ರೌಢ ಶಾಲೆಯ ಜಂಟಿಯಾಗಿ ಆಯೋಜಿಸಿದ್ದ ನಾಗನೂರು ರುದ್ರಾಕ್ಷಿಮಠದ ಲಿಂಗೈಕ್ಯ ಶ್ರೀ ಶಿವಬಸವ ಸ್ವಾಮೀಜಿಯವರ 124ನೇ ಜಯಂತಿ ಮಹೋತ್ಸವದಲ್ಲಿ ಮಾತನಾಡಿದ ಅವರು, ಭಾಷಾವಾರು ಪ್ರಾಂತ ರಚನೆಯ ಕಾಲದಲ್ಲಿ ಫಜಲ್ ಅಲಿ ಆಯೋಗ ಬೆಳಗಾವಿಗೆ ಬಂದಾಗ ಬೆಳಗಾವಿಯು ಕರ್ನಾಟಕಕ್ಕೇ ಉಳಿಯಬೇಕು. ಅದು ಅಚ್ಚ ಕನ್ನಡದ ನೆಲ ಎಂಬುದನ್ನು ಮನಗಾಣಿಸಿದ್ದವರು ಶಿವಬಸವ ಶ್ರೀಗಳು ಎಂದರು. ಇದೇ ಸಂದರ್ಭದಲ್ಲಿ ನಡೆದ ನಮ್ಮ ಚೆಲುವ ಕನ್ನಡನಾಡು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿ ಬಿ.ಆರ್. ಸಾರಥಿ ಮಾತನಾಡಿದರು. ಕವಿವಿ ವಿದ್ಯಾರ್ಥಿ ಅಭಿವೃದ್ಧಿ ಟ್ರಸ್ಟ್ ನಿರ್ದೇಶಕ ಮಂಜುನಾಥ ಹಗೇದಾರ, ನಾಗಯ್ಯ ಹಿರೇಮಠ, ಚನ್ನಮ್ಮ ಪಾಟೀಲ ಎಸ್.ಜಿ. ಮಡಿವಾಳರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

