ಅಪರಾಧಿ ಕೃತ್ಯ ಕ್ಷೀಣಿಸಲಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 29
ಅಪರಾಧ ತಡೆಗೆ ಪೊಲೀಸ್ ಇಲಾಖೆ ಸಾಕಷ್ಟು ಶ್ರಮಿಸಿದರೂ ಅಪರಾಧಿ ಕೃತ್ಯಗಳು ಹೆಚ್ಚುತ್ತಿರುವುದು ವಿಷಾದನೀಯ ಎಂದು ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ. ರಮೇಶರಾವ್ ಎಂದರು.
ಹುಬ್ಬಳ್ಳಿ ಗೋಕುಲ ಗ್ರಾಮದ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಭಾನುವಾರ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ನ 2013ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಪಾರಿವಾಳ, ಬಲೂನ್ ಹಾರಿಸಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಅಪರಾಧ ತಡೆ ಮಾಸಾಚರಣೆ ನಡೆಸುತ್ತದೆ, ಅಪರಾಧಿ ಕೃತ್ಯದಲ್ಲಿ ಭಾಗಿಯಾದವರನ್ನು ಹಿಡಿದು ನ್ಯಾಯಾಂಗಕ್ಕೆ ನೀಡಿ ಶಿಕ್ಷೆ ವಿಧಿಸಲಾಗುತ್ತಿದ್ದರೂ ಅಪರಾಧಿ ಕೃತ್ಯಗಳು ಮಾತ್ರ ಕಡಿಮೆಯಾಗಿಲ್ಲ. ಅಪರಾಧಿ ಕೃತ್ಯದಿಂದ ಸಾಧಿಸುವುದೇನೂ ಇಲ್ಲ, ಇದನ್ನು ಮನಗಂಡು ಅಪರಾಧಿ ಕೃತ್ಯಕ್ಕೆ ಜನರೇ ಕಡಿವಾಣ ಹಾಕಿಕೊಳ್ಳಬೇಕಿದೆ. ತನ್ಮೂಲಕ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಿಸಬೇಕು ಎಂದರು.
ಕ್ರೀಡೆಯಿಂದ ಸದೃಢ ದೇಹ ಹೊಂದಲು ಸಾಧ್ಯ. ಜತೆಗೆ ಮನಸ್ಸು ಪ್ರಫುಲ್ಲವಾಗಿರುತ್ತದೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರಂತೂ ತಪ್ಪದೇ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ ಸ್ವಾಗತಿಸಿ, ಕ್ರೀಡೆ ಮಹತ್ವ ವಿವರಿಸಿದರು. ಇನ್ಸ್ಪೆಕ್ಟರ್ ಎಂ.ಎನ್. ಹನಕನಹಳ್ಳಿ ಕ್ರೀಡಾಪಟುಗಳಿಗೆ ಪ್ರಮಾಣ ವಚನ ಬೋಧಿಸಿದರು. ಕ್ರೀಡಾಪಟು ಐ.ಎಸ್. ದೇಸಾಯಿ ಕ್ರೀಡಾ ಜ್ಯೋತಿ ಬೆಳಗಿಸಿದರು. ಡಿಸಿಪಿಗಳಾದ ಸುಭಾಷ ಗುಡಿಮನಿ, ಶ್ರೀನಾಥ ಜೋಶಿ, ನಗರ ಸಶಸ್ತ್ರಮೀಸಲು ಪಡೆಯ ಡಿಸಿಪಿ ಎಂ. ಎನ್. ಜೋಗಳೇಕರ ಮತ್ತಿತರರಿದ್ದರು.
ಅಪರಾಧಿ ಕೃತ್ಯದಿಂದ ಸಾಧಿಸುವುದೇನೂ ಇಲ್ಲ, ಇದನ್ನು ಮನಗಂಡು ಅಪರಾಧಿ ಕೃತ್ಯಕ್ಕೆ ಜನರೇ ಕಡಿವಾಣ ಹಾಕಿಕೊಳ್ಳಬೇಕಿದೆ. ತನ್ಮೂಲಕ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಿಸಬೇಕು.
- ನ್ಯಾ. ಎಂ. ರಮೇಶರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

