ಕಾರಂತ ಪರಿಪೂರ್ಣ ರಂಗಕರ್ಮಿ
ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 29
ಬಿ. ವಿ. ಕಾರಂತರು ಕೇವಲ ನಿರ್ದೇಶನವಲ್ಲದೇ ಸಂಗೀತ ರಚನೆ, ನಟನೆ, ರಂಗಸಜ್ಜಿಕೆ, ನೆರಳು-ಬೆಳಕು ಹೀಗೆ ಒಟ್ಟಾರೆ ರಂಗಭೂಮಿಯ ಎಲ್ಲ ಹಂತಗಳಲ್ಲಿಯೂ ಪರಿಪೂರ್ಣರಾಗಿದ್ದರು ಎಂದು ಭಾನುವಾರ ಸೃಜನಾ ರಂಮಂದಿರದಲ್ಲಿ ಕಾರಂತ ರಂಗನಮನದ ಅಂಗವಾಗಿ ನಡೆದ ಸಂವಾದದಲ್ಲಿ ರಂಗಕರ್ಮಿಗಳು ಅಭಿಪ್ರಾಯಿಸಿದರು.
ಭಾರತೀಯ ರಂಗಭೂಮಿಗೆ ಕಾರಂತರ ಕೊಡುಗೆ ಅಪಾರ. ಅವರ ಕೈಯಲ್ಲಿ ಪಳಗಿದ ಅಸಂಖ್ಯಾತ ಶಿಷ್ಯರು ದೇಶಾದ್ಯಂತ ರಂಗ ಚಟುವಟಿಕೆಗಳಲ್ಲಿ ನಿರತರಾಗಿ ಅವರ ನೆನಪು ಸ್ಥಿರವಾಗಿಸಿದ್ದಾರೆ. ಕಾರಂತರು ಪರಂಪರೆ, ಜಾನಪದ, ಅಂಶಗಳನ್ನು ನಾಟಕಗಳಲ್ಲಿ ಬಳಸಿಕೊಂಡರೂ ಆಧುನಿಕ ತಂತ್ರಗಳನ್ನೂ ಅರ್ಥಪೂರ್ಣವಾಗಿ ರಂಗಭೂಮಿಯಲ್ಲಿ ಅನುಸರಿಸುತ್ತಿದ್ದಾರೆಂದು ಮರಾಠಿ ರಂಗಭೂಮಿಯ ಖ್ಯಾತ ನಿರ್ದೇಶಕ ಅತುಲ ಪೇಠೆ ಹೇಳಿದರು.
ನಾಟಕಕಾರ ಡಿ.ಎಸ್. ಚೌಗಲೆ ಮಾತನಾಡಿ, ಕಾರಂತರ ಬಹುತೇಕ ಶಿಷ್ಯರು ಅವರ ಪಡಿಯಚ್ಚುಗಳಾಗದೇ ಅವರ ತಂತ್ರಗಾರಿಕೆಗೆ ಹೊಸ ರೂಪ ಕೊಡಬೇಕೆಂದು ಹೇಳಿದರು. ರಂಗ ವಿಮರ್ಶಕ ರಾಜಪ್ಪ ದಳವಾಯಿ, ಕಾರಂತರು ಕೇವಲ ರಂಗಭೂಮಿಯಲ್ಲದೇ ಸಿನಿಮಾ ಸಂಗೀತಕ್ಕೂ ರಚನಾತ್ಮಕ ಕೊಡುಗೆ ನೀಡುತ್ತಿದ್ದಾರೆ. ಅವರು ಸಂಗೀತ ನಿರ್ದೇಶನ ಮಾಡಿದ ಎಲ್ಲ ಚಿತ್ರಗಳಗೂ ಪ್ರಶಸ್ತಿ ಬಂದಿವೆ ಎಂದರು.
ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ, ಕಾರಂತರ ಸಂಗೀತ ನಿರ್ದೇಶನದ ಕಾಲಕ್ಕೆ ತಾವು ಪಡೆದ ಅನುಭವ ವಿವರಿಸಿದರು. ಅಲ್ಲದೇ, ಕಾರಂತರು ಜಾನಪದ, ಶಾಸ್ತ್ರೀಯ ಸಂಗೀತವಲ್ಲದೇ ವೈಎನ್ಕೆ ಅವರ ನವ್ಯ ಗೀತೆ, ಇಂಗ್ಲಿಷ್ ಸಾನೆಟ್ಗಳಿಗೆ ರಾಗ ಸಂಯೋಜಿಸಿ ಅಪರೂಪದ ಹಾಡುಗಳನ್ನು ಪ್ರಸ್ತುತಪಡಿಸಿದರು.
ರಂಗ ನಿರ್ದೇಶಕ ಪ್ರಕಾಶ ಗರುಡ, ಒಂದು ಪರಿಪಾಠ ಹಾಕಿಕೊಟ್ಟ ಮೇಲೆ ಹೊಸದು ಅಸಾಧ್ಯ ಎಂದು ಸುಮ್ಮನಿರದೇ ರಂಗ ಸಂಗೀತಕ್ಕೆ ಆವಿಷ್ಕಾರ ನೀಡಬೇಕಿದೆ ಎಂದರು.
ಹಿರಿಯ ರಂಗ ನಿರ್ದೇಶಕ ಚಿದಂಬರರಾವ ಜಂಬೆ ಅಧ್ಯಕ್ಷತೆ ವಹಿಸಿದ್ದರು. ಶೈಲಾ ಹಾಗೂ ಚಂದ್ರಶೇಖರ ರಂಗಗೀತೆ ಹಾಡಿದರು. ವಸಂತ ಆಯಿ, ಜಯರಾಮ ಪಾಟೀಲ, ಕೆ.ಜಿ. ಕೃಷ್ಣಮೂರ್ತಿ, ವಿಶ್ವೇಶ್ವರಿ ಹಿರೇಮಠ, ರಜನಿ ಗರುಡ, ವಿಷಯಾ ಜೇವೂರ, ಬಿ.ಐ. ಈಳಿಗೇರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

