ಮಹಿಳೆಯರು ಸಂಘಟಿತರಾಗಿ
ಕಲಘಟಗಿ: ಗ್ರಾಮೀಣ ಮಹಿಳೆಯರು ಸಂಘಟಿತರಾಗಿ ಮಾಜಿ ಪ್ರಧಾನಿ ವಾಜಪೇಯಿಯವರ ಗ್ರಾಮೀಣ ಜನರ ಅಭಿವೃದ್ಧಿಯ ಕನಸು ನನಸಾಗಿಸಲು ಪ್ರಯತಿಸಬೇಕು ಎಂದು ಬಿಜೆಪಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾ ಮರಲಿಂಗಣ್ಣವರ ಹೇಳಿದರು.
ಪಟ್ಟಣದ ಜಿಇ ಕಾಂಪೋಜಿಟ್ ಜೂನಿಯರ್ ಕಾಲೇಜು ಆವರಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಮುಕ್ತ ರಂಗೋಲಿ ಸ್ಪರ್ಧೆಯಲ್ಲಿ ಮಾತನಾಡಿದರು.
ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಆಶ್ರಯದಲ್ಲಿ ಆಯೋಜಿಸಿದ ಸ್ಪರ್ಧೆಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಹುರುಪಿನಿಂದ ಪಾಲ್ಗೊಂಡರು. ರಂಗೋಲಿ ಸ್ಪರ್ಧೆ ನಂತರ ಸಂಘಟನಾಕಾರರು ಮತ್ತು ಸೇರಿದ ಮಹಿಳೆಯರು ಪರಸ್ಪರ ಮೆಹಂದಿ ಹಾಕಿಕೊಂಡು ಸಂಭ್ರಮಿಸಿದರು. ಸ್ಪರ್ಧೆಯಲ್ಲಿ ರಂಜನಾ ಭರಾಡೆ ಪ್ರಥಮ, ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ನಾಗವೇಣಿ ಕಮ್ಮಾರ ದ್ವಿತೀಯ ಹಾಗೂ ರೇಖಾ ಭರಾಡೆ ತೃತೀಯ ಸ್ಥಾನ ಪಡೆದರು.
ಬಿಜೆಪಿ ಮಹಿಳಾ ಮೋರ್ಚಾ ತಾಲೂಕಾಧ್ಯಕ್ಷ ಬಸಮ್ಮ ಬಸರಿಕೊಪ್ಪ, ಪ್ರಧಾನ ಕಾರ್ಯದರ್ಶಿ ಅನಿತಾ ರೊಟ್ಟಿ, ತಾಪಂ ಮಾಜಿ ಅಧ್ಯಕ್ಷ ಲಲಿತಾ ಲಮಾಣಿ, ಮಾಲಾ ಮರಲಿಂಗಪ್ಪನವರ, ಸಾವಕ್ಕ ಕುರಬರ ನೇತೃತ್ವ ವಹಿಸಿದ್ದರು.
ನಿರ್ಣಾಯಕರಾಗಿ ಚಿತ್ರಕಲಾ ಪರಿಣಿತರಾದ ಎಸ್.ಎಸ್. ಸಾವಕಾರ, ಎಸ್.ವೈ. ಶಿರಸಂಗಿ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಸದಾನಂದ ಚಿಂತಾಮಣಿ, ಬಸಯ್ಯ ಹೆಬ್ಬಳ್ಳಿಮಠ, ಹನುಮಂತ ಚವರುಗುಡ್ಡ, ನಾಗರಾಜ ಚಿಂತಾಮಣಿ, ಮಂಜಯ್ಯ ಹೆಬ್ಬಳ್ಳಿಮಠ, ಸಚಿನ್ ಚಿಂತಾಮಣಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

