ಧಾರವಾಡ

ಇಂದು ಪುಸ್ತಕ ಬಿಡುಗಡೆ

Published On :

ಹುಬ್ಬಳ್ಳಿ: ವಾಸ್ತುತಜ್ಞ ಭಾಸ್ಕರ್ ಹೆಗಡೆ ಅವರ ನಂಬಿಕೆ ಹಾಗೂ ನವಗ್ರಹ ಆಧಾರಿತ ಜ್ಞಾನನಿಧಿ ಕಥಾರೂಪ ಪುಸ್ತಕ ಬಿಡುಗಡೆ ಸಮಾರಂಭ ಜು. 5ರಂದು ಸಂಜೆ 6.30ಕ್ಕೆ ಕರ್ನಾಟಕ ಛೇಂಬರ್ ಆಫ್ ಕಾಮರ್ಸ್‌ನಲ್ಲಿ ನಡೆಯಲಿದೆ. ಸಾಹಿತಿ ಆರೂರ ಲಕ್ಷ್ಮಣ ಶೇಟ್ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ನಿವೃತ್ತ ಪ್ರಾಚಾರ್ಯ ಡಾ. ಎಂ.ಎಸ್. ಹುಲ್ಲೊಳಿ ಅಧ್ಯಕ್ಷತೆ ವಹಿಸುವರು.
ಹಾವು ಕಚ್ಚಿ ಓರ್ವ ಸಾವು
ಅಣ್ಣಿಗೇರಿ: ಸಮೀಪದ ಬಸಾಪುರ ಗ್ರಾಮದ ಶಿವಪ್ಪ ಭರಮಪ್ಪ  ಇಸರಣ್ಣವರ (37) ರಾತ್ರಿ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿದ ಪರಿಣಾಮ ನವಲಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕ ಚಿಕಿತ್ಸೆ ನೀಡಿ, ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಓರ್ವ ಸಾವು
ಅಣ್ಣಿಗೇರಿ: ಸ್ಥಳೀಯ ವೆಂಕಟೇಶ್ವರ ಟೆಕ್ಸ್‌ಟೈಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಟಂಟಂ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟಂಟಂ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಗದಗ ತಾಲೂಕಿನ ಚಿಕ್ಕಹಂದಿಗೋಳದ ಅನಿಲ ಬಸವಣ್ಣೆಪ್ಪ ಸಿಳ್ಳಿಕೇತರ (35) ಮೃತಪಟ್ಟ ವ್ಯಕ್ತಿ. ಲಾರಿ ಚಾಲಕ ನಾಪತ್ತೆಯಾಗಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳಭಟ್ಟಿ: ಓರ್ವ ಸೆರೆ
ಧಾರವಾಡ: ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟದಲ್ಲಿ ತೊಡಗಿದ್ದ ಓರ್ವನನ್ನು ನವಲಗುಂದ ತಾಲೂಕಿನ ಅಣ್ಣಿಗೇರಿ ಬಳಿಯ ಹರಿಣಿಶಿಕಾರಿ ತಾಂಡಾದಲ್ಲಿ ಜಿಲ್ಲಾ ಅಬಕಾರಿ ವಿಭಾಗದ ತಂಡ ಗುರುವಾರ ಬಂಧಿಸಿದೆ. ಹರಿಣಿಶಿಕಾರಿ ತಾಂಡಾದ ಪರಶುರಾಮ ಅರ್ಜುನ ಹರಿಣಿಶಿಕಾರಿ ಬಂಧಿತ ಆರೋಪಿ, ಬಂಧಿತನಿಂದ ರು. 500 ಮೌಲ್ಯದ 5 ಲೀ. ಕಳ್ಳಭಟ್ಟಿ ಸಾರಾಯಿ ಜಪ್ತಿ ಮಾಡಲಾಗಿದೆ.
ಟ್ರ್ಯಾಲಿಗೆ ಸಿಲುಕಿ ಓರ್ವ ಸಾವು
ಧಾರವಾಡ: ತೋಟವೊಂದರಲ್ಲಿ ಕಸ ತೆಗೆಯುತ್ತಿದ್ದ ಸಮಯದಲ್ಲಿ ಟ್ರ್ಯಾಲಿ ಮತ್ತು ಮರದ ಮಧ್ಯೆ ಸಿಲುಕಿದ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ಹೊಸತೇಗೂರ ಬಳಿ ಬೆಳಗಾವಿ ರಸ್ತೆಯಲ್ಲಿರುವ ಮಾವಿನ ತೋಟದಲ್ಲಿ ಗುರುವಾರ ಸಂಭವಿಸಿದೆ. ಬೈಲಹೊಂಗಲ ತಾಲೂಕಿನ ಕಡತನಾಳ ಗ್ರಾಮದ ಶೇಖಪ್ಪ ಶಿವರಾಯಪ್ಪ ಕಾದ್ರೊಳ್ಳಿ (42) ಸಾವನ್ನಪ್ಪಿದ ವ್ಯಕ್ತಿ. ದಿಬ್ಬದ ಮೇಲೆ ನಿಲ್ಲಿಸಿದ್ದ ಟ್ರ್ಯಾಲಿ ಉರುಳಿ ಬಿದ್ದಾಗ ಟ್ರ್ಯಾಲಿ ಮಧ್ಯೆ ಸಿಲುಕಿದ ಶೇಖಪ್ಪ ಮೃತಪಟ್ಟಿದ್ದಾನೆ. ಮಾಜಿ ಸಚಿವ ಓಂಪ್ರಕಾಶ ಕಣಗಲಿ ಅವರಿಗೆ ಸೇರಿದ ಮಾವಿನ ತೋಟದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ: ಓರ್ವನ ಬಂಧನ
ಧಾರವಾಡ: ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಓರ್ವನನ್ನು ಇಲ್ಲಿನ ಆಂಜ ನೇಯ ನಗರದಲ್ಲಿ ಬುಧವಾರ ರಾತ್ರಿ ಬಂಧಿಸಲಾಗಿದೆ. ಸಿದ್ದಪ್ಪ ಮಾದರ ಬಂಧಿತ ಆರೋಪಿ. ಆತನಿಂದ ರು. 590 ನಗದು, ಒಂದು ಮೊಬೈಲ್ ಮತ್ತು ಮಟಕಾ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.