ಶರೀಫರ ತತ್ವ ಅಳವಡಿಕೆ ಅಗತ್ಯ
ಹುಬ್ಬಳ್ಳಿ: ಶಿಶುನಾಳ ಶರೀಫರ ತತ್ವಗಳಂತೆ ನಮ್ಮ ನಿತ್ಯ ಜೀವನದಲ್ಲಿ ಘಟನೆಗಳು ನಡೆಯುತ್ತಿದ್ದರೂ ನಾವು ಅವುಗಳನ್ನು ಸ್ವೀಕರಿಸದೆ ಸತ್ಯ, ಭಕ್ತಿ ಮತ್ತು ನಿಷ್ಠೆಯಿಂದ ದೂರ ಆಗುತ್ತಿದ್ದೇವೆ ಎಂದು ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಹೇಳಿದರು.
ಇಲ್ಲಿನ ಘಂಟಿಕೇರಿ ಓಣಿಯ ಬಸವೇಶ್ವರ ದೇವಸ್ಥಾನದಲ್ಲಿ ಈಚೆಗೆ ಶರೀಫ ಶಿವಯೋಗಿಶ್ವರ ತತ್ವಪದ ಮಂಡಳಿ ಆಯೋಜಿಸಿದ್ದ ಸಂತ ಶಿಶುನಾಳ ಶರೀಫರ 194 ಜಯಂತ್ಯುತ್ಸವ ಮತ್ತು 124ನೇ ಪುಣ್ಯ ಸ್ಮರಣೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಂತ ಶಿಶುನಾಳ ಶರೀಫರ ತತ್ವಪದಗಳಲ್ಲಿ ಜೀವನದ ಸತ್ಯ ಅಡಗಿದ್ದು, ಅವುಗಳನ್ನು ನಾವು ಅರ್ಥೈಸಿಕೊಂಡು ಜೀವನ ಸಾಗಿಸಬೇಕಿದೆ ಎಂದರು.
ಎಸ್.ಬಿ. ಶೆಟ್ಟಿ ಮಾತನಾಡಿ, ಭಕ್ತಿ, ಶ್ರದ್ಧೆಯಿಂದ ಮಾತ್ರ ಸಂತರ, ಶಿವಯೋಗಿಗಳ ಪರಂಪರೆ ರಕ್ಷಿಸಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಕುಂದಗೋಳ ಹಿರೇಮಠದ ಶಿವಾಚಾರ್ಯ ಶ್ರೀಗಳು, ಹತ್ತು ದೇವರನ್ನು ಪೂಜಿಸುವ ಮುನ್ನ ಹೆತ್ತವರನ್ನು ಪೂಜಿಸಿದರೆ ಜೀವನ ಸಾರ್ಥಕವಾಗುತ್ತದೆ. ಜನಮಾನಸದಲ್ಲಿ ಇಂದು ಹಾಸು ಹೊಕ್ಕಾಗಿರುವ ರಾಜಕೀಯ ಕಲುಷಿತ ವಾತಾವರಣ ತಿಳಿಗೊಳಿಸಲು ಧರ್ಮ ಒಂದೇ ಮಾರ್ಗ ಎಂದರು.
ಸುಗಮ ಸಂಗೀತ ಗಾಯಕ ವೈ.ಎನ್. ಮಳಗಿ ಶರೀಫರ ತತ್ವಗಳನ್ನು ಹಾಡಿ ರಂಜಿಸಿದರು. ವೇದಿಕೆಯಲ್ಲಿ ವಿ.ವಿ. ಚಿಕ್ಕಮಠ, ಡಾ ಬಿ.ಟಿ. ಜೋಶಿ, ಮಹೇಶ ಕಮತರ, ಶೇಕಣ್ಣ ಬೇಂಡಿಗೇರಿ, ವೆಂಕನಗೌಡ ಪಾಟೀಲ ಇದ್ದರು.
ಅಕ್ಕಮಹಾದೇವಿ ಗಿರಿಮಠ ಪ್ರಾರ್ಥಿಸಿದರು. ಮಂಡಳಿ ಅಧ್ಯಕ್ಷ ಚನ್ನಬಸಪ್ಪ ಕೊಣ್ಣೂರ ಸ್ವಾಗತಿಸಿದರು. ಶಾಹು ಗಾವಡೆ ವಂದಿಸಿದರು. ಧರ್ಮದಾಸ್ ಹಬೀಬ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

