ಕಿಶೋರಿಯರಿಗೆ ತರಬೇತಿ ಶಿಬಿರ
ಕಲಘಟಗಿ: ಹೆಣ್ಣು ಮಕ್ಕಳಿಗೆ ವೃತ್ತಿಪರ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬಿಡಿಎಸ್‌ಎಸ್ ಸಮಾಜ ಸೇವಾ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಗ್ರಾಮದ ಹಿರಿಯರಾದ ಸಿದ್ದಪ್ಪ ಕೂಡಲಗಿ ಹೇಳಿದರು.
ಬಿಡಿಎಸ್‌ಎಸ್ ಸಮಾಜ ಸೇವಾ ಸಂಸ್ಥೆ ತಾವರಗೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಿಶೋರಿಯರಿಗೆ ಎರಡು ದಿನಗಳ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪುಂಡಲೀಕ ಮೊಸಳೆ ಮಾತನಾಡಿ, ಹೆಣ್ಣು ಸಮಾಜದ ಕಣ್ಣು. ಸಮಾಜದ ಪ್ರತಿಯೊಂದು ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಸ್ತ್ರೀಯರಿಗೆ ಹಕ್ಕುಗಳನ್ನು ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಸಂಸ್ಥೆಯ ಸಂಯೋಜಕ ಬಸವರಾಜ ಇಂದೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎರಡು ದಿನದ ಶಿಬಿರದಲ್ಲಿ ಶೋಭಾ ಟೊಂಗಳೆ, ಪ್ರವೀಣ ಬುತಕಿ, ಜೀವನದ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿದರು. ವಕೀಲ ಜಿ.ಎಸ್. ನೇಕಾರ ಕಾನೂನುಗಳ ಬಗ್ಗೆ ತಿಳಿಸಿದರು. ಸಂಸ್ಥೆಯ ಸಿಬ್ಬಂದಿ ನಾರಾಯಣ ಗರಗ, ಲಕ್ಕೇಶ ಕೊಪ್ಪದ, ಬಸಮ್ಮ ತೋಟದ ಮಕ್ಕಳ ಹಕ್ಕುಗಳು ಮತ್ತು ಬಾಲ್ಯವಿವಾಹದ ಬಗ್ಗೆ ಮಾಹಿತಿ ನೀಡಿದರು.
ಶಿಬಿರದಲ್ಲಿ ಜ್ಯೋತಿ ಕೂಡಲಗಿ, ಗಂಗಮ್ಮ ಜಿನ್ನೂರು ತಮ್ಮ ಅನಿಸಿಕೆ ಹಂಚಿಕೊಂಡರು. ಕಲ್ಲಪ್ಪ ರೆವಡಿಹಾಳ, ಕಲ್ಲಪ್ಪ ದ್ಯಾವಪ್ಪನವರ, ಈರವ್ವ ಹಿರೇಮಠ, ಶಶಿಕಲಾ ಹಿರೇಮಠ ಹೊಲಿಗೆ ತರಬೇತಿದಾರರಾದ ಗಿರೀಜಾ ಅಗಡಿ ಉಪಸ್ಥಿತರಿದ್ದರು. ಗಂಗಮ್ಮ ಸ್ವಾಗತಿಸಿದರು. ನೀಲಮ್ಮ ಜವಳಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

