ಧಾರವಾಡ

ಹಲ್ಲೆ: 9 ಆರೋಪಿಗಳ ಸೆರೆ

Published On :

ಹುಬ್ಬಳ್ಳಿ:  ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಇಲ್ಲಿನ ಮಾರುತಿ ಸರ್ಕಲ್ ಬಳಿ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ಎಸಗಿದ್ದ 9 ಆರೋಪಿಗಳನ್ನು ಕಸಬಾಪೇಟ್ ಪೊಲೀಸರು ಬಂಧಿಸಿದ್ದಾರೆ. ವಿನಾಯಕ ಇಟಗಿ ಎನ್ನುವವರ ಮೇಲೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿ ವೇಳೆ ಮಾರುತಿ ಸರ್ಕಲ್ ಪ್ರದೇಶದ ರಮೇಶ ಕಣವಿ, ಮಂಜುನಾಥ ಪೂಜಾರ, ಸುನೀಲ ತಹಸೀಲ್ದಾರ್, ಸಣ್ಣತಿಮ್ಮಪ್ಪ ಪೂಜಾರ, ಪ್ರಕಾಶ ಹೆಸರೂರ, ಕುಮಾರ ಹೆಸರೂರ, ಪುಟ್ಟು ಕಾಂಬ್ಳೆ, ಅನೀಲ ಶೆಟ್ಟಿ ಹಾಗೂ ಮಂಜುನಾಥ ಬಕರಿ ಎನ್ನುವವರನ್ನು ಬಂಧಿಸಲಾಗಿದೆ.  ವಿನಾಯಕ ಇಟಗಿ ಅವರು ಸಾಲವಾಗಿ ಪಡೆದುಕೊಂಡಿದ್ದ ರು. 2 ಸಾವಿರ ಮರಳಿಸಲಿಲ್ಲ ಎಂಬ ಕಾರಣಕ್ಕೆ ಈ 9 ಜನ ಆರೋಪಿಗಳು ಸೇರಿ ಹಲ್ಲೆ ಎಸಗಿದ್ದರು.
ಬೈಕ್ ಕಳ್ಳತನ: ದೂರು
ಹುಬ್ಬಳ್ಳಿ: ಹಳೇ ಬಸ್ ನಿಲ್ದಾಣ ಮತ್ತು ಮಿಷನ್ ಕಾಂಪೌಂಡ್ ಬಳಿಯ ಮನೆಯೊಂದರ ಎದುರು ನಿಲ್ಲಿಸಿದ್ದ ಎರಡು ಬೈಕ್‌ಗಳು ಕಳ್ಳತನವಾಗಿವೆ ಎಂದು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವಾಳಗೇರಿ ಗ್ರಾಮದ ಸುರೇಶ ಬಸಪ್ಪ ತಳವಾರ ಬಸ್ ನಿಲ್ದಾಣದ ಹತ್ತಿರ ಇರುವ ರೇಣುಕಾ ರಿಪ್ರೇಶಮೆಂಟ್ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಹುಬ್ಬಳ್ಳಿ ನಗರದ ಮಿಷನ್ ಕಾಂಪೌಂಡ್ ಬಳಿಯ ನಿವಾಸಿ ಪ್ರಭಾಕರ ಅರಳಿಕಟ್ಟಿ ಅವರು ತಮ್ಮ ಮನೆ ಎದುರು ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ ಎಂದು ದೂರು ನೀಡಿದ್ದಾರೆ.
ಅಪಘಾತ: ಓರ್ವ ಸಾವು
ಧಾರವಾಡ: ಸಾರಿಗೆ ಸಂಸ್ಥೆ ಬಸ್ ಹಾಗೂ ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ಕಾಲೇಜು ಉಪನ್ಯಾಸಕರೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ-ಧಾರವಾಡ ಮಧ್ಯೆದ ಎನ್‌ಜಿಇಎಫ್ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಅಥಣಿ ತಾಲೂಕಿನ ಮುಳೆ ಗ್ರಾಮದ ಶಿವರುದ್ರ ಅಪ್ಪಾಸಾಹೇಬ ಲಂಗೋಟಿ (42) ಸಾವನ್ನಪ್ಪಿದ ಉಪನ್ಯಾಸಕ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ಸುಕೃತ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿವರುದ್ರ ಲಂಗೋಟಿ ತಮ್ಮ ಚನ್ನಬಸವೇಶ್ವರ ನಗರದ ಮನೆಯಿಂದ ಕಾರಿನಲ್ಲಿ ಹುಬ್ಬಳ್ಳಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಟ್ಟೆ ನೋವು: ಆತ್ಮಹತ್ಯೆ
ಧಾರವಾಡ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದೆ. ಇಂಗಳೇಶ್ವರ ಗ್ರಾಮದ ಚನ್ನಬಸಪ್ಪ ಸಿದ್ದಪ್ಪ ಇಂಡಿ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮುಮ್ಮಿಗಟ್ಟಿ ಬಳಿಯ ಮಾರ್ಕೋಪೋಲೊ ಕಂಪನಿಯಲ್ಲಿ ಈತ ಕೆಲಸ ಮಾಡುತ್ತಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.