ಧಾರವಾಡ

ಸಂಚಾರಿ ವಾಹನ ಮೂಲಕ ಅರ್ಜಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 17
ಮಹಾನಗರ ಪಾಲಿಕೆ ವ್ಯಾಪ್ತಿಯ ಘೋಷಿತ ಮಾರಾಟ ವಲಯದಲ್ಲಿ ಚಿಕ್ಕಪುಟ್ಟ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಸಂಚಾರಿ ವಾಹನ ಮೂಲಕ ಅರ್ಜಿಗಳನ್ನು ವಿತರಿಸುವ ಕಾರ್ಯಕ್ಕೆ ಬುಧವಾರ ಚಾಲನೆ  ನೀಡಲಾಯಿತು.
ಪಾಲಿಕೆ ವ್ಯಾಪ್ತಿಯ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಈಗಾಗಲೆ ನಗರ ಬೀದಿ ವ್ಯಾಪಾರ ರಾಷ್ಟ್ರೀಯ ನೀತಿ ಸಂಹಿತೆ ಅಡಿಯಲ್ಲಿ (ಃಛಡ್ಝ್ಟಿಟಿಛಟ ಕ್ಟಿಟ್ಝ್ಛಣ ಜ್ಟ್ಠಿ ್ಖ್ಠಛಿಛಟಿ ಖಡ್ಠಿಜಜಡಿ ಗಜಟಿಜ್ಟ್ಠಡ) ಅವಳಿನಗರದ ಚಿಕ್ಕಪುಟ್ಟ ವ್ಯಾಪಾರಸ್ಥರಿಗೆ ಘೋಷಿತ ಮಾರಾಟ ವಲಯಗಳಲ್ಲಿ ಅಗತ್ಯ ಮೂಲ ಸೌಲಭ್ಯ್ನ ಕಲ್ಪಿಸಲು ಕ್ರಮ ಜರುಗಿಸಲಾಗಿದೆ.
ಇದರನ್ವಯ ಘೋಷಿತ ಮಾರಾಟ ವಲಯಗಳಲ್ಲಿ ಚಿಕ್ಕಪುಟ್ಟ ವ್ಯಾಪಾರಸ್ತರಿಗೆ ಪಾಲಿಕೆಯಿಂದ ಸಂಚಾರಿ ವಾಹನದ ಮೂಲಕ ಅರ್ಜ್ನಿ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಅರ್ಜಿಗಳು ಉಚಿತವಾಗಿದ್ದು ಪಾಲಿಕೆಯಿಂದ ಗುರುತಿನ ಚಿಟಿ ಮತ್ತು ಪರವಾನಗಿ ಪಡೆಯಲು ರು. 100 ಶುಲ್ಕ್ನ ಸಂದಾಯ ಮಾಡಿ ನಿಗದಿತ ನಮೂನೆಯ ಅರ್ಜಿಯೊಂದಿಗೆ 4 ಪಾಸಪೋರ್ಟ್ ಸೈಜ್ ಪೋಟೋ, ಅರ್ಜಿದಾರರ ವಿಳಾಸ, ವ್ಯಾಪಾರದ ವಿವರ, ಗುರುತಿನ ದಾಖಲೆಗಳಾದ ಚುನಾವಣೆ ಗುರುತಿನ ಪತ್ರ ಅಥವಾ ಆಧಾರ ಕಾರ್ಡ ಅಥವಾ ಪಡಿತರ ಚಿಟಿ ಅಥವಾ ಇತರೆ ಯಾವುದಾದರು ಅಧಿಕೃತ ದಾಖಲೆ, ಮುಚ್ಚಳಿಕೆ ಪತ್ರ, ಕುಟುಂಬದ ಸದಸ್ಯರ ಮಾಹಿತಿ ದಾಖಲೆಗಳೊಂದಿಗೆ ಸಲ್ಲಿಸಲು ಕೋರಲಾಗಿದೆ. ಅರ್ಜಿದಾರರು ಮುಚ್ಚಳಿಕೆ ಪತ್ರದಲ್ಲಿ ಕರಾರುಗಳನ್ನು ನೀಡಲು ಕರಾರು ಪತ್ರದ ಅಂಶಗಳನ್ನ್ನು ಅರ್ಜಿಯೊಂದಿಗೆ ಒದಗಿಸಲಾಗಿದೆ.
ಅರ್ಜಿಗಳನ್ನು ಪಾಲಿಕೆಯ ಎಲ್ಲ ವಲಯ ಕಚೇರಿಗಳಲ್ಲಿ ಲಭ್ಯವಿದ್ದು ಸಂಚಾರಿ ಚಿಕ್ಕಪುಟ್ಟ ವ್ಯಾಪಾರಸ್ತರು ಅರ್ಜಿ ಪಡೆದು ಕೂಡಲೆ ಎಲ್ಲ ದಾಖಲೆಗಳೊಂದಿಗೆ ಸಂಬಂಧಪಟ್ಟ ವಲಯ ಕಚೇರಿಗೆ ಸಲ್ಲಿಸಲು ಕೋರಲಾಗಿದೆ ಮತ್ತು ಪಾಲಿಕೆಯಿಂದ ಸಂಚಾರಿ ವಾಹನ ವ್ಯವಸ್ಥೆಯ ಉಪಯೋಗವನ್ನು ಪಡೆಯಲು ಕೋರಲಾಗಿದೆ.
ಪಾಲಿಕೆ ವಲಯ ಕಚೇರಿ 5ರ ವ್ಯಾಪ್ತಿಯ ಲಿಂಗರಾಜನಗರ ಸಮುದಾಯ ಭವನ ಬಳಿ ಜರುಗಿದ ಸಂತೆಯ ಸಮಯದಲ್ಲಿ ಸಿಬ್ಬಂದಿಯೊಂದಿಗೆ ಪಾಲಿಕೆಯ ಸಂಚಾರಿ ವಾಹನ ಮೂಲಕ ಚಿಕ್ಕಪುಟ್ಟ ಸಂಚಾರಿ ವ್ಯಾಪಾರಸ್ಥರಿಗೆ ಗುರುತಿನ ಚಿಟಿ ಹಾಗೂ ಪರವಾನಿಗೆ ನೀಡಲು ಉಚಿತವಾಗಿ ಅರ್ಜಿಗಳನ್ನು ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.