ಸಜ್ಜನ ಗಾಯಕ ಪಂ. ಚಂದ್ರಶೇಖರ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 29
ಸದಾ ನಾದದಲ್ಲಿಯೇ ತಲ್ಲೀನರಾಗಿ ತುಂಬಿದ ಕೊಡವಾಗಿದ್ದ ಸಜ್ಜನ ಗಾಯಕ ಪಂ. ಚಂದ್ರಶೇಖರ ಪುರಾಣಿಕಮಠರು ಶುಚಿತ್ವವನ್ನೇ ಜೀವನದ ಉಸಿರಾಗಿ ತೊಟ್ಟು, ಬಾಳಿ ಬೆಳಗಿದ ಸಂಗೀತಗಾರರಾಗಿದ್ದರು ಎಂದು ಲೇಖಕ ಹಾಗೂ ಗಾಯಕ ಬಾಗಲಕೋಟೆಯ ಪ್ರೊ. ಸಿದ್ದರಾಮಯ್ಯ ಮಠಪತಿ ಅಭಿಪ್ರಾಯಿಸಿದರು.
ಪಂ. ಚಂದ್ರಶೇಖರ ಪುರಾಣಿಕಮಠ ಸ್ಮೃತಿ ಸಭಾದ ಆಶ್ರಯದಲ್ಲಿ ಇತ್ತೀಚೆಗೆ ಸಾಧನಕೇರಿಯ ಗುರುಕೃಪಾದಲ್ಲಿ ಜರುಗಿದ ಪಂ. ಪುರಾಣಿಕಮಠರ ಮೂರನೇ ಪುಣ್ಯ ಸ್ಮ ೃತಿಯ ಸಮಾರಂಭದಲ್ಲಿ ಮಾತನಾಡಿದರು. ಪುರಾಣಿಕಮಠರು ಒಬ್ಬ ವ್ಯಕ್ತಿಯಾಗಿದ್ದು, ಒಂದು ಬೃಹತ್ ವಿದ್ಯಾ ಸಂಸ್ಥೆ ಮಾಡುವಂತಹ ನೂರಾರು ಶ್ರೇಷ್ಠ ಸಂಗೀತ ಕಲಾವಿದ ಶಿಷ್ಯರ ಪಡೆಯನ್ನೇ ಈ ನಾಡಿಗೆ ಕೊಟ್ಟಿದ್ದಾರೆ. ಗುರುಗಳ ಶಿಷ್ಯ ವಾತ್ಸಲ್ಯ ಮತ್ತು ಬಿಡದ ಪರಿಶ್ರಮಗಳು ಎಲ್ಲ ಸಂಗೀತಗಾರರಿಗೂ ಮಾದರಿ ಎಂದರು.
ಬೆಳಗ್ಗೆಯಿಂದ ಸಂಜೆಯವರೆಗೆ ನಿರಂತರ ನಡೆದ ಸಂಗೀತ ಸೇವೆಯಲ್ಲಿ ಚಂದ್ರಶೇಖರ ಪುರಾಣಿಕಮಠರ ಶಿಷ್ಯಂದಿರಾದ ಸತ್ಯಚರಣ, ಪಂ. ಗಣಪತಿ ಭಟ್ಟ, ವಾಣಿಶ್ರೀ ಹೆಗಡೆ, ರಾಧಾ ದೇಸಾಯಿ, ಡಾ. ಶಾರದಾ ಭಟ್ಟ, ಗೀತಾ ಆಲೂರ, ಅರ್ಜುನ ವಠಾರ, ಡಾ. ಸುಮಿತ್ರಾ ಕಾಡದೇವರಮಠ, ಡಾ. ಸೌಭಾಗ್ಯಾ ಕುಲಕರ್ಣಿ, ಅಯ್ಯಪ್ಪಯ್ಯ ಹಲಗಲಿಮಠ ಮುಂತಾದವರು ಸಂಗೀತ ಪ್ರಸ್ತುತ ಪಡಿಸಿದರು.
ಗಜಾನನ ಹೆಗಡೆ ತಬಲಾ ಹಾಗೂ ಪರಶುರಾಮ ಕಟ್ಟಿಸಂಗಾವಿ ಹಾರ್ಮೋನಿಯಂ ಸಾಥ್ ನೀಡಿದರು. ಸಮಾರೋಪ ಸಮಾರಂಭದಲ್ಲಿ ಹಾರ್ಮೋನಿಯಂ ವಾದಕ ಪಂ. ವಸಂತ ಕನಕಾಪುರ ಅವರನ್ನು ಸತ್ಕರಿಸಲಾಯಿತು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಾಂತವ್ವ ಪುರಾಣಿಕಮಠ, ಕುಮಾರಸ್ವಾಮಿ ಪುರಾಣಿಕಮಠ ಇದ್ದರು.
ಬಳಿಕ ನಡೆದ ಹಿರಿಯರ ಸಂಗೀತ ಸಭೆಯಲ್ಲಿ ಪ್ರೊ. ಸಿದ್ದರಾಮಯ್ಯ ಮಠಪತಿ ಮತ್ತು ಶ್ರೀಧರ ಹೆಗಡೆ ಕಲಭಾಗ ಹಿಂದುಸ್ತಾನಿ ಸಂಗೀತ ಪ್ರಸ್ತುತಪಡಿಸಿದರು. ಗೋಪಾಲಕೃಷ್ಣ ಹೆಗಡೆ ತಬಲಾ, ವಾಮನ ವಾಘೂಕರ ಹಾರ್ಮೋನಿಯಂ, ಹೇಮಂತ ಲಮಾಣಿ ತಂಬೂರಾ ಸಾಥ್ ನೀಡಿದರು.
ಎಸ್.ಎಸ್. ಗುಡ್ಡದಮಠ, ಎಚ್.ಎ. ಕಟ್ಟಿ, ಶ್ರೀಕಾಂತ ಕುಲಕರ್ಣಿ, ಸೋಮಶೇಖರ ಮರಡಿಮಠ, ಅನಂತ ಥಿಟೆ, ರಾಮಣ್ಣ ಗೊಜನೂರ, ನಟರಾಜ ಉಪಾಧ್ಯ, ಬಸವರಾಜ ಕೆಂಡದಮಠ, ರಮೇಶ ಭಟ್ಟ, ವತ್ಸಲಾ ಕುಲಕರ್ಣಿ ಇದ್ದರು.
ಸ್ಮ ೃತಿ ಸಭಾದ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಟಿ. ಪರಾಂಜಪೆ ಸ್ವಾಗತಿಸಿದರು. ಡಾ. ಸೌಭಾಗ್ಯ ಕುಲಕರ್ಣಿ ಪರಿಚಯಿಸಿದರು. ಅಶೋಕ ಜೋಶಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

