ಕಂಪ್ಯೂಟರ್ ಉಚಿತ ತರಬೇತಿ
ಧಾರವಾಡ: ಕಂಪ್ಯೂಟರ್ ತರಬೇತಿ ಹಾಗೂ ಸಾಫ್ಟ್‌ವೇರ್ ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇಲ್ಲಿನ ಎಚ್‌ಕೆಎನ್‌ಜಿಟೆಕ್ ಸಂಸ್ಥೆ ಧಾರವಾಡ ಭಾಗದ ಕಂಪ್ಯೂಟರ್ ಕಲಿಕಾ ಅಭ್ಯರ್ಥಿಗಳಿಗೆ ನೂತನ ಯೋಜನೆ ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗೆ ಓಸವಾಲ್ ಟಾವರ್‌ನ ಕಚೇರಿ (ದೂ. 0836-2746455) ಸಂಪರ್ಕಿಸಬಹುದು ಎಂದು ಮಂಜುನಾಥ ಭಟ್ ತಿಳಿಸಿದ್ದಾರೆ.
ವಾಹನ ಕಳ್ಳತನ: ಬಂಧನ
ಧಾರವಾಡ: ದ್ವಿಚಕ್ರ ವಾಹನ ಕಳ್ಳತನ ಮಾಡಿದ ಆರೋಪದ ಮೇಲೆ ಇಲ್ಲಿನ ಶಹರ ಠಾಣೆಯ ಪೊಲೀಸರು ಮಂಗಳವಾರ ರಾತ್ರಿ ಓರ್ವನನ್ನು ಬಂಧಿಸಿದ್ದಾರೆ. ತಾಲೂಕಿನ ಹೊಲ್ತಿಕೋಟಿ ಗ್ರಾಮದ ಶಂಕರ ಅಮ್ಮಣ್ಣವರ ಬಂಧಿತ ಆರೋಪಿಯಾಗಿದ್ದು, ಆತನಿಂದ ಸುಮಾರು 1 ಲಕ್ಷ ಮೌಲ್ಯದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಕೊಂಡಿದ್ದಾರೆ. ಆರೋಪಿ ಗೋವಾ, ಬಳ್ಳಾರಿ ಮತ್ತು ಧಾರವಾಡದಲ್ಲಿ ಪಾರ್ಕಿಂಗ್ ಮಾಡಿದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕನ ಮುಖಕ್ಕೆ ಆ್ಯಸಿಡ್: ಬಂಧನ
ಹುಬ್ಬಳ್ಳಿ: ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಮುಖಕ್ಕೆ ಆ್ಯಸಿಡ್ ಎರಚಿ ವಿರೂಪಗೊಳಿಸಿದ ಆರೋಪಿಯನ್ನು ಕಮರಿಪೇಟೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಹುಬ್ಬಳ್ಳಿಯ ನಜೀಮಾ ಎಂಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಹ್ಮದ್ ಷರೀಪ್ ಎಂಬ ಯುವಕನ ಮುಖಕ್ಕೆ ಪಡದಯ್ಯನ ಹಕ್ಕಲದ ಅಬ್ದುಲ್ ಗನಿ ಕೆಲವು ದಿನಗಳ ಹಿಂದೆ ಆ್ಯಸಿಡ್ ಎರಚಿದ್ದನು. ತಾನು ಪ್ರೀತಿಸುತ್ತಿದ್ದ ನಜೀಮಾಳೊಂದಿಗೆ 8 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಹ್ಮದ್ ಷರೀಫನ ಮುಖ ವಿರೂಪಗೊಳಿಸಿದರೆ ಯುವತಿ ತನಗೆ ದಕ್ಕುತ್ತಾಳೆ ಎಂಬ ದುರಾಲೋಚನೆಯಿಂದ ಜು. 22ರಂದು ತನ್ನ ಸ್ನೇಹಿತ ಗುಡುಸಾಬ್ ಫಕ್ರುಸಾಬ್ ಮುಲ್ಲಾ ಅವನೊಂದಿಗೆ ಸೇರಿಕೊಂಡು ನಡೆದುಕೊಂಡು ಹೋಗುತ್ತಿದ್ದ ಮಹ್ಮದ್ ಮುಖದ ಮೇಲೆ ಆ್ಯಸಿಡ್ ಎರಚಿದ್ದನು.
ಕುಡಿದ ಮತ್ತಿನಲ್ಲಿ ಹಲ್ಲೆ
ಹುಬ್ಬಳ್ಳಿ: ನೆಹರು ಮೈದಾನ ಹತ್ತಿರದ ಪಾರ್ಕ್‌ಲೇನ್ ಹೋಟೆಲ್‌ನಲ್ಲಿ ಸಾರಾಯಿ ಕುಡಿದ ವ್ಯಕ್ತಿಗಳಿಬ್ಬರು ಹೋಟೆಲ್ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಾರ್ಕ್‌ಲೇನ್ ಹೋಟೆಲ್‌ನಲ್ಲಿ ತಡರಾತ್ರಿಯವರೆಗೂ ಸಾರಾಯಿ ಕುಡಿಯುತ್ತ ಕುಳಿತಿದ್ದ ಅಲ್ತಾಫ್ ಕಿತ್ತೂರು ಮತ್ತು ಜಫರಲಿ ಹೆಬ್ಬಳ್ಳಿ ಸೇರಿಕೊಂಡು ಹೋಟೆಲ್ ಮ್ಯಾನೇಜರ್ ಕುಮಾರ್ ಮಾರಯ್ಯ ಅವರ ಮೇಲೆ ಹಲ್ಲೆ ಎಸಗಿದ್ದಾರೆ.
ಬೈಕ್ ಕಳ್ಳತನ: ದೂರು
ಹುಬ್ಬಳ್ಳಿ: ಕೇಶ್ವಾಪುರದ ಶಾಂತಲಾ ಬಾರ್ ಎದುರು ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ ಎಂದು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನವಲಗುಂದ ಪಟ್ಟಣದ ಬಸುವಾರ ಲೋಕಪ್ಪ ಗುಡಿಸಲಮನಿ ಅವರು ನಿಲ್ಲಿಸಿದ್ದ ಬೈಕ್‌ನ್ನು ಮುಕ್ತಿಯಾರ್ ರಫಿಕ್ ಸಾಬ್ ಉಣಕಲ್ ಎಂಬ ವ್ಯಕ್ತಿ ಕಳ್ಳತನ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

