ಪಾಸ್ಪೋರ್ಟ್ ಅಕ್ರಮ: ಬಂಧನ
ಹುಬ್ಬಳ್ಳಿ: ನಕಲಿ ಜನ್ಮ ದಿನಾಂಕ ಸೃಷ್ಟಿಸಿ ಪಾಸ್ಪೋರ್ಟ್ ಪಡೆದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನ ವಿರುದ್ಧ ಪಾಸ್ಪೋರ್ಟ್ ಇಲಾಖೆ ಅಧಿಕಾರಿಗಳು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪಿಂಟೋ ರಸ್ತೆ ನಿವಾಸಿ ರಿಯಾಜ್ಅಹ್ಮದ ಅಬ್ದುಲ್ರಹೀಮ್ ಶೇಖ ಎಂಬುವನೇ ಆರೋಪಿ.
ಪಾಸ್ಪೋರ್ಟ್ ಪಡೆಯಲು ಅನುಕೂಲವಾಗಲೆಂಬ ಉದ್ದೇಶದಿಂದ ರಿಯಾಜ್ಅಹ್ಮದ, ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿ ನಮೂದಿಸಲಾಗಿದ್ದ ಜನ್ಮ ದಿನಾಂಕ ಎಪ್ರಿಲ್9, 1965 ಅನ್ನು ಎಪ್ರಿಲ್ 9, 1961ರಂದು ತಿದ್ದುಪಡಿ ಮಾಡಿದ್ದಾನೆ ಎಂದು ಪಾಸ್ಪೋರ್ಟ್ ಅಧಿಕಾರಿಗಳು ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೈಕ್ ಕಳ್ಳತನ: ಸ್ಟೇಶನ್ ರಸ್ತೆಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರವಾಹನವೊಂದನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಬಗ್ಗೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೇತನಾ ಕಾಲನಿ ನಿವಾಸಿ ಕೆ. ಲಾಗನ್ ವಿ. ಕಣ್ಣನ್ ಎಂಬುವರೆ ವಾಹನ ಕಳೆದುಕೊಂಡವರು. ಈ ಕುರಿತು ಪ್ರಕರಣ ದಾಖಲಾಗಿದೆ.
ಸ್ಪೀರಿಟ್ ವಶ: ಪಾಸ್ ಹಾಗೂ ಪರ್ಮಿಟ್ ಇಲ್ಲದೆ 140 ಲೀಟರ್ ಸ್ಪೀರಿಟ್ ತುಂಬಿದ ಕ್ಯಾನ್ಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿರುವುದನ್ನು ಬೆಂಡಿಗೇರಿ ಠಾಣೆ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೆಟ್ಲಮೆಂಟ್ ಪ್ರದೇಶದ ಶಾಂತಿನಿಕೇತನ ಕಾಲನಿ ನಿವಾಸಿ ತಿಪ್ಪಣ್ಣ ಫಕ್ಕಿರಪ್ಪ ಅವಿನಾಳ ಎಂಬುವನೇ ಮನೆಯಲ್ಲಿ ಅಕ್ರಮವಾಗಿ ಸ್ಪೀರಿಟ್ ಸಂಗ್ರಹಿಸಿಟ್ಟುಕೊಂಡ ಆರೋಪಿ. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಹೊಡೆದಾಟ: ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರು ವ್ಯಕ್ತಿಗಳ ಮಧ್ಯೆ ನಡೆದ ಹೊಡೆದಾಟ ವಿಕೋಪಕ್ಕೆ ತಿರುಗಿ ಜೀವ ಬೆದರಿಕೆ ಹಾಕಿದ ಘಟನೆ ಹಳೆಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿವಶಂಕರ ಕಾಲನಿ ನಿವಾಸಿ ಸಂದೀಪ ಅಶೋಕ ಭರಣಿ ಎಂಬುವನೇ ತಮ್ಮ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಅದೇ ಪ್ರದೇಶದ ದಾವಲ ನಾಗರಾಜ ಸಿಕ್ಕಲಗೇರ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ. ಆರೋಪಿ ಸಂದೀಪ, ಸಾರಾಯಿ ಕುಡಿಸುವಂತೆ ತಮಗೆ ಒತ್ತಾಯಿಸಿದ್ದು ಅದಕ್ಕೆ ತನ್ನ ಬಳಿ ಹಣವಿಲ್ಲ ಎಂದು ಹೇಳಿದಕ್ಕೆ ಆಕ್ರೋಶಗೊಂಡು ಕಟ್ಟಿಗೆಯಿಂದ ಹೊಡೆದಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾನೆ ಎಂದು ದಾವಲ ದೂರಿನಲ್ಲಿ ತಿಳಿಸಿದ್ದಾನೆ. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

