ಅಧಿಕಾರಿಗಳ ದಾಳಿ: ಗುಟ್ಕಾ ವಶ
ಹುಬ್ಬಳಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ನಗರದ ವಿವಿಧೆಡೆ ದಾಳಿ ನಡೆಸಿ ಗುಟ್ಕಾ ಚೀಟ್ಗಳನ್ನು ವಶಪಡಿಸಿಕೊಂಡರು.
ಶೀಲವಂತರ ಓಣಿ, ಬಾರಾದಾನ ಗಲ್ಲಿ, ಸಿಂಪಿಗಲ್ಲಿ, ಎಂ.ಜಿ. ಮಾರ್ಕೆಟ್, ದಾಜಿಬಾನ ಪೇಟ, ಸರಾಫ್ ಗಟ್ಟಿ, ಘಂಟಿಕೇರಿ, ಸುಪರ್ ಮಾರ್ಕೆಟ್ ಮತ್ತಿತರ ಪ್ರದೇಶಗಳಲ್ಲಿ ದಾಳಿ ನಡೆಸಿದ ತಂಡ, ಗುಟ್ಕಾ ಚೀಟ್ಗಳನ್ನು ವಶಕ್ಕೆ ತೆಗೆದುಕೊಂಡಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎನ್.ಎಂ. ಅಂಗಡಿ ಮತ್ತು ಜಿಲ್ಲಾ ಅಂಕಿತ ಅಧಿಕಾರಿ ಡಾ. ಬಬ್ರುವಾಡ ಇವರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಾದ ಸಿ.ಬಿ. ಬೆಂಗೇರಿ, ಪ್ರಕಾಶ ಮಲ್ಲಾಪುರ ಹಾಗೂ ಬಾಸೂರ ಪಾಲ್ಗೊಂಡಿದ್ದರು.
ಸಾರ್ವಜನಿಕ ಹಿತದೃಷ್ಟಿಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನ್ನು ತಡೆಗಟ್ಟಲು ಮುಂದಿನ ದಿನಗಳಲ್ಲಿ ಗುಟ್ಕಾ ಮಾರಾಟ ಮಾಡದಂತೆ ಡಿಎಚ್ಓ ಎಚ್ಚರಿಸಿದ್ದು, ಕಾನೂನು ನಿಷೇಧ ಮೀರಿ ಈ ರೀತಿ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳ್ನಿ ಮುಂದುವರೆಸಲಾಗುದು. ಆದಕಾರಣ ಗುಟ್ಕಾ ನಿಷೇಧಕ್ಕೆ ಸಾರ್ವಜನಿಕರು ಸಹಕರಿಸುವಂತೆ ಕೋರಿದರು.
ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರನ್ವಯ ಭಾರತ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ನಿಷೇಧ ಮತ್ತು ಮಾರಾಟ ನಿರ್ಬಂಧ) ನಿಬಂಧನೆಗಳ ಮೇರೆಗೆ ತಂಬಾಕು ಮತ್ತು ನಿಕೋಟಿನ ಘಟಕಗಳನ್ನೊಳಗೊಂಡ ಆಹಾರ ಪದಾರ್ಥ್ನ ನಿಷೇಧಿಸಲಾಗಿದೆ. ಗುಟ್ಕಾ ಮತ್ತು ಪಾನ್ಮಸಾಲ ತಂಬಾಕು ಮತ್ತು ನಿಕೋಟಿನ ಘಟಕಾಂಶಗಳನ್ನು ಒಳಗೊಂಡ ಪದಾರ್ಥಗಳಾಗಿದ್ದು, ಸಾರ್ವಜನಿಕರು ಅದರಲ್ಲೂ ಯುವ ಜನಾಂಗ ಈ ನಿಷೇಧದ ಬಗ್ಗೆ ಜಾಗೃತರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

